ಕೊಟ್ಟೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಪಕ್ಷೇತರ ಸದಸ್ಯೆ ರೇಖಾ, ಉಪಾಧ್ಯಕ್ಷರಾಗಿ ಸಿದ್ದಯ್ಯ ಅವಿರೋಧ ಆಯ್ಕೆ
ಕೊಟ್ಟೂರು ಪಟ್ಟಣ ಪಂಚಾಯಿತಿ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಯಿತು
ಕೊಟ್ಟೂರು ಹಲವು ದಿನಗಳಿಂದ ಮುಂದೂಡಲ್ಪಟ್ಟಿದ್ದ ಕೊಟ್ಟೂರು ಪಟ್ಟಣದ ಪಂಚಾಯಿತಿಯ ೨ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ತಹಸಿಲ್ದಾರ್ ನೇತೃತ್ವದಲ್ಲಿ ಶನಿವಾರ ನಡೆಯಿತು. ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜನರಲ್ ಮೀಸಲಾತಿ ನಿಗದಿಯಾಗಿತ್ತು. ಕಾಂಗ್ರೆಸ್‌ನಿಂದ ೯ ಜನ ಸದಸ್ಯರು ಆಯ್ಕೆಯಾಗಿ, ಪರಿಶಿಷ್ಟ ಜಾತಿ ಜನಾಂಗದವರಿದ್ದರೂ ಸಹ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರರಾಗಿ ಗೆದ್ದಿರುವ ರೇಖಾ ಅವರು ಆಯ್ಕೆಯಾಗುವ ಮೂಲಕ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ರೇಖಾರವರಿಗೆ ಸೂಚಕರಾಗಿ ೧೧ನೇ ವಾರ್ಡ್‌ನ ಸದಸ್ಯೆ ಕೆ.ಸಾವಿತ್ರಮ್ಮ ಸೂಚಕರಾಗಿದ್ದರೆ, ೧೫ನೇ ವಾರ್ಡ್‌ನ ಸದಸ್ಯೆ ಕೆ. ಲಕ್ಷ್ಮೀ ಅನುಮೋದಕರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ.ಯ ಸಿದ್ದಯ್ಯನವರಿಗೆ ೭ನೇ ವಾರ್ಡ್‌ನ ಬಿಜೆಪಿ ಸದಸ್ಯ ಕೆ.ಎಸ್. ಈಶ್ವರಗೌಡ ಸೂಚಕರಾದರೆ, ೮ನೇ ವಾರ್ಡ್ ಬಿಜೆಪಿ ಸದಸ್ಯ ಬೋರ್‌ವೆಲ್ ತಿಪ್ಪೇಸ್ವಾಮಿ ಅನುಮೋದಕರಾಗಿದ್ದರು. ಒಟ್ಟಿನಲ್ಲಿ ಅಧ್ಯಕ್ಷ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದು ಚುನಾವಣೆ ಪ್ರಕ್ರಿಯಲ್ಲಿ ೨೦ ಒಟ್ಟು ಸದಸ್ಯರ ಪೈಕಿ ೧೬ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು ನಾಲ್ವರು ಸದಸ್ಯರುಗಳು ಗೈರು ಹಾಜರಾಗಿದ್ದರು ಎಂದು ತಿಳಿಸಿದರು. ಮುಂದಿನ ೧೫ ತಿಂಗಳಗಳ ಕಾಲ ಅವದಿಗೆ ಚುನಾವಣೆ ಪ್ರಕರಿಯತ ಶನಿವಾರ ಬಿಗಿಯಾದ ಪೋಲೀಸ್ ಬಂದೋಬಸ್ತ್ ನಡುವೆ ಶಾಂತಿಯುತವಾಗಿ ನಡೆಯಿತು. ಡಿ.ವೈ .ಎಸ್.ಪಿ ಮಲ್ಲೇಶ್ ಮಲ್ಲಾಪುರ ನೇತ್ರತ್ವದಲ್ಲಿ ಪೊ?ಲೀಸ್ ಬಂದೋಬಸ್ತ್ ಪಟ್ಟಣ ಪಂಚಾಯಿತಿಯ ಕಛೇರಿಯ ಸುತ್ತಮುತ್ತಲೂ ಕಾವಲಿತ್ತು
ಕೋಟ್-೧
ಜಿಲ್ಲಾಧ್ಯಕ್ಷರ ಗಮನಕ್ಕೆ ತರದೇ ಕಾಂಗ್ರೆಸ್ ಪಕ್ಷದ ಸದಸ್ಯರು ಇದ್ದರೂ ಪಕ್ಷೇತರ ಸದಸ್ಯೆಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿರುವ ವಿಷಯ ನನ್ನ ಗಮನಕ್ಕೆ ಬಂದಿರುವುದಿಲ್ಲ. ಅಲ್ಲದೇ ಪಕ್ಷೇತರ ಸದಸ್ಯರು ಅಧಿಕೃತವಾಗಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದಿಲ್ಲ. ಈ ವಿಷಯವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು.
ಶಿರಾಜ್ ಶೇಖ್, ವಿಜಯನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಕೋಟ್-೨
ಕಾಂಗ್ರೆಸ್ ಪಕ್ಷದಿಂದ ಗೆದ್ದರೂ ನನ್ನನ್ನೂ ಪರಿಗಣಿಸದೆ ಪಕ್ಷೇತರ ಸದಸ್ಯೆಗೆ ಮಣಿ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ.ಇದರ ಬಗ್ಗೆ ಪಕ್ಷದ ವರಿಷ್ಟರ ಗಮನಕ್ಕೆ ದೂರು ಸಲ್ಲಿಸುವುದಾಗಿ ೫ ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಹನುಮವ್ವ ಹೇಳಿದ್ದಾರೆ.
ಹನುಮವ್ವ, ಕಾಂಗ್ರೆಸ್ ಪ.ಪಂ. ಸದಸ್ಯೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ