ಗ್ಯಾಸ್ ಸಿಲೆಂಡರ್ ಬಳಕೆ ಗ್ರಾಹಕರ ಸುರಕ್ಷಾ ಜಾಗೃತಿ — ಚೇತನ್ ಕುಮಾರ
ವರದಿ - ಮಂಜುನಾಥ ಕೋಳೂರು ಕೊಪ್ಪಳ
ಕೊಪ್ಪಳ : ರಾಜ್ಯದಲ್ಲಿ ಸಿಲಿಂಡರ್ ಅಕ್ರಮ ದಂಧೆ ವ್ಯಾಪಕವಾಗಿದ್ದು ಸಿಲಿಂಡರ್ ಬಳಕೆದಾರರು ಜಾಗೃತಿಯಿಂದ ಸಿಲಿಂಡರಗಳನ್ನು ಪಡೆಯುವುದರ ಜೊತೆಗೆ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಡಿಕೆಎಫ್ ರಾಜ್ಯ ವಿಭಾಗದ ಮುಖ್ಯಸ್ಥ ಚೇತನ್ ಕುಮಾರ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜಿಡಿಕೆಎಫ್ ಸೇವಾ ಸಂಸ್ಥೆಯು ಸಿಲಿಂಡರ್ ಬಳಕೆ ಮಾಡುವ ಮತ್ತು ವಿತರಣೆಗಳ ಕ್ರಮಗಳನ್ನು ಕ್ರಮಬದ್ಧವಾಗಿ ಮುಂಜಾಗೃತರಾಗಬೇಕು ಎಂದು ಗ್ರಾಹಕರಲ್ಲಿ ಕರೆ ನೀಡಿದರು.
ಗ್ರಾಹಕರಿಗೆ ತಿಳಿಯದೇ ಹಾಗೇ ಕೆಲವು ದಂಧೆಕೋರರು ಮೋಸದ ಜಾಲದಲ್ಲಿ ನಿಮ್ಮನ್ನು ತೊಡಗುವಂತೆ ಮಾಡುತ್ತಾರೆ. ಕೆಲವು ಸಿಲಿಂಡರ್ ವಿತರಿಸುವ ಕಂಪನಿಗಳು ಸಹ ಸರಿಯಾದ ತೂಕದ ಮಾಪನೆ ಮಾಡದೇ ಅದೆಷ್ಟೋ ಗ್ರಾಹಕರಿಗೆ ವಂಚಿಸುವಲ್ಲಿ ಮುಂದಾಗಿವೆ. ಇಂತಹ ಪ್ರಕರಣಗಳು ಈಗೀಗ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಜನರು ಜಾಗೃತರಾಗಬೇಕು ಎಂದರು. ದೇಶಿಯ ಸಿಲಿಂಡರ್ ವಿತರಿಸುವಾಗ ಅದನ್ನು ಖಚಿತ ಪಡಿಸಿಕೊಳ್ಳಲು ಸೀಲ್ ಅಥವಾ ಮೊಹರನ್ನು ಪರಿಶೀಲಿಸಬೇಕು. ಖಾಲಿ ಸಿಲಿಂಡರ್ ಮತ್ತು ಪೂರ್ಣ ಸಿಲಿಂಡರ್ ಪಡೆಯುವಾಗ ತೂಕವನ್ನು ಗಮನಿಸಬೇಕು. ಶಾಂಪೂ ಅಥವಾ ಸಾಬೂನು ನೀರನ್ನು ಸೇರಿಸುವ ಮೂಲಕ ಗಣನೀಯ ಸೋರಿಕೇಗಳನ್ನು ಗೂರುತಿಸಬೇಕು. ಇವುಗಳಲ್ಲಿ ಅನುಮಾನ ದೃಢಪಟ್ಟರೆ ಸಂಬಂಧಿಸಿದ ಆಹಾರ ಮತ್ತು ನಾಗರಿಕ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ www.grahakdakshata.com ಗೆ ಭೇಟಿ ನೀಡಬಹುದು. ಈ ಸಂದರ್ಭದಲ್ಲಿ ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಜನಜಾಗೃತಿ ಅಭಿಯಾನದ ಅರುಣ್ ಹಾಜರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ