ಗೊಂಡಬಾಳಗ್ರಾಮ ಪಂಚಾಯಿತಿಯಲ್ಲಿ ಅದ್ದೂರಿಯಾಗಿ ಸ್ವಾತಂತ್ರೋತ್ಸವ ಆಚರಣೆ
ವರದಿ - ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ: - ತಾಲೂಕಿನ ಗೊಂಡಬಾಳ ಗ್ರಾಮ ಪಂಚಾಯತಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಿ .ಆರ್. ಅಂಬೇಡ್ಕರ್ ಹಾಗೂ ಮಹಾತ್ಮಗಾಂಧಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹನವನ್ನು ನೆರವೇರಿಸಿ ರಾಷ್ಟ್ರಗೀತೆಯೊಂದಿಗೆ ಸ್ವಾತಂತ್ರ್ಯ ಯೋಧರಿಗೆ ನಮನ ಸಲ್ಲಿಸಲಾಯಿತು .
ಸ್ವಾತಂತ್ರ್ಯೋತ್ಸವ ಅಂಗವಾಗಿ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಜನನ - ಮರಣ ಪ್ರಮಾಣ ಪತ್ರ ಹಾಗೂ ಭಾಗ್ಯಲಕ್ಷ್ಮಿ ಬಾಂಡ್ ಗಳನ್ನು ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಮಾಡಿರುವ ಶ್ರೀ ಗವಿಸಿದ್ದೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಸಂಕಲ್ಪ ತಂಡದವರಿಗೆ ಹಾಗೂ ಪತ್ರಕರ್ತರಾದ ಮಂಜುನಾಥ ಕೋಳೂರು, ಉದಯ ತೋಟದ ಅವರಿಗೆ ಗೌರವ ಪೂರಕ ಸನ್ಮಾನಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮುದ್ದಪ್ಪ ದೇವರಮನಿ , ಉಪಾಧ್ಯಕ್ಷರಾದ ಸುಶೀಲಮ್ಮ ಬಳಗಾನೂರು, ಸದಸ್ಯರಾದ ಪಂಪಾಪತಿ ಹಳ್ಳಿಗುಡಿ, ರೇಣುಕಾ ತಳವಾರ, ರೇಣುಕಮ್ಮ ಗೊರ್, ಈರಪ್ಪ ಮಾಳೆಕೊಪ್ಪ, ಶಂಕ್ರವ್ವ ಹಡಪದ, ದೀಪ ಇಮಾದರ್, ಸೋಮಶೇಖರಯ್ಯ ಇಮಾದರ್, ಸುಗಂದವ್ವ ಸೋಮಜರ್, ಕೊಟ್ರೇಶ್ ಹಳ್ಳಿಕೇರಿ, ರೇಣವ್ವ ತಳವಾರ್, ದೊಡ್ಡ ಖಾಸಿಮ್ ಸಾಬ್ ಅಂಗಡಿ, ಗಂಗವ್ವ ಚನ್ನದಾಸರ, ಬಸವರಾಜ ಹೂಗಾರ್, ಮಂಜುಳಾ ಪೊಲೀಸ್ ಪಾಟೀಲ್, ಫಕೀರಪ್ಪ ದೊಡ್ಡಮೈಲಪ್ಪ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಬಿ, ಕಾರ್ಯದರ್ಶಿ ಗವಿಸಿದ್ದಯ್ಯ ಗಂಧದ , ಕರ ವಸೂಲಿಗಾರ ಮಹೇಶ್ ಹಳ್ಳಿಕೇರಿ ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗ , ಊರಿನ ಗುರು ಹಿರಿಯರು ಹಾಗೂ ಶಾಲಾ ಮಕ್ಕಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು, ಎಸ್. ಡಿ.ಎಂ.ಸಿ. ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ