ಗಣಿತವು ಮಾನವನ ಜೀವನಕ್ಕೆ ಪ್ರಮುಖವಾಗಿದೆ:ಡಾ. ಎಂ ರವಿಕುಮಾರ್
ಕೊಟ್ಟೂರು: ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಗಣಿತ ಶಾಸ್ತ್ರದ ವಿಭಾಗದಿಂದ ಗಣಿತಶಾಸ್ತ್ರಜ್ಞರಾದ ಶ್ರೀನಿವಾಸ್ ರಾಮಾನುಜನ್ ಅವರ ಹುಟ್ಟುಹಬ್ಬದ ಪ್ರಯುಕ್ತ ರಾಷ್ಟ್ರೀಯ ಗಣಿತ ದಿನಾಚರಣೆಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಮಾನ್ಯ ಸಿದ್ದರಾಮ ಕಲ್ಮಠ ಶುಭ ಕೋರಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ರವಿಕುಮಾರ್ ಸರ್ ಮಾತನಾಡಿ ರಾಮಾನುಜನ್ ರವರ ಜೀವನದ ಕುರಿತು ಹಾಗೂ ಗಣಿತಶಾಸ್ತ್ರಕ್ಕೆ ರವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಗಣಿತ ವು ಜನಸಾಮಾನ್ಯರಲ್ಲಿ ಹೇಗೆ ಉಪಯೋಗವಾಗುತ್ತದೆ ಹಾಗೂ ಅದರ ಪ್ರಾಮುಖ್ಯತೆಯನ್ನು ಮತ್ತು ಗಣಿತ ಇಲ್ಲದೆ ಯಾವುದೇ ವ್ಯವಹಾರಿಕ ಜೀವನ ನಡೆಯುವುದಿಲ್ಲ ಹಾಗಾಗಿ ಗಣಿತವು ಮಾನವನ ಜೀವನಕ್ಕೆ ಪ್ರಮುಖವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶ್ರೀ ಸಿ ಬಸವರಾಜ್ ಮಾತನಾಡಿ ಗಣಿತವು ಎಲ್ಲಾ ವಿಜ್ಞಾನ ವಿಷಯಗಳಿಗೆ ಅಡಿಪಾಯವಾಗಿದೆ. ಹಾಗೂ ಕಂಪ್ಯೂಟರ್ ಯುಗಕ್ಕೆ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು. ಡಾ. ಸಿದ್ದನಗೌಡ ಡಾ. ಚೇತನ್ ಚೌಹಾನ್ ಅನೇಕ ವಿದ್ಯಾರ್ಥಿಗಳು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪ್ರೊ. ಕೃಷ್ಣಪ್ಪ ಭೌತಶಾಸ್ತ್ರದ ಮುಖ್ಯಸ್ಥರು. ಕುಮಾರಿ ಪೂಜಾ ಗಣಿತಶಾಸ್ತ್ರದ ಮುಖ್ಯಸ್ಥರು.ಕುಮಾರಿ ರೂಪ ಹಾಗೂ ವಿದ್ಯಾರ್ಥಿಗಳು ಮತ್ತು ಬೋಧಕ ಬೋಧಕೇತರ ವರ್ಗ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ