ಸುಪ್ರಿಂ ಕೋರ್ಟ್ ಒಳಮೀಸಲಾತಿ ತೀರ್ಪು ಸ್ವಾಗತಾರ್ಹ : ಹೆಚ್ ಸೂಲಂಗಿ

 

ಸಿಂಧನೂರು :-ಸುಪ್ರೀಂ ಕೋರ್ಟ್ ಒಳ ಮೀಸಲಾತಿ ನೀಡುವುದರಿಂದ ಸಂವಿಧಾನ ಉಲ್ಲಂಘನೆ ಮಾಡಿದಂತೆ ಆಗುವುದಿಲ್ಲ ಎಂದು ತೀರ್ಪು ನೀಡಿರುವುದು ಸ್ವಾಗತಾರ್ಹ ಎಂದು ತಾಲೂಕ ಪ್ರಧಾನ ಸಂಚಾಲಕರು ಒಳ ಮೀಸಲಾತಿ ಹೋರಾಟ ಸಮಿತಿ ಹೆಚ್ ಸೂಲಂಗಿ ಹೇಳಿದ್ದಾರೆ.

 ಪತ್ರಿಕಾ ಹೇಳಿಕೆ ನೀಡಿರುವ ಅವರು ಸುಪ್ರೀಂ ಕೋರ್ಟ್ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳಮಿಸಲಾತಿಯ ಚಂದ್ರಚೂಡ್ ಅವರನ್ನು ಒಳಗೊಂಡ 7 ನ್ಯಾಯಮೂರ್ತಿಗಳ ಪೀಠ ಗುರುವಾರ ಐತಿಹಾಸಿಕ ತೀರ್ಪು ನೀಡಿದೆ. ಪರಿಶಿಷ್ಟ ಜಾತಿಯಲ್ಲಿರುವ ಹಲವು ಜಾತಿಗಳು ಇದುವರೆಗೆ ಸಂವಿಧಾನದ ಫಲ ಪಡೆದುಕೊಂಡಿಲ್ಲ. ಇದೀಗ ಇದಕ್ಕೆ ಅವಕಾಶ ಕೊಡುವ ರೀತಿಯಲ್ಲಿ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯವು ಒಂದು ವೇಳೆ ಪರಿಶಿಷ್ಟರಲ್ಲಿ ಒಳ ಮೀಸಲಾತಿ ನೀಡಿದರೆ ಅದು ಯಾವುದೇ ರೀತಿಯ ಉಲ್ಲಂಘನೆ ಆಗಲ್ಲ.

ಆರ್ಟಿಕಲ್ 14 ಅಥವಾ 341(1), ಆರ್ಟಿಕಲ್ 15ರ ಉಲ್ಲಂಘನೆ ಮಾಡಿದಂತೆ ಆಗುವುದಿಲ್ಲ ಎಂಬತೀರ್ಪನ್ನು ನ್ಯಾಯಮೂರ್ತಿಗಳು ನೀಡಿದ್ದಾರೆ.

ಇಡೀ ದೇಶದಲ್ಲಿ ಸಂವಿಧಾನದ ರಕ್ಷಣೆಯ ಹೊಣೆ ಹೊತ್ತ ಸುಪ್ರೀಂ ಕೋರ್ಟ್ ಅದರಲ್ಲೂ ವಿಶೇಷವಾಗಿ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್ ಅವರು ತೀರ್ಪು ನೀಡಿ ಮತ್ತೊಂದು ಮಹತ್ತರ ಸಂವಿಧಾನ ಎತ್ತಿಹಿಡಿದ್ದಾರೆ.

ಸಂವಿಧಾನ ಇರುವುದೇ ಎಲ್ಲರಿಗೂ ಸಮಾನವಾಗಿ ಬದುಕುವ ಅವಕಾಶ ಸಿಗಬೇಕು. ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎಂಬ ಉದ್ದೇಶವನ್ನು ಸಾಕಾರ ಮಾಡಲು. ಅಂತಹ ಕಾರ್ಯಕ್ಕೆ ಮೀಸಲಾತಿ ಬಹಳ ಸಹಕಾರಿ ಆಗುತ್ತದೆ.

ಒಳ ಮೀಸಲಾತಿ ನೀಡುವುದರ ಹಿಂದಿನ ಉದ್ದೇಶ ಯಾರಿಗೂ ಅನ್ಯಾಯ ಮಾಡುವುದಲ್ಲ. ಬದಲಿಗೆ ದಮನಿತರ, ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದೇ ಆಗಿರುತ್ತದೆ. ಇಂತಹ ಉದ್ದೇಶಕ್ಕೆ ಯಾವುದೇ ಅಡೆ ತಡೆ ಸಂವಿಧಾನದಿಂದ ಇರಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*