ನಗರಸಭೆ ಉಪ ಚುನಾವಣೆ: ಅಬೇದಾಬೇಗಂ ಗೆಲುವು

ಸಿಂಧನೂರು. ಡಿ-30

ಸಿಂಧನೂರು ನಗರಸಭೆಯ ವಾರ್ಡ್ ನಂ-22ಕ್ಕೆ ನಡೆದ ಉಪ ಚುನಾವಣೆಯಲ್ಲಿ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಅಬೇದಾಬೇಗಂ ಗಂ. ಮುನೀರಪಾಷಾ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ವೀರೇಶ ಗೋನವಾರ ತಿಳಿಸಿದರು.

ಅವರು ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡುತ್ತಾ, ಹಿಂದಿನ ಸದಸ್ಯರಾದ ಮುನೀರಪಾಷಾ ಇವರು ನಿಧನ ಹೊಂದಿದ ಪ್ರಯುಕ್ತ ಒಂದು ಸ್ಥಾನಕ್ಕೆ ಇದೇ ದಿನಾಂಕ: 27-12-2023ರಂದು ಉಪ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ನಿAದ ಅಬೇದಾಬೇಗಂ ಗಂ. ಮುನೀರಪಾಷಾ, ಬಿಜೆಪಿಯಿಂದ ಮಲ್ಲಿಕಾರ್ಜುನ ಕಾಟಗಲ್, ಜೆಡಿಎಸ್‌ನಿಂದ ಎಂ.ಮಹಿಬೂಬ, ಎಸ್‌ಡಿಪಿಐನಿಂದ ಅಬ್ದುಲ್ ರಿಯಾಜ್ ಬುಡ್ಡಣ್ಣಿ ಸ್ಪರ್ಧಿಸಿದ್ದರು. 

ಚಲಾವಣೆಯಾದ ಒಟ್ಟು 1150 ಮತಗಳ ಪೈಕಿ, ಅಬೇದಾಬೇಗಂ ಗಂ. ಮುನೀರಪಾಷಾ ಅವರು 744, ಮಲ್ಲಿಕಾರ್ಜುನ ಕಾಟಗಲ್ ಅವರಿಗೆ 105, ಎಂ.ಮಹಿಬೂಬ ಅವರಿಗೆ 266, ಅಬ್ದುಲ್ ರಿಯಾಜ್ ಬುಡ್ಡಣ್ಣಿ ಅವರು 29 ಮತಗಳನ್ನು ಪಡೆದರೆ, 06-ಮತಗಳು ನೋಟಾಕ್ಕೆ ದಾಖಲಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಅಬೇದಾಬೇಗಂ ಅವರು 478 ಮತಗಳ ಅಂತರದಿAದ ಗೆಲವು ಸಾಧಿಸಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ರಾಮದಾಸ ತಿಳಿಸಿದರು.

ಮತ ಎಣಿಕೆ : ಇಂದು ಬೆಳಿಗ್ಗೆ 8.15ಕ್ಕೆ ಆರಂಭವಾದ ಮತ ಎಣಿಕೆ ಕಾರ್ಯ ಬೆಳಿಗ್ಗೆ 8.40ಕ್ಕೆ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ ಹೆಚ್.ಚಂದ್ರಶೇಖರ, ಚುನಾವಣಾ ಶಾಖೆಯ ರಾಜಾಭಕ್ಷಿ, ಎಣಿಕೆ ಮೇಲ್ವಿಚಾರಕ ಹೆಚ್.ಎಸ್.ಮಿಶ್ರಿಕೋಟಿ, ಸಹಾಯಕರಾದ ಮೃತ್ಯುಂಜಯ, ಮಲ್ಲಿಕಾರ್ಜುನ, ಚುನಾವಣಾ ಶಾಖೆಯ ಪ್ರ.ದ.ಸ ಬಸವರಾಜ ಬಸರಕೋಡ ಸೇರಿದಂತೆ ಇತರರು ಹಾಜರಿದ್ದರು.

ಬಂದೋಬಸ್ತ್: ಪಿಎಸ್‌ಐ ಬಸವರಾಜ ಇವರ ನೇತೃತ್ವದಲ್ಲಿ ತಹಶೀಲ್ದಾರ್ ಕಛೇರಿಯ ಮತ ಎಣಿಕೆ ಕೇಂದ್ರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ನ್ನು ನೀಡಲಾಗಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ