ಅಕ್ರಮವಾಗಿ ಮರಂ ಸಾಗಾಣಿಕೆ, ಕಾನೂನು ಕ್ರಮಕ್ಕೆ : ಡಿಎಸ್ಎಸ್ ಮನವಿ
ಮಸ್ಕಿ : ಸರ್ಕಾರಿ ಮತ್ತು ಖಾಸಗಿಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ, ಮಣ್ಣು ಸಾಗಾಟ ಮಾಡಿದವರ ವಿರುದ್ದ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ
ಅವರನ್ನು ಅಮಾನತ್ತು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಾ.ಎನ್ ಮೂರ್ತಿ ಸ್ಥಾಪಿತ) ತಾಲೂಕು ಸಂಘಟನೆ ತಹಶೀಲ್ದಾರ ಮುಖಾಂತರ ಕಂದಾಯ ಇಲಾಖೆ ಸಚಿವರಿಗೆಮನವಿಯನ್ನು ಸಲ್ಲಿಸಿದರು.
ತಾಲೂಕಿನ ಮೆದಿಕಿನಾಳ ಗ್ರಾಮದ ಸರ್ಕಾರಿ ಜಮೀನು ಸರ್ವೇ ನಂಬರ 15/*/1 ರಲ್ಲಿ ಒಟ್ಟು 10 ಎಕರೆ 28 ಗುಂಟೆ ಜಮೀನು ಇದ್ದು, ಭೂಮಿ ಸುತ್ತ ಮುತ್ತ ಗ್ರಾಮಗಳಿಗೆ ದನಕರುಗಳಿಗೆ ಹಾಗೂ ಕುರಿ-ಮೇಕೆಗಳಿಗೆ ಮೆಯಿಸಲು ಈ ಜಮೀನು ಆಸರೆಯಾಗಿದೆ. ಈ ಜಮೀನಿನಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇದರಲ್ಲಿ ದನಕರುಗಳು ಮೇಯಿಸಲು ಹೋದಾಗ ಗುಂಡಿ ಒಳಗೆ ಬಿದ್ದರೆ ಮೇಲೆ ಬರಲು ಸಾಧ್ಯವಿಲ್ಲ.
ದನಕರುಗಳು ಮೇಯಿಸಲು ಇರುವ ಜಮೀನನ್ನೇ ಹಗೆದಿರುವ ಭೂಗಳ್ಳರು ಯಾವುದೇ ಅನುಮತಿ ಇಲ್ಲದೇ, ಮಣ್ಣು ಮಾರಾಟ ಮಾಡಿ ಅಲ್ಲಿ ಬೆಳೆದ ಗಿಡಗಳನ್ನು ನಾಶ ಮಾಡಿ ಪರಿಸರವನ್ನು ನಾಶ ಮಾಡಿದ್ದಾರೆ.
ಸರ್ವೇ ನಂಬರ 15/*/2 ರಲ್ಲಿ 7 ಎಕರೆ 12 ಗುಂಟೆ ಸೇರಿದ ಜಮೀನಿನಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಗಣಿಗಾರಿಕೆಯನ್ನು ಮಾಡುತ್ತಿದ್ದಾರೆ.
ಅಕ್ರಮವಾಗಿ ಮಣ್ಣು ಗಣಿಗಾರಿಕೆ ಯಲ್ಲಿ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಅಕ್ರಮ ದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಕಾನೂನು ಕ್ರಮ ಜರುಗಿಸಿ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಇಲ್ಲವಾದರೆ ಮುಂದೆ ಅಧಿಕಾರಿಗಳ ವಿರುದ್ಧಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ನಮ್ಮ ಸಂಘಟನೆ ಎಚ್ಚರಿಸುತ್ತದೆ ಎಂದು ಆಗ್ರಹಿಸಿದರು.
ಈ ವೇಳೆ, ರಡ್ಡೆಪ್ಪ ಕೆಲ್ಲೂರು,ಬಸವರಾಜ ಮ್ಯಾಗಳ ಮನೆ,ರವಿ ಉದ್ಬಾಳ,ದ್ಯಾಮಣ್ಣ ಸಂತೆಕೆಲ್ಲೂರು,ರಮೇಶ ನಾಯಕ,ಬಿ.ಬಸಲಿಂಗಪ್ಪ, ಕನಕಪ್ಪ ಕುಣಿಕೆಲ್ಲೂರು,ಬಸಲಿಂಗಪ್ಪ ನಾಯಕ,ಅಮರೇಶ ಭೋವಿ, ಸೇರಿದಂತೆ ಇತರೆ ಪದಾಧಿಕಾರಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ