ಉಜ್ಜಯಿನಿ ಸದ್ಧರ್ಮ ಪೀಠವನ್ನು ಪ್ರವಾಸಿ ತಾಣವಾಗಿಸುವ ಯೋಜನೆಯೊಂದಿಗೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ : ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶೀನಿವಾಸ
ಕೊಟ್ಟೂರು: ತಾಲೂಕಿನ ಉಜ್ಜಯಿನಿಯಲ್ಲಿ ನಡೆದ ಲಿಂ.ಜಗದ್ಗುರು ಶ್ರೀ ಮರುಳಸಿದ್ದ ಶಿವಾಚಾರ್ಯರ ಪುಣ್ಯ ಸಂಸರಣೋತ್ಸವ, ಲಕ್ಷ ದೀಪೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು.
ಜಾತಿ ಧರ್ಮವನ್ನು ಮೀರಿ ಸಮಾಜದಲ್ಲಿನ ಎಲ್ಲರನ್ನೂ ಒಂದೇ ಭಾವದಿಂದ ಕಂಡಿರುವುದು ಸದ್ಧರ್ಮ ಪೀಠ. ಶ್ರೀ ಪೀಠಕ್ಕೆ ಜರಿಮಲಿ ಪಾಳೆಗಾರರಾದಿಯಾಗಿ ಅನೇಕರು ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ.
ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನ ಹಂಪಿಯAತೆ ಸುಂದರ ಕಲಾಶಿಲ್ಪದೊಂದಿಗೆ ಕಂಗೊಳಿಸುತ್ತಿದೆ. ಪಂಚ ಪೀಠಗಳಲ್ಲಿನ ಸದ್ಧರ್ಮ ಪೀಠ ನಮ್ಮ ಭಾಗದಲ್ಲಿರುವುದು ಎಲ್ಲರ ಸುಕೃತವೂ ಆಗಿದೆ. ಶ್ರೀ ಪೀಠಕ್ಕೆ ನಿತ್ಯ ಹಾಗೂ ಜಾತ್ರ ಸಮಯದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೀಠದ ಮೂಲ ಸೌಕರ್ಯ ಅಭಿವೃದ್ದಿಯೊಂದಿಗೆ ಉಜ್ಜಯಿನಿಯನ್ನು ಪ್ರವಾಸಿ ತಾಣವಾಗಿಸುವ ಕುರಿತು ವಿಶೇಷ ಯೋಜನೆ ಸಿದ್ದಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಲಿಂ.ಜಗದ್ಗುರು ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ತಮ್ಮ ಜೀವನದುದ್ದಕ್ಕೂ ಭಕ್ತರಿಗಾಗಿ ಮಿಡಿಯುತ್ತಿದ್ದರು. ಅವರು ಪೀಠಕ್ಕೆ ಬಂದ ನಂತರ ನಿತ್ಯ ಪ್ರಸಾದ ಸೇರಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದರು. ಅಂತಹ ಜಗದ್ಗುರುಗಳ ಕೃಪೆಯೊಂದಿಗೆ ಇಂದಿನ ಜಗದ್ಗುರುಗಳ ಅವರ ಆಶಯಗಳನ್ನು ಈಡೇರಿಸುತ್ತಿದ್ದಾರೆ. ಇದಕ್ಕೆ ಶಾಸಕನಾಗಿ ನಾನು ಎಲ್ಲ ಸಹಕಾರವನ್ನು ಎಂದಿಗೂ ನೀಡುತ್ತೇನೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಉಜ್ಜಯಿನಿ ಸದ್ಧರ್ಮ ಪೀಠದಿಂದ ಅಕ್ಷರ ಹಾಗೂ ಅನ್ನ ದಾಸೋಹ ಎಂದಿಗೂ ನಡೆಯುತ್ತಿದೆ. ಪೀಠದಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗುವುದು. ಇದಕ್ಕೆ ಸರಕಾರದಿಂದ ಅನುದಾನವೂ ಅಗತ್ಯವಾಗಿದ್ದು, ಶಾಸಕ ಶ್ರೀನಿವಾಸ ಅವರು ಸರಕಾರದೊಂದಿಗೆ ಚರ್ಚಿಸಿ ಅಗತ್ಯ ಅನುದಾನವನ್ನು ಶೀಘ್ರ ತರುವಂತಾಗಲಿ ಎಂದರು.
ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಕೆ.ನೇಮರಾಜನಾಯ್ಕ, ಬಿ.ಪಿ.ಹರೀಶ್, ಬಿ.ದೇವೇಂದ್ರಪ್ಪ, ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕರಾದ ಪಿ.ಟಿ. ಪರಮೇಶ್ವರನಾಯ್ಕ, ಎಸ್.ವಿ.ರಾಮಚಂದ್ರಪ್ಪ, ಜ್ಞಾನಗುರು ವಿದ್ಯಾಪೀಠ ಕಾರ್ಯದರ್ಶಿ ಎಂಎAಜೆ ಹರ್ಷವರ್ಧನ ಇತರರು ಇದ್ದರು. ವೇದಿಕೆಯಲ್ಲಿ ಪ್ರತಿಭಾವಂತ ಯೋಗಪಟುಗಳು ಯೋಗ ಪ್ರದರ್ಶಿಸಿದರು. ಲಿಂ.ಜಗದ್ಗುರು ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳ ಭಾವಚಿತ್ರಕ್ಕೆ ಎಲ್ಲರೂ ಪುಷ್ಪ ನಮನ ಅರ್ಪಿಸಿದರು.
ಮಹೇಶ್ವರ ಸ್ವಾಮಿ ನಂದಿಪುರ, ಪ್ರಶಾಂತ್ ಸಾಗರ ಕೂಡ್ಲಿಗಿ,ಕಲ್ಯಾಣ ಸ್ವಾಮಿ, ವರ ಸದ್ಯೋಜಾತ ಸ್ವಾಮಿ ಹರಪನಹಳ್ಳಿ, ಬಿಳಿಕೆ ಶ್ರೀಗಳು ತಾವರೆಕೆರೆ ಶ್ರೀಗಳು,
ಎನ್ ಟಿ ಶ್ರೀನಿವಾಸ್ ಕೂಡ್ಲಿಗಿ ಶಾಸಕರು , ಬಿಪಿ ಹರೀಶ್ ಹರಿಹರ ಶಾಸಕರು, ನಿಂಗಮ್ಮ ಗ್ರಾಮ ಪಂಚಾಯತಿ ಅಧ್ಯಕ್ಷರು ಉಜ್ಜಯಿನಿ. ಯಶವಂತರಾಯ ಗೌಡ ಪಟೇಲ್ ಇಂಡಿ ಶಾಸಕರು,
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ