* ಬೆಂಗಳೂರು ಕಕೊಅಮಂ ಮತ್ತು ವಿಜಯನಗರ ಜಿಲ್ಲಾಧಿಕಾರಿ ಗಮನ ಹರಿಸುವಂತೆ ಸಾರ್ವಜನಿಕರ ಆಗ್ರಹ.
ಕೊಟ್ಟೂರು ಪಟ್ಟಣಕ್ಕೆ ಮಂಜೂರಾದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ 411 ಗಳಲ್ಲಿ 171 ಖಾಲಿ ಉಳಿದಿವೆ: ಗುತ್ತಿಗೆದಾರರಿಂದ ಹೊಸ ಡಿಡಿಗೆ ತಿರಸ್ಕಾರ
ಕೊಟ್ಟೂರು : ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಕೊಟ್ಟೂರು ಪಟ್ಟಣಕ್ಕೆ ಮಂಜೂರು ಮಾಡಿರುವ 411 ಮನೆಗಳಲ್ಲಿ, 240 ಮನೆಗಳು ಮಾತ್ರ ಪ್ರಸ್ತುತ ನಿರ್ಮಾಣಗೊಂಡಿದ್ದು, ಉಳಿದ 171 ಮನೆಗಳಿಗೆ ಅರ್ಹ ಪಲಾನುಭವಿಗಳಿಂದ ಡಿಡಿ ಪಡೆಯಲು ಕ.ಕೊ.ಅ.ಮಂ ಪ್ರಥಮ ಗುತ್ತಿಗೆಯ ಇಂಜಿನಿಯರ್ ತಿರಸ್ಕರಿಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಗಂಭೀರ ಆರೋಪ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು 1973 ಕಾಯ್ದೆ ಪ್ರಕಾರ ಸ್ಥಾಪನೆಯಾದ 1975 ರಿಂದ ಕೊಳಚೆ ಪ್ರದೇಶಗಳ ನಿವಾಸಿಗಳ ವಸತಿ ಮತ್ತು ಮೂಲ ಭೂತ ಸೌಕರ್ಯಗಳನ್ನು ಪೂರೈಸಲು ಮಹತ್ತರ ಯೋಜನೆಯನ್ನು ರೂಪಿಸುತ್ತ ಬಂದಿದೆ.
ಇದೇ ನಿಟ್ಟಿನಲ್ಲಿ 2021-2022 ನೇ ಸಾಲಿನ ಆಯವ್ಯಯದಲ್ಲಿ ನಗರ ಸ್ಥಳೀಯ ಸಂಸ್ಥೆಗೆ ಹಂಚಿಕೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಎಸ್.ಎಫ್.ಸಿ ಮುಕ್ತನಿದಿ ಮತ್ತು ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಯೋಜನೆ ಅನುದಾನದಿಂದ ಬಿಡುಗಡೆ ಮಾಡಿ ಕೊಟ್ಟೂರು ಪಟ್ಟಣದ ಕೊಳಚೆ ಪ್ರದೇಶದ ನಿವಾಸಿಗಳಿಗೆ ವಸತಿ ಕಲ್ಪಿಸಲು 411 ಮನೆಗಳನ್ನು ಮಂಜೂರು ಮಾಡಿದೆ.
ಕೊಟ್ಟೂರು ಪಟ್ಟಣದ ಕೊಳಚೆ ಪ್ರದೇಶದ ಕೇವಲ 240 ಮನೆಗಳು ಮಾತ್ರ ನಿರ್ಮಾಣಗೊಂಡಿದ್ದು 171 ಮನೆಗಳು ಖಾಲಿ ಉಳಿದಿವೆ.ಖಾಲಿ ಉಳಿದ ಮನೆಗಳಿಗೆ ಡಿಡಿ ಕಟ್ಟುವ ಬಗ್ಗೆ ಜನರು ಕೇಳಿದರೆ ಈಗಾಗಲೆ ಯಾವುದೇ ಹೊಸ ಡಿಡಿಗಳನ್ನು ಪಡೆಯುತ್ತಿಲ್ಲ ಎಂದು ಗುತ್ತಿಗೆದಾರರ ಇಂಜಿನಿಯರ್ ಹೇಳಿ ಕಳಿಸುತ್ತಿರುವ ಬಗ್ಗೆ ಸಾರ್ವಜನಿಕರು ಆರೋಪ ಮಾಡುತ್ತಿರುವರು.
ಕೊಟ್ಟೂರು ಪಟ್ಟಣದಲ್ಲಿ ಇನ್ನೂ ಇಷ್ಟು ಮನೆ ಬಂದರು ಕಟ್ಟಿಸಿಕೊಳ್ಳುವಷ್ಟು ಬಡಜನ ಕೊಳಚೆ ಪ್ರದೇಶದಲ್ಲಿದ್ದು ಕೇವಲ ಒಂದೇ ವರ್ಷದ ಅವಧಿಯಲ್ಲಿ ಇಂತಹ ಮಹತ್ತರ ಯೋಜನೆಯನ್ನು ನಿಲ್ಲಿಸುತ್ತಿರುವುದು ಸೂಕ್ತವಲ್ಲ ಇದರ ಅವಧಿಯನ್ನು ಇನ್ನೂ ಒಂದು ವರ್ಷ ಮುಂದೂಡಿದರೆ ಇಲ್ಲಿಗೆ ಮುಂಜೂರಾಗಿರುವ ಮನೆಗಳು ಪೂರ್ಣಗೊಳ್ಳುತ್ತವೆ.ಈ ಬಗ್ಗೆ ಶೀಘ್ರ ವಿಜಯನಗರ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಸ್ಥಳೀಯರು ಲಕ್ಷ್ಮಮ್ಮ, ಮೊಹಮ್ಮದ್, ತಿಪ್ಪಮ್ಮ ಆಗ್ರಹಿಸಿದರು.
-----------------------------------------------------------------
ಕೋಟ್,,
ಕೊಟ್ಟೂರು ಪಟ್ಟಣಕ್ಕೆ 411 ಮನೆಗಳು ಎಚ್ಚೇನಲ್ಲ, ಇನ್ನೂ ಇಷ್ಟು ಬೇಕಾಗುತ್ತವೆ, ಆದರೆ ಈ ಮನೆಗಳ ಬಗ್ಗೆ ಗುತ್ತಿಗೆದಾರರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ, 7 ಲಕ್ಷ ರೂ.ವೆಚ್ಚದ ಮನೆ ಎಂದು ಹೇಳುತ್ತಾರೆ, ಆದರೆ ಕೂಲಿ ಮತ್ತು ಮನೆ ನಿರ್ಮಾಣ ಸಾಮಾಗ್ರಿ ಸೇರಿ ಪಲಾನುಭವಿಗಳಿಗೆ ಕೇವಲ 3 ರಿಂದ 4 ಲಕ್ಷ ರೂ.ಮಾತ್ರ ದೊರೆಯುತ್ತೆ, ಇದಕ್ಕೆ ಎಸ್.ಸಿ ಮತ್ತು ಎಸ್ಟಿ ಪಲಾನುಭವಿ 69 ಸಾವಿರ ಅದರ್ಸ ಜನಾಂಗ 1.4 ಲಕ್ಷ ರೂ. ಮೊದಲು ಡಿಡಿ ಕಟ್ಟಬೇಕು ಉಳಿದಿದ್ದು ಸಾಲ ಮಾಡಿ ನಿರ್ಮಿಸಿಕೊಳ್ಳಬೇಕು, ಇದು ಕಡುಬಡವರಿಗೆ ಕಷ್ಟವಾಗಿದೆ. ಹಾಗಾಗಿ ಇನ್ನೂ 171 ಮನೆಗಳು ಖಾಲಿ ಉಳಿದಿವೆ. ಈ ಬಗ್ಗೆ ಬೆಂಗಳೂರು ಕಕೊಅಮಂ ಕಮಿಷನರ್ ಹಾಗೂ ವಿಜಯನಗರ ಜಿಲ್ಲಾಧಿಕಾರಿಗಳು ಗಮನಹರಿಸಬೇಕು.
ವಂಸತ ಕುಮಾರ್. ಪ್ರಜ್ಞಾವಂತ ನಾಗರಿಕ ಕೊಟ್ಟೂರು.
-----------------------------------------------------------------
ಕೋಟ್,,
ಕೊಟ್ಟೂರು ಪಟ್ಟಣದಲ್ಲಿ 240 ಮನೆಗಳು ನಿರ್ಮಾಣಗೊಂಡಿದ್ದು 171 ಮನೆಗಳು ಬಾಕಿ ಇವೆ ಒಬ್ಬಿಬ್ಬರು ಬಿಟ್ಟರೆ ಬೇರೆ ಯಾರು ಮನೆ ನಿರ್ಮಿಸಿಕೊಳ್ಳಲು ಬರುತ್ತಿಲ್ಲ ಹಾಗಾಗಿ ಹೊಸ ಡಿಡಿ ಗಳನ್ನು ನಿಲ್ಲಿಸಿದ್ದೇವೆ.
ಕಕೊಅಮಂ ಯೊಸುಫ್ ಗುತ್ತಿಗೆ ಇಂಜಿನಿಯರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ