ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮುದಾಯ ಒಂದೇ ತಾಯಿಯ ಮಕ್ಕಳು : ಬಿ.ಮೌನೇಶ
ಮಸ್ಕಿ : ಬಳಗಾನೂರ ಪಟ್ಟಣದ ಪೋಲಿಸ್ ಠಾಣಾ ಆವರಣದಲ್ಲಿ ಎಸ್ಸಿ ಎಸ್ಟಿ ಸಭೆಯೂ ಯಶಸ್ವಿಯಾಗಿ ಜರುಗಿತು.
ಸಭೆಯಲ್ಲಿ ಮಾತನಾಡಿದ ಬಿ. ಮೌನೇಶ ಬಳಗಾನೂರ ರವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯ ಒಂದೇತಾಯಿಯ ಮಕ್ಕಳಿದ್ದಂತೆ ಇಲ್ಲಿ ಈ ಎರಡು ಸಮುದಾಯಗಳ ನಡುವೆ ಇದುವರೆಗೆ ಯಾವುದೇ ಭಿನ್ನಾಭಿಪ್ರಾಯ ಬಂದಿಲ್ಲ. ಮತ್ತು ನಮ್ಮೆರಡು ಸಮುದಾಯದ ಮೇಲೆ ಬೇರೆ ಬೇರೆ ವರ್ಗದವರು ನಮ್ಮ ಇಬ್ಬರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ನಮ್ಮಗಳ ಮದ್ಯ ಜಗಳ ಹಚ್ಚುವ ಹುನ್ನಾರ ನಡೆಸುತ್ತಿದ್ದಾರೆ ಇದು ಖಂಡನೀಯ.ಕೋಮು ಭಾವನೆಯನ್ನು ತೊಡೆದು ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಿದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ.ಕಾನೂನು ಎಲ್ಲರಿಗೂ ಒಂದೇ. ಕಾನೂನಿಗೆ ಎಲ್ಲರೂ ತಲೆ ಭಾಗಲೇಬೇಕು. ಮತ್ತು ಎಸ್. ಸಿ. ಎಸ್. ಟಿ. ಸಮುದಾಯ ಸರ್ಕಾರದ ಸೌಲಭ್ಯ ಮತ್ತು ಕಾನೂನನ್ನು ದುರುಪಯೋಗ ಮಾಡಿಕೊಳ್ಳದೆ ಸದ್ಭಳಕೆಮಾಡಿಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆರಕ್ಷಕ ಉಪನಿರೀಕ್ಷಕರಾದ ಯರಿಯಪ್ಪ ಅಂಗಡಿ. ವೀರೇಶ, ಪೇದೆಗಳಾದ ರೇವಣಸಿದ್ದಪ್ಪ, ರಮೇಶ ನಾಯಕ, ವೆಂಕಟೇಶ್, ಮಂಜುನಾಥ್. ಊರಿನ ಪ್ರಮುಖರು ಮತ್ತು ಎಸ್. ಸಿ. ಎಸ್. ಟಿ. ಸಮುದಾಯ ಮುಖಂಡರು ಇನ್ನಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ