ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಿ : ಶಬನಾ ಬೇಗಂ.ಎಂ
ವರದಿ : ಗ್ಯಾನಪ್ಪ ದೊಡ್ಡಮನಿ
ಮಸ್ಕಿ : ವೈಜ್ಞಾನಿಕ ಸಂಶೋಧನಾ ಪರಿಷತ್ ನಡೆಸುವ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ಈ ಬಾರಿ ಲಿಂಗಸಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ 3ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಾಲ್ಲೂಕಿನ
ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷರಾದ ಶಬನಾ ಬೇಗಂ.ಎಮ್ ರವರು ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದೇ ಕಳೆದ ಎರಡು ವರ್ಷಗಳಿಂದ ಈಗಾಗಲೇ ವೈಜ್ಞಾನಿಕ ಸಮ್ಮೇಳನ ನಡೆಸಲಾಗಿದೆ. ಈ ಬಾರಿಯೂ ಕೂಡ ಡಿಸೆಂಬರ್ 29, 30ರಂದು ಸಮ್ಮೇಳನ ನಡೆಯಲಿದೆ.3ನೇ ಸಮ್ಮೇಳನವನ್ನು ಪಟ್ಟಣದಲ್ಲಿ ನಡೆಸಲು ವೈಜ್ಞಾನಿಕ ಸಂಶೋಧನಾ ಪರಿಷತ್ ತೀರ್ಮಾನಿಸಿ ಅದಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.
ಭವ್ಯ ವೇದಿಕೆ: ಪಟ್ಟಣದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಸಮ್ಮೇಳನಕ್ಕೆ ವೇದಿಕೆ ಸಿದ್ದಗೊಂಡಿದೆ. 80x40 ಅಳತೆಯ ಸಮಾರಂಭದ ಮುಖ್ಯವೇದಿಕೆ, 10 ಸಾವಿರ ಗಣ್ಯರು ಹಾಗೂ ಸಾರ್ವಜನಿಕರು ಕೂರಲು ಆಸನದ ವ್ಯವಸ್ಥೆ ಊಟ ಹಾಗೂ ವಿವಿಧ ಮಳಿಗೆಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಮಾರಂಭಕ್ಕೆ ಬಂದವರಿಗೆ ಎರಡು ದಿನಗಳ ಕಾಲ ವಿವಿಧ ರುಚಿಕರವಾದ ಊಟದ ವ್ಯವಸ್ಥೆ ತಯಾರಿ ಮಾಡಿಕೊಳ್ಳಲಾಗಿದೆ.
ಸಿಎಂ ಸಿದ್ದರಾಮಯ್ಯ ಚಾಲನೆ: 3ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು, ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲಾಗಿದೆ. ಇದಲ್ಲದೆ ಸಮಾರಂಭದಲ್ಲಿ ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಹಾಗೂ ಚಿಂತಕರು, ಹೀಗೆ ಅನೇಕ ಜನರು ಭಾಗವಹಿಸುತ್ತಾರೆ.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಅದರಿಂದ ಮಸ್ಕಿ ತಾಲ್ಲೂಕಿನ ಎಲ್ಲಾ ನಾಗರಿಕರು ಲಿಂಗಸಗೂರು ನಲ್ಲಿ ಶುಕ್ರವಾರ ದಿಂದ ನಡೆಯುವ 3ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಸ್ಕಿ ತಾಲ್ಲೂಕಿನ
ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷರಾದ ಶಬನಾ ಬೇಗಂ.ಎಮ್ ರವರು ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ