ಹನುಮಸಾಗರದಲ್ಲಿ ಅದ್ದೂರಿ ವಿಜಯೋತ್ಸವ

 ವರದಿ -ಮಂಜುನಾಥ ಕೋಳೂರು ಕೊಪ್ಪಳ 

ಕೊಪ್ಪಳ : - ದೇಶದ ಐದು ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಚತ್ತಿಸಗಡದಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲವು ಸಾಧಿಸಿದ ಹಿನ್ನೆಲೆ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಗೆಲುವಿನ ವಿಜಯೋತ್ಸವವನ್ನು ಸಂಭ್ರಮಿಸಿದರು. ವಿಜಯೋತ್ಸವದ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಬಸವರಾಜ ಹಳ್ಳೂರು ಮಾತನಾಡುತ್ತಾ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಮಾಡಿದ ಜನಪರ ಯೋಜನೆಗಳಿಗೆ ಮೆಚ್ಚಿಕೊಂಡು ಮತದಾರರು ನಮ್ಮ ಬಿಜೆಪಿ ಪಕ್ಷಕ್ಕೆಬೆಂಬಲಿಸಿ ಸರ್ಕಾರ ರಚಿಸುವಲ್ಲಿ ಆಶೀರ್ವಾದ ಮಾಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಹನುಮಸಾಗರದ ಗ್ರಾಮ ಪ. ಅಧ್ಯಕ್ಷರಾದ ರುದ್ರಗೌಡ ಗೌಡಪ್ಪನವರ್.ಉಪಾಧ್ಯಕ್ಷ ಪುತ್ರರಾದ ನಾಗರಾಜ ಕಂದಗಲ್, ಸಕ್ರಪ್ಪ ಬಿಂಗಿ.ವಿಶ್ವನಾಥ ನಾಗೂರು. ವಕೀಲರ ಸಂಘದ ತಾಲೂಕ ಅಧ್ಯಕ್ಷರಾದ ಮಹಾಂತೇಶ ಕುಷ್ಟಗಿ, ಬಿಜೆಪಿ ಮುಖಂಡ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಶಿವಪುತ್ರಪ್ಪ ಕೋಳೂರ , ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ್ ಬಡಿಗೇರ್

ಮರೆಗೌಡ ಭೂದೂರು, ಬಸವರಾಜ ಬಿಲ್ಕಾರ್, ಬಸವರಾಜ ದ್ಯಾವಣ್ಣವರ್ , ಚಂದ್ರು ಬೇಳಗಲ್, ಹುಲ್ಲಪ್ಪ ಗಡೇಕಾರ, ಈರಗಪ್ಪ ಗಡೇಕಾರ,ಬಂಗಾರಪ್ಪ ಪೂಜಾರಿ, ಬಸವರಾಜ ಹುಲ್ಲೂರು,ಕಾಳಪ್ಪ ನಾಲಗಾರ ಹಾಗೂ ಗ್ರಾಮದ ಮುಖಂಡರು , ಬಿಜೆಪಿ ಪಕ್ಷದ ಮುಖಂಡರು , ಕಾರ್ಯಕರ್ತರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*