ನೂತನ ಹಾಸ್ಟೇಲ್ ಗೆ ಸ್ಥಳಾಂತರಿಸಲು ಎಸ್ ಎಫ್ ಐ ಸಚಿವರಿಗೆ ಮನವಿ
ಮಸ್ಕಿ : ಪಟ್ಟಣದಲ್ಲಿ ತಾಲೂಕು ಎಸ್ ಎಫ್ ಐ ಸಂಘಟನೆ ನೇತೃತ್ವದಲ್ಲಿ. ಮಸ್ಕಿಯ ಮೆಟ್ರಿಕ್ ನಂತರದ ಬಾಲಕರ ಡಾ . ಬಿ. ಆರ್ ಅಂಬೇಡ್ಕರ್ ಹಾಸ್ಟೆಲ್ ನೂತನ ಕಟ್ಟಡ ನಿರ್ಮಾಣವಾಗಿ ಹಲವು ತಿಂಗಳು ಮುಗಿದರು ಇಚ್ಛಾಶಕ್ತಿಯ ಕೊರೆತೆಯಿಂದ ಇನ್ನು ಹಾಸ್ಟೆಲ್ ಸ್ಥಳಾಂತರ ಮಾಡಿಲ್ಲದ್ದರಿಂದ ಹಾಸ್ಟೆಲ್ ವಿದ್ಯಾರ್ಥಿಗಳು ನರಕ ಯಾತನೆ ಅನುಭವಿಸುವಂತಾಗಿದೆ.ಎಂದು ಸಮಾಜ ಕಲ್ಯಾಣ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಮೆಟ್ರಿಕ್ ನಂತರದ ಬಾಲಕರ ಡಾ . ಬಿ. ಆರ್ ಅಂಬೇಡ್ಕರ್ ಹಾಸ್ಟೆಲ್ ನೂತನ ಕಟ್ಟಡ ನಿರ್ಮಾಣವಾಗಿ ಹಲವು ತಿಂಗಳು ಮುಗಿದರು ಇಚ್ಛಾಶಕ್ತಿಯ ಕೊರೆತೆಯಿಂದ ಇನ್ನು ಹಾಸ್ಟೆಲ್ ಸ್ಥಲಾಂತರ ಮಾಡಿಲ್ಲದ್ದರಿಂದ ಹಾಸ್ಟೆಲ್ ವಿದ್ಯಾರ್ಥಿಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ.
ತಾಲೂಕು ಆಡಳಿತ, ಜಿಲ್ಲಾ ಆಡಳಿತ,ವಸತಿ ನಿಲಯ ಪಾಲಕರು ಎಲ್ಲಾ ಸೇರಿ ಕಟ್ಟಡ ನೆಪವೊಡ್ದಿ ಈ ಹಾಸ್ಟೆಲ್ ಗೆ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಕೊಡದೆ ವಿದ್ಯಾರ್ಥಿಗಳ ಜೀವನದ ಜೊತೆಗೆ ಚಲ್ಲಾಟ ಆಡುತ್ತಿದ್ದಾರೆ ಈ ವಿದ್ಯಾರ್ಥಿ ವಿರೋಧಿ ನೀತಿಯನ್ನು ಎಸ್ ಎಫ್ ಐ ಸಂಘಟನೆ ಎಂದು ಸಹಿಸುವುದಿಲ್ಲ ಈ ಕೂಡಲೇ ನೂತನ ಕಟ್ಟಡ ಉದ್ಘಾಟನೆ ಮಾಡಲೇ ಬೇಕು ಎಂದು ಒತ್ತಾಯಿಸಿ ಗುರುವಾರ ದಂದು ಪ್ರಸ್ತುತ ಇರುವ ಖಾಸಗಿ ಹಾಸ್ಟೆಲ್ ನಿಂದ ಮಸ್ಕಿಯ ಹಳೇ ಬಸ್ ನಿಲ್ದಾಣದ ಡಾ.ಬಿ.ಆರ್ ಅಂಬೇಡ್ಕರ್ ಮೂರ್ತಿ ಎದುರುಗಡೆ ಹೋರಾಟವನ್ನು ಮಾಡಿ ತಹಶೀಲ್ದಾರರ ಮುಖಾಂತರ ಮಾನ್ಯ ಸಮಾಜ ಕಲ್ಯಾಣ ಸಚಿವರಿಗೆ ಪತ್ರದ ಮೂಲಕ ಒತ್ತಾಯಿಸಿ ಮನವಿ ಪತ್ರವನ್ನು ತಹಶೀಲ್ ಕಚೇರಿಯ ಶಿರಸ್ತೇದಾರರಾದ ಸೈಯದ್ ಅಖ್ತರ್ ಅಲಿ ರವರಲ್ಲಿ ಮನವಿ ಮಾಡಿದರು
ಈ ಸಂಧರ್ಭದಲ್ಲಿ ಬಸವಂತ ಹಿರೇಕಡಬೂರು ಎಸ್ ಎಫ್ ಐ ಸಂಘಟನೆ ಮಸ್ಕಿ ತಾಲೂಕು ಅಧ್ಯಕ್ಷರು, ರಮೇಶ್ ಉಸ್ಕಿಹಾಳ ಉಪಾಧ್ಯಕ್ಷರು ಹಾಗೂ ಸದಸ್ಯರು ಎಲ್ಲಾ ವಿದ್ಯಾರ್ಥಿಗಳ ವೃಂದದವರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ