ಪಿಂಚಣಿ ಅದಾಲತ್ 25 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ
ವರದಿ ಗ್ಯಾನಪ್ಪ ದೊಡ್ಡಮನಿ
ಮಸ್ಕಿ : ತಾಲೂಕಿನ ಪಾಮನಕಲ್ಲೂರು ಹೋಬಳಿಯ ಯತಗಲ್ ಗ್ರಾಮದ ಮನೆ ಬಾಗಿಲಿಗೆ ಪಿಂಚಣಿ ಅದಾಲತ್ ಕಾರ್ಯಕ್ರಮ ಆಯೋಜನೆಯ ಮಾಡಿ ಸ್ಥಳದಲ್ಲೇ 25 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಿ ಮಸ್ಕಿ ತಾಲೂಕಿನ ಕರ್ತವ್ಯನಿರತ ದಿನಗಳಲ್ಲಿಯೇ ಮರೆಯಲಾಗದ ದಿನ ಎಂದು ಡಾಕ್ಟರ್ ಮಲ್ಲಪ್ಪ ಕೆ ಗ್ರೇಡ್ 2 ತಹಶೀಲ್ದಾರ್ ಮಸ್ಕಿ ಸಂತೋಷ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯ ಆದೇಶದಂತೆ ಬುಧವಾರ ಮನೆ ಬಾಗಿಲಿಗೆ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಂಗವಾಗಿ ಇಂದು ಯತಗಲ್ ಗ್ರಾಮದ ಬಡ ಕುಟುಂಬದ ಸೌಕರ್ಯ ವಂಚಿತ 25 ಕ್ಕೂ ಹೆಚ್ಚಿನ ಅರ್ಹ ಪಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರವನ್ನು ಸ್ಥಳದಲ್ಲಿಯೇ ವಿತರಿಸಿ ಮಾತನಾಡುತ್ತಾ ನನ್ನ ವೃತ್ತಿ ಜೀವನದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮಸ್ಕಿ ತಾಲೂಕಿನ ಕರ್ತವ್ಯ ನಿರತ ದಿನಗಳಲ್ಲಿಯೇ ಮರೆಯಲಾಗದ ಸಂತೋಷದ ದಿನ ಯಾಕೆಂದರೆ ಇಂತಹ ಬಡ ಕುಟುಂಬದ ಜನತೆಯ ಮನೆ ಬಾಗಿಲಿಗೆ ಬಂದು ಅವರ ಕಷ್ಟವನ್ನು ಆಲಿಸಿ ಆದೇಶ ಪತ್ರವನ್ನು ವಿತರಿಸುವ ಕ್ಷಣ ಎಲ್ಲಿಲ್ಲದ ಸಂತೋಷ ತಂದಿದೆ ಎಂದು ಡಾಕ್ಟರ್ ಮಲ್ಲಪ್ಪ ಕೆ ಗ್ರೇಡ್ 2 ತಹಶೀಲ್ದಾರ್ ಮಸ್ಕಿ ರವರು ಹೇಳಿದರು.
ಇದೇ ಸಂದರ್ಭದಲ್ಲಿ ದೇವರಾಜ್ ಮಾನವಿ ಉಪ ತಹಶೀಲ್ದಾರ್ ಪಾಮನಕಲ್ಲೂರು ಹೋಬಳಿ, ಅರಳಪ್ಪ ಕಂದಾಯ ನಿರೀಕ್ಷಕರು ಪಾಮನಕಲ್ಲೂರು ಹೋಬಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಸಾರ್ವಜನಿಕರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ