ಹಗಲುವೇಷ ಕಲಾವಿದರಿಂದ ವಿಶ್ವ ಜಾನಪದ ದಿನ ಸಂಭ್ರಮಾಚರಣೆ
ಮಸ್ಕಿ: ಜಾನಪದ ಕಲೆ ನಮ್ಮ ಪೂರ್ವಜರಿಂದ ನಮಗೆ ಬಂದ ಬಳುವಳಿ, ಇದನ್ನು ಉಳಿಸಿಕೊಂಡು ಹೋಗುವುದು ಈಗಿನ ಯುವಪೀಳಿಗೆಯ ಜವಾಬ್ದಾರಿ ಎಂದು ನಿವೃತ್ತ ಶಿಕ್ಷಕ ಚನ್ನಬಸಪ್ಪ ಅಭಿಪ್ರಾಯ ಪಟ್ಟರು.ತಾಲೂಕಿನ ಗುಡದೂರು ಗ್ರಾಮದ ಶ್ರೀ ಕೆರೆಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಹಾಗೂ ಜಾನಪದ ಸಾಂಸ್ಕೃತಿಕ ಟ್ರಸ್ಟ ಹಸಮಕಲ್ ಇವರ ಸಹಯೋಗದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಜಾನಪದ ಎನ್ನುವುದು ಮೂಲತಃ ಜನರ ಮುಖಾಂತರ ನುಡಿಯಾಗಿ ಬಂದಿರುವುದೇ ಜಾನಪದ ವಾಗಿದೆ. ಈ ಜಾನಪದ ಕಲೆ ಎಂಬುದು ನಶಿಸಿ ಹೋಗಬಾರದು ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತಾಗಬೇಕು. ಜಾನಪದ ಎನ್ನುವುದು ಮನಸ್ಸಿನ ಆರೋಗ್ಯಕ್ಕೆ ಔಷಧಿ ಇದ್ದಂತೆ ಇದು ನಮ್ಮ ಜೀವನದ ಬದುಕಿನ ಒಂದು ಭಾಗ ಈ ಕಲೆಯನ್ನು ಹೀಗೆ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ನಂತರ ಹಲವು ಜಾನಪದ ಕಲಾತಂಡಗಳು ಪ್ರದರ್ಶನ ನೀಡದವು. ಇದೇ ಸಂದರ್ಭದಲ್ಲಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಚನ್ನಪ್ಪ ಸಾಹುಕಾರ, ಗ್ರಾ.ಪಂ. ಸದಸ್ಯರಾದ ಶ್ರೀ ಚಂದ್ರಗೌಡ ಪೋಲಿಸ್ ಪಾಟಿಲ್, ನೀಲಮ್ಮ ಮಾಲಿಪಾಟೀಲ್, ಲಿಂಗಮ್ಮ ಜುಮ್ಲಾಪುರ, ಬಸಪ್ಪ, ಮಾಜಿ ಸೈನಿಕರು, ಅಧ್ಯಕ್ಷರಾದ ತಿರುಪತಿ ಮಾಲಿಪಾಟೀಲ್, ಕ.ಜಾ ಅಕಾಡೆಮಿ ಸದಸ್ಯರಾದ ರಂಗಪ್ಪ ಮಾಸ್ತರ ತಡಕಲ್ ಮಾಜಿ ಕ.ಜಾ.ಅಕಾಡೆಮಿ ಸದಸ್ಯ ನಾರಾಯಣಪ್ಪ ಮಾಡಶಿರವಾರ, ಬಹುರೂಪಿ ಚೌಡಯ್ಯ ಟ್ರಸ್ಟ ನ ಅಧ್ಯಕ್ಷರಾದ ಅಮರೇಶ ಹಸಮಕಲ್ ಮತ್ತು ಜಾನಪದ ಸಾಂಸ್ಕೃತಿಕ ಟ್ರಸ್ಟ ನ ಕಾರ್ಯದರ್ಶಿಯಾದ ಹನುಮಂತ ಹಸಮಕಲ್ ಸೇರಿದಂತೆ ಊರಿನ ಎಲ್ಲಾ ಗಣ್ಯ ಮಾನ್ಯರು ಸೇರಿದಂತೆ ಇನ್ನಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ