ಸೋಮನಾಥ ನಗರದ ನಿವಾಸಿಗಳಿಗೆ ಹಕ್ಕು ಪತ್ರ ನೀಡುವಂತೆ ಶಾಸಕರಲ್ಲಿ ಮನವಿ

ಮಸ್ಕಿ : ಪಟ್ಟಣದ ಸೋಮನಾಥ ನಗರದ ನಿವಾಸಿಗಳ ಮನೆಗಳನ್ನು ತೆರವು ಗೊಳಿಸದೇ ಪರ್ಯಾಯವಾಗಿ ಕಂದಾಯ ಇಲಾಖೆಯ ಭೂಮಿ ಪಡೆದು ಅಷ್ಟೇ ವಿಸ್ತೀರ್ಣದ ಭೂಮಿಯನ್ನು ನೀರಾವರಿ ಇಲಾಖೆಯ ಭೂಮಿಯನ್ನು ಪಡೆದು ಭೂಮಿ ಒದಗಿಸಿ ನಿವಾಸಿಗಳಿಗೆ ಹಕ್ಕು ಪತ್ರ ಕೊಡಿಸಲು ವಿಕಾಸಸೌಧ ಬೆಳಗಾವಿಯಲ್ಲಿ ಇಂದಿನಿಂದ ಜರುಗಲಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಬೋರ್ಡ್ ಸಭೆಯಲ್ಲಿ ತೀರ್ಮಾನ ಮಾಡಿ ನಿವಾಸಿಗಳಿಗೆ ಹಕ್ಕು ಪತ್ರ ನೀಡಿ ನ್ಯಾಯ ಒದಗಿಸುವಂತೆ ಆರ್. ಬಸನಗೌಡ ತುರವಿಹಾಳ ಶಾಸಕರು ಮಸ್ಕಿ ಇವರಲ್ಲಿ ಕಾಂಗ್ರೆಸ್ ಕಛೇರಿಯಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು.

ಆರ್. ಬಸನಗೌಡ ತುರವಿಹಾಳ ಶಾಸಕರು ಮಸ್ಕಿ ತಮ್ಮಲ್ಲಿ ವಿನಂತಿಸಿಕೊಳ್ಳುವುದು ಏನೇಂದರೆ ಉಪ ಚುನಾವಣೆಯಲ್ಲಿ ಮತ್ತು 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮೇಲಿನ ಭರವಸೆಯಿಂದ ನಮ್ಮ ಸೋಮನಾಥ ನಗರದ ನಿವಾಸಿಗಳಿಗೆ ಹಕ್ಕು ಪತ್ರ ಕೊಡಿಸುವರೆಂಬ ನಂಬಿಕೆಯಿಂದ ಅತ್ಯಂತ ಹೆಚ್ಚು ಮತಗಳನ್ನು ನೀಡಿದ್ದೇವೆ. ನಮ್ಮ ನಂಬಿಕೆಯನ್ನು ಉಷಿಗೊಳಿಸದೇ ನಮಗೆ ಹಕ್ಕ ಪತ್ರವನ್ನು ಅತೀ ಶೀಘ್ರದಲ್ಲಿ ನೀಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಾ, ಮಸ್ಕಿಯ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸೋಮನಾಥ ನಗರದಲ್ಲಿ ವಾಸಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರು ಸುಮಾರು 400 ರಿಂದ 500 ನಿರ್ಗತಿಕ ಕುಟುಂಬಗಳು ಟಿ.ಬಿ.ಪಿ ಸರ್ಕಾರಿ ಸ.ನಂ. 223, 224 ರಲ್ಲಿ ಸುಮಾರು 25 ರಿಂದ 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ವಾಸ್ತವದಲ್ಲಿ ಸದರಿ ಭೂಮಿಯು ನೀರಾವರಿ ಇಲಾಖೆಯ ವ್ಯಾಪ್ತಿಯ ಸುಮಾರು ನೂರಾರು ಎಕರೆಗಳಷ್ಟು ನಿರುಪಯೋಗಿ ಭೂಮಿ ಇದ್ದು, ಸದ್ಯ ಮಸ್ಕಿಯ ಸೋಮನಾಥ ನಗರವನ್ನು ವಾರ್ಡ್ ನಂ.2 & 12 ಎಂದು ವಿಂಗಡಿಸಿದ್ದಾರೆ. ಇದರಲ್ಲಿ ಒಟ್ಟು 1000 ರಿಂದ 1200 ಮತದಾರರಿದ್ದಾರೆ. ಆದರೆ ಇವರಿಗೆ ಇಲ್ಲಿಯವರೆಗೂ ತಮ್ಮ ಮನೆಯ ಹಕ್ಕು ಅವರಿಗಿರದಾಗಿದೆ. ಆದರೆ ಪ್ರತಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ನಮ್ಮನ್ನು ಗೆಲ್ಲಿಸಿ ಹಕ್ಕು ಪತ್ರ ನೀಡುತ್ತೇವೆಂದು ಸುಳ್ಳು ಭರವಸೆಯನ್ನು ನೀಡುವ ಚುನಾಯಿತ ಜನಪ್ರತಿನಿಧಿಗಳ ಭರವಸೆಯನ್ನು ನಂಬಿದ ಈ ಜನರಿಗೆ ಇಲ್ಲಿಯವರೆಗೂ ಹಕ್ಕು ಪತ್ರ ನೀಡಲಾಗಿಲ್ಲ. ಆದರೆ ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಅಂದರೆ ಕನ್ನಡ ಶಾಲೆ, ಉರ್ದು ಶಾಲೆ,

ಅಂಗನವಾಡಿ ಕೇಂದ್ರ, ಕುಡಿಯುವ ನೀರು, ವಿದ್ಯುತ್, ಸಿ.ಸಿ ರಸ್ತೆ, ಚರಂಡಿ ನಿರ್ಮಾಣ ಪುರಸಭೆಯಕ್ಕಿಂತ ಮೊದಲು ಗ್ರಾಮ ಪಂಚಾಯತ ವ್ಯವಸ್ಥೆ ಇದ್ದಾಗ ಇಲ್ಲಿನ ನಿವಾಸಿಗಳಿಗೆ ಸರ್ಕಾರದಿಂದ ಬರುವ ವಸತಿ ಸೌಲಭ್ಯ (ಮನೆಗಳನ್ನು) ವನ್ನು ನೀಡಿದೆ. ಆದರೆ ಈಗ ಪುರಸಭೆಯಾದ ನಂತರ ಇಲ್ಲಿನ ನಿವಾಸಿಗಳಿಗೆ ಮನೆಗಳನ್ನು ನೀಡುತ್ತಿಲ್ಲಾ.

ವಸತಿ ರಹಿತರಿಗಾಗಿ ನೀಡುವ ಸೌಲಭ್ಯಗಳಿಂದ ಈ ನಗರದ ಜನತೆ ಸಂಪೂರ್ಣವಾಗಿ ವಂಚಿತರಾಗಿದ್ದಾರೆ.

ಒಂದು ಕಡೆ ಸರ್ಕಾರ ನಿವೇಶನ ರಹಿತ, ವಸತಿ ರಹಿತ, ನಿರ್ಗತಿಕರಿಗೆ ಅಕ್ರಮ, ಸಕ್ರಮ ಯೋಜನೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕೆಂದು ಅರ್ಜಿ ಸಲ್ಲಿಸಿದರೂ ಕೂಡ ಆ ಅರ್ಜಿಯನ್ನು ಸ್ವೀಕರಿಸುತ್ತಿಲ್ಲಾ ಅಂದರೆ ಇಲ್ಲಿನ ನಿವಾಸಿಗಳ ಸಮಸ್ಯೆ ಪರಿಹಾರವೇನು? ತಾವುಗಳು ತಕ್ಷಣ ಇದರ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡು ತಕ್ಷಣ ಇಲ್ಲಿನ ಬಡವರಿಗೆ ಕನಿಷ್ಠ ಸರ್ಕಾರ ನೀಡುವ ವಸತಿ ಯೋಜನೆಯಲ್ಲಿ ಮನೆಗಳನ್ನು ಮಂಜೂರು ಮಾಡುವುದರ ಜೊತೆಗೆ ಮನೆ ಕಟ್ಟಿಕೊಳ್ಳಲು ಪುರಸಭೆಯಲ್ಲಿ ನಿರ್ಣಯ ಕೈಗೊಂಡು ಅನುಕೂಲ ಕಲ್ಪಿಸುವ ಜೊತೆಗೆ ಸೋಮನಾಥ ನಗರದ ಈ ಸಮಸ್ಯೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ನಿವಾಸಿಗಳಿಗೆ. ಹಕ್ಕು ಪತ್ರ ನೀಡಬೇಕು.

ಈಗಾಗಲೇ ಮಸ್ಕಿಯಲ್ಲಿ ಮಿನಿ ವಿಧಾನಸೌಧವನ್ನು ನಿರ್ಮಿಸಲು ಇದೆ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ PWD ಕ್ಯಾಂಪ್ ಮಸ್ಕಿಯಲ್ಲಿರುವ ಸುಮಾರು 5 ಎಕರೆಯಷ್ಟು ಭೂಮಿಯನ್ನು ನೀಡಿ ಅದಕ್ಕೆ ಪರ್ಯಾಯವಾಗಿ ಕಂದಾಯ ಇಲಾಖೆಯ ವತಿಯಿಂದ 5 ಎಕರೆ ಕಂದಾಯ ಇಲಾಖೆಗೆ ಒಳಪಟ್ಟ ಭೂಮಿಯನ್ನು ನೀರಾವರಿ ಇಲಾಖೆಗೆ ಹಸ್ತಾಂತರಿಸುವ ಮೂಲಕ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಹೇಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದಿರೋ ಹಾಗೆಯೇ ಈಗ ಜನವಸತಿ ಪ್ರದೇಶಗಳಾದ TBP ಯ ಸರ್ವೇ ನಂಬರ. 223, 224 ಸೋಮನಾಥ ನಗರದ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಕೇಳುವ ಜೊತೆಗೆ

ಉದಾ: ಮಸ್ಕಿಯ ಗಾಂಧಿನಗರದ ಹಳ್ಳದ ದಂಡೆಗೆ ಹೊಂದಿಕೊಂಡಿರುವಂತೆ TBP ಯ ಸರ್ವೇ ನಂಬರ. 16 ರ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವ ಮೂಲಕ ಅಲ್ಲಿನ ನಿರ್ಗತಿಕ, ನಿವೇಶನ ರಹಿತರಿಗೆ, ವಸತಿ ರಹಿತರಿಗೆ ಈಗಾಗಲೇ ಕಂದಾಯ ಇಲಾಖೆಯ ಮುಖಾಂತರ ಹಕ್ಕು ಪತ್ರ ನೀಡಲಾಗಿದೆ. ಅದರಂತೆ ಈ ಎರಡೂ ವಿಧದಲ್ಲಿರುವ ವ್ಯವಸ್ಥೆಯಂತೆ ಕ್ರಮ ಕೈಗೊಳ್ಳುವ ಜೊತೆಗೆ ಸೋಮನಾಥ ನಗರವನ್ನು ನೀರಾವರಿ ಇಲಾಖೆಯಅಧಿಕಾರಿಗಳು ತೆರುವುಗೊಳಿಸದೆ ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲು ಸೂಚಿಸುವಂತೆ ತಮ್ಮಲ್ಲಿ ಈ ಮನವಿಯ ಮೂಲಕ ಸಮಸ್ತ ಸೋಮನಾಥ ನಗರದ ಜನತೆಯ ಪರವಾಗಿ ವಿಕಾಸಸೌಧ ಬೆಳಗಾವಿಯಲ್ಲಿ ಇಂದಿನಿಂದ ಜರುಗಲಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಬೋರ್ಡ್ ಸಭೆಯಲ್ಲಿ ತೀರ್ಮಾನ ಮಾಡಿ ನಿವಾಸಿಗಳಿಗೆ ನ್ಯಾಯ ಒದಗಿಸುವಂತೆ ಆರ್. ಬಸನಗೌಡ ತುರವಿಹಾಳ ಶಾಸಕರು ಮಸ್ಕಿ ಇವರಲ್ಲಿ ಕಾಂಗ್ರೆಸ್ ಕಛೇರಿಯಲ್ಲಿ ಮನವಿ ಪತ್ರವನ್ನು ಪತ್ರವನ್ನು ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಹನುಮಂತಪ್ಪ ವೆಂಕಟಾಪೂರ ಜಿ.ಸಂ.ಸಂಚಾಲಕರು ದ.ಸಂ.ಸ ಮಸ್ಕಿ,ರಮೇಶ ಗುಡಸಲಿ ಪುರಸಭೆ ಸದಸ್ಯರು ಮಸ್ಕಿ,MB ಮಲ್ಲಯ್ಯ ಬಳ್ಳಾ

ಜಿಲ್ಲಾ ಗೌರವಾಧ್ಯಕ್ಷರು ಮಾ.ಮೀ.ಹೊ.ಸಮಿತಿ ಮಸ್ಕಿ,ಸುರೇಶ ಅಂತರಗಂಗಿ ಜಿಲ್ಲಾ ಕಾರ್ಯದರ್ಶಿ ಮಾ.ಮೀ.ಹೊ.ಸಮಿತಿ ಮಸ್ಕಿ, ಹನುಮಂತ ಬೈಲಗುಡ್ಡ ಸೋಮನಾಥ ನಗರ ಮಸ್ಕಿ,ಮಲ್ಲಯ್ಯ ಅಂಬಾಡಿ ಪುರಸಭೆ ಸದಸ್ಯರು ಮಸ್ಕಿ ಸೇರಿದಂತೆ ಸೋಮನಾಥ ನಗರದ ನಿವಾಸಿಗಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ