"ರಾಜಕೀಯ ಒತ್ತಡಕ್ಕೆ ಮಣಿಯದೆ : ಕರ್ತವ್ಯಕ್ಕೆ ಬೆಲೆ ನೀಡಿದ ಮೇಲಧಿಕಾರಿಗಳು"
*ನಮ್ಮ ಪ್ರಜಾ ಸಾಕ್ಷಿ ನಿರಂತರ ವರದಿಗೆ ಪ್ರತಿ ಪಲ *
ಕುಮಾರಿ ನೇತ್ರಾವತಿ ಶಿವನಪ್ಪನವರ, ಗ್ರೇಡ್-2 ಕಾರ್ಯದರ್ಶಿ, ತಾಲೂಕು ಪಂಚಾಯಿತಿ ಕೊಟ್ಟೂರು ಇವರಿಗೆ ಚಾರ್ಜ್ ವಹಿಸಿಕೊಳ್ಳಲು ಇಓ ರವಿಕುಮಾರ್ ಆದೇಶಿಸಿದ್ದಾರೆ.
"ಅಂತೂ ಇಂತೂ ರೂಪಕ್ಕನ ಮೂಲಸ್ಥಾನದ ಕೆ ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಭಾಗ್ಯ ಸಿಕ್ಕಿತು..!"
ಕೊಟ್ಟೂರು ತಾಲೂಕು ಪಂಚಾಯತ್ ಮೇಲಧಿಕಾರಿಗಳು ಯಾವ ರಾಜಕಾರಣಿಗಳಿಗೂ ಒತ್ತಡಕ್ಕೆ ಮಣಿಯದೇ ಈಗಲಾದರೂ ಕರ್ತವ್ಯಕ್ಕೆ ಬೆಲೆ ನೀಡಿ ಅಧಿಕಾರಿಯ ಸ್ಥಾನಕ್ಕೆ ನಿಷ್ಠೆಯಿಂದ ಮೇಲಾಧಿಕಾರಿಗಳ ವರ್ಗಾವಣೆ ಆದೇಶಕ್ಕೆ ಬೆಲೆ ನೀಡಿ ಲಂಚದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದ ಅಧಿಕಾರಿಗಳಯನ್ನು ಸೋಮವಾರ ದಂದು ಕೊಟ್ಟೂರು ತಾಲೂಕು ಪಂಚಾಯಿತಿ ಕಚೇರಿ ಯಿಂದ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಎಂದು ತಾಲೂಕು ಪಂಚಾಯಿತಿ ಇಓ ಸಾಹೇಬರು ತಿಳಿಸಿದರು.
ರಾಜಕಾರಣಿಗಳಿಂದ ಅಧಿಕಾರಿಗಳಿಗೆ ಒತ್ತಡ ತಂದರು? ಎಷ್ಟೇ ಒತ್ತಡಗಳ ಬಂದರೂ ಸಾರ್ವಜನಿಕರಿಗೆ ಹಾಗೂ ಕರ್ತವ್ಯಕ್ಕೆ ಬೆಲೆ ನೀಡಿ ವರ್ಗಾವಣೆ ಆಗಿರುವ ಅಧಿಕಾರಿಗಳನ್ನು ಕರ್ತವ್ಯ ದಿಂದ ಬಿಡುಗಡೆಗೊಳಿಸಿದ್ದಾರೆ. ಸಾರ್ವಜನಿಕರ ದೃಷ್ಟಿಯಲ್ಲಿ ಒಂದಿಷ್ಟಾದರೂ ಬೆಲೆ ಉಳಿದಂತಾಯಿತು.
ಇನ್ನಾದರೂ ಇಂತಹ ಅಧಿಕಾರಿಗಳು ಬುದ್ಧಿ ಕಲಿತು ರಾಜಕೀಯ ಉಪಯೋಗಸದಂತೆ ತಮ್ಮ ತಪ್ಪುಗಳನ್ನು ಅರಿತುಕೊಂಡು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ತಮ್ಮ ಕರ್ತವ್ಯ ಮಾಡಿದರೆ ಒಳ್ಳೆಯದು ಎಂದು ಸಾರ್ವಜನಿಕರು ಹಾಗೂ ಸಿಪಿಐಎಂಎಲ್ ಪಾರ್ಟಿಯ ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್ ಅಭಿಪ್ರಾಯ ತಿಳಿಸಿದರು.
ಕೊಟ್ -1
ತಾಲೂಕು ಪಂಚಾಯತ್ ಇಓ ರವಿಕುಮಾರ್ ಸಾಹೇಬರು ಉಲ್ಲೇಖದ ಆದೇಶದಲ್ಲಿ ಶ್ರೀಮತಿ ಕೆ ರೂಪ, ಗ್ರೇಡ್-1 ಕಾರ್ಯದರ್ಶಿ, ನಿಯೋಜನೆ. ತಾಲ್ಲೂಕು ಪಂಚಾಯಿತಿ ಕೊಟ್ಟೂರು ಇವರನ್ನು ಉಲ್ಲೇಖದ ಆದೇಶದಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ನಿಯೋಜನೆಯಿಂದ ಮುಕ್ತಗೊಳಿಸಿ, ಮೂಲ ಗ್ರಾಮ ಪಂಚಾಯಿತಿಯಾದ ಕೆ. ಅಯ್ಯನಹಳ್ಳಿ ಗ್ರಾ.ಪಂ.ಯ ಕಾರ್ಯನಿರ್ವಹಣೆಗೆ ನಿಯೋಜಿಸಿ ಕರ್ತವ್ಯದಿಂದ ಬಿಡುಗಡೆಗೊಳಿಸಲು ಆದೇಶಿಸಿರುವುದರಿಂದ ಸದರಿ ನೌಕರರನ್ನು ಈ ಕಛೇರಿಯ ಕರ್ತವ್ಯದಿಂದ ದಿ:11.12.2023ರ ಅಪರಾಹ್ನ ಬಿಡುಗಡೆಗೊಳಿಸಿ ಮೂಲ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಅದೀನದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿದೆ.ಮತ್ತು ಶ್ರಿ ಎಂ.ಜಿ.ಮೋಹನ್, ಗಣಕ ಯಂತ್ರ ಸಹಾಯಕ (ಹೊರಗುತ್ತಿಗೆ) ತಾ.ಪಂ.ಕೊಟ್ಟೂರು ಇವರನ್ನು ಉಲ್ಲೇಖದ ಆದೇಶದಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ಕಾರ್ಯನಿರ್ವಹಣೆಗೆ ನಿಯೋಜಿಸಿ ಕರ್ತವ್ಯದಿಂದ ಬಿಡುಗಡೆಗೊಳಿಸಲು ಆದೇಶಿಸಿರುವುದರಿಂದ ಸದರಿ ಹೊರಗುತ್ತಿಗೆ ಸಿಬ್ಬಂದಿಯವನ್ನು ಈ ಕಛೇರಿಯ ಕರ್ತವ್ಯದಿಂದ ದಿ:11.12.2023ರ ಅಪರಾಹ್ನ ಬಿಡುಗಡೆಗೊಳಿಸಿ ನಿಯೋಜಿಸಿದ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿದೆ.ಎಂದು ಪತ್ರಿಕೆಗೆ ಹೇಳಿದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ