ವರ್ಗಾವಣೆ ಮಾಡಿದರೂ ಸಹ ಕಛೇರಿಯ ಕರ್ತವ್ಯದಿಂದ ಬಿಡುಗಡೆ ಮಾಡಿದೆ ಇಂದು ನಾಳೆ ಎನ್ನುವ ಸೊಬೂಬ ಕಾರಣ ಹೇಳುವ ತಾಲೂಕು ಪಂಚಾಯಿತಿಯ ಇಓ.!
ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ತಾಲ್ಲೂಕು ಪಂಚಾಯಿತಿಯ ಮೇಲಾಧಿಕಾರಿಗಳು..?
ರಾಜಕೀಯ ಒತ್ತಡದಿಂದ ಅಧಿಕಾರಿಗಳಿಗೆ ಪ್ರಾಣ ಸಂಕಟ..!
ಕೊಟ್ಟೂರು ತಾಲ್ಲೂಕು ಪಂಚಾಯಿತಿಗೆ ಇತ್ತೀಚೆಗೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದರೂ ಕೂಡ ಮೇಲಾಧಿಕಾರಿಗಳು ವರ್ಗಾವಣೆ ಮಾಡಿರುವುದಾಗಿ ಹೇಳಿ, ಸಂಘಟನೆಯವರಿಗೆ, ಸಾರ್ವಜನಿಕರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ.
ತಾಲ್ಲೂಕು ಪಂಚಾಯಿತಿಯಲ್ಲಿ ಗ್ರೇಡ್-೧ ಕಾರ್ಯದರ್ಶಿಯಾಗಿದ್ದ ರೂಪಾ ಹಾಗೂ ಡಾಟಾ ಎಂಟ್ರಿ ಆಪರೇಟರ್ ಮೋಹನ್ ಇವರ ಮೇಲೆ ಅನೇಕ ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ದಿನಪತ್ರಿಕೆಗಳ ನಿರಂತರ ವರದಿಯಿಂದ, ಶಾಸಕರ ಸಭೆಯ ಬಗ್ಗೆ ಎಚ್ಚೆತ್ತ ಜಿಲ್ಲಾ ಪಂಚಾಯಿತಿ ರೂಪಾ ರವರನ್ನು ಅವರ ಮೂಲಸ್ಥಾನವಾದ ಕೆ.ಅಯ್ಯನಹಳ್ಳಿ ಗ್ರಾ.ಪಂ.ಗೆ ಕಾರ್ಯದರ್ಶಿಯಾಗಿ ಹಾಗೂ ಮೋಹನ್ ಇವರನ್ನು ಕೂಡ್ಲಿಗಿ ತಾ.ಪಂ. ಕಛೇರಿಗೆ ವರ್ಗಾವಣೆ ಮಾಡಿತ್ತು. ಆದರೆ ವರ್ಗಾವಣೆ ಮಾಡಿದರೂ ಸಹ ಕಛೇರಿಯ ಕರ್ತವ್ಯದಿಂದ ಬಿಡುಗಡೆಯಾಗಿಲ್ಲ. ಇದನ್ನೆಲ್ಲ ನೋಡಿದರೆ ತಾಲ್ಲೂಕು ಪಂಚಾಯಿತಿಯ ಮೇಲಾಧಿಕಾರಿಗಳು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವುದು ಕಾಣುತ್ತಿದೆ. ಒಬ್ಬರ ಮೇಲೆ ಒಬ್ಬರು ಕಾರಣ ಹೇಳಿ ತಪ್ಪಿಸಿಕೊಳ್ಳುವ ಚಾಣಾಕ್ಷತನವನ್ನು ತೋರಿಸುತ್ತಿದ್ದಾರೆ. ವರ್ಗಾವಣೆಯಾಗಿದ್ದರೂ ಸಹ ಕಛೇರಿ ಕರ್ತವ್ಯದಿಂದ ಬಿಡುಗಡೆ ಯಾವಾಗ ಎಂದು ಕೇಳಿದರೆ, ಇಂದು ನಾಳೆ ಎಂದು ದಿನಗಳನ್ನು ದೂಡುತ್ತ ಸಬೂಬುಗಳನ್ನು ಹೇಳುತ್ತಿದ್ದಾರೆ. ಕಛೇರಿಗೆ ಬರುತ್ತಿರುವ ಸಾರ್ವಜನಿಕರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತಿವೆ. ಇಂತಹ ಭ್ರಷ್ಟಾಚಾರ ಮಾಡುತ್ತಿರುವ ಅಧಿಕಾರಿಗಳ ವರ್ಗಾವಣೆಗೆ ಏಳೆಂಟು ಸಂಘಟನೆಗಳು ಭ್ರಷ್ಟಾಚಾರ ಆರೋಪ ಕೇಳಿಬಂದಿರುವ ರೂಪಾ ಇವರನ್ನು ಅಮಾನತ್ತು ಮಾಡುವಂತೆ ಹಾಗೂ ಮೋಹನ್‌ರವರನ್ನು ಕೆಲಸದಿಂದ ವಜಾ ಮಾಡುವಂತೆ ತಾಲ್ಲೂಕು ಪಂಚಾಯಿತಿ ಕಛೇರಿಯ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ಕೂರಲು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಆಡಳಿತ ಹಿತದೃಷ್ಟಿಯಿಂದ ಈ ವಿಷಯದ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ತಾಲ್ಲೂಕು ಪಂಚಾಯಿತಿಯ ಭ್ರಷ್ಟಾಚಾರದ ಬಗ್ಗೆ ಪ್ರಕರಣ ದಾಖಲು ಮಾಡಲಾಗುವುದು. ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಸಿಪಿಎಂಐಲ್ ಲಿಬರೇಷನ್ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ ಪತ್ರಿಕೆಗೆ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ