ಹೂವುಗಳ ರಾಶಿಯೊಂದಿಗೆ ಅಲಂಕಾರ ಗೊಂಡ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ.
ಕೊಟ್ಟೂರು : ಲಕ್ಷಾಂತರ ಭಕ್ತರ ಆರಾಧ್ಯದೈವ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠವನ್ನು ಕಾರ್ತೀಕೋತ್ಸವದ ಮುನ್ನಾ 13ನೇ ಶ್ರೀ ಸ್ವಾಮಿಯ ಬೆಳ್ಳ ಪಲ್ಲಕ್ಕಿ ಮಹೋತ್ಸವದ ಸೋಮವಾರದ ನಿಮಿತ್ತ ಶ್ರೀಸ್ವಾಮಿಯ ಪರಮ ಭಕ್ತರಾದ ಪಟ್ಟಣದ ಸಹೋದರ ಬಣಕಾರ ಕೊಟ್ರೇಶ ಮತ್ತು ಮೂಗಣ್ಣ ಇವರು ಇಡೀ ದೇವಸ್ಥಾನವನ್ನು ವಿವಿಧ ಬಗೆಯ ಹೂವಿನ ಮಾಲೆಗಳೊಂದಿಗೆ ಶೃಂಗರಿಸಿ ಭಕ್ತರನ್ನು ಆಕರ್ಷಿಸುವ ಮೂಲಕ ಶ್ರೀಸ್ವಾಮಿಗೆ ತಮ್ಮ ಸೇವೆಯನ್ನು ಸಲ್ಲಿಸಿದರು.
ಕಳೆದ 7 ವರ್ಷಗಳಿಂದ ಪ್ರತಿ ಕಾರ್ತೀಕ ಮಾಸದಲ್ಲಿ ದೇವಸ್ಥಾನವನ್ನು ಹೂವುಗಳಿಂದ ಶೃಂಗರಿಸುವ ಸೇವೆಯನ್ನು ಮುಂದುವರೆಸಿಕೊAಡು ಬಂದಿರುವ ಭಕ್ತ ಸಹೋದರರಾದ ಬಣಕಾರ ಕೊಟ್ರೇಶ ಮತ್ತು ಮೂಗಣ್ಣ ಈ ಭಾರಿ 8ನೇ ವರ್ಷದಲ್ಲೂ ಭರ್ಜರಿ ಹೂವುಗಳ ರಾಶಿಯೊಂದಿಗೆ ದೇವಸ್ಥಾನವನ್ನು ಶೃಂಗರಿಸುವ ಸೇವೆಗೈದರು.
ದೇವಸ್ಥಾನವನ್ನು ಹೂವುಗಳಿಂದ ಶೃಂಗರಿಸಲೆಂದೇ ಚಿತ್ರದುರ್ಗದಿಂದ ವಿಶೇಷವಾಗಿ ೯ ವಿಧದ ಹೂವುಗಳ 2 ಟನ್ ರಾಶಿಯೊಂದಿಗೆ ಶ್ರೀ ಸ್ವಾಮಿ ಮತ್ತು ದೇವಸ್ಥಾನವನ್ನು ಸಂಪೂರ್ಣ ಅಲಂಕರಿಸಿದರು
ಈ ಸೇವೆಯನ್ನು ಸಲ್ಲಿಸಲೆಂದೇ ಭಾನುವಾರ ಇಡೀ ರಾತ್ರಿ ದೇವಸ್ಥಾನದ ಬಳಿಯ ಕೋಟೆ ಭಾಗದ ಯುವಕರು ಭಕ್ತರು ಮತ್ತಿತರರೊಡಗೂಡಿ ಶೃಂಗರಿಸುವ ಕಾರ್ಯ ಕೈಗೊಂಡರು. ಸೋಮವಾರದ ಬೆಳಗಿನ ಐದು ಗಂಟೆಯೊಳಗೆ ಹೂಗಳ ಅಲಂಕಾರದೊAದಿಗೆ ಕೊಟ್ಟೂರೇಶ್ವರ ಸ್ವಾಮಿ ವಿಶೇಷವಾಗಿ ಕಂಗೋಳಿಸಲು ಸಿದ್ದಗೊಂಡಿತು.
ಹೂಗಳಿಂದ ಶೃಂಗಾರಗೊAಡ ಶ್ರೀಸ್ವಾಮಿಯ ದೇವಸ್ಥಾನವನ್ನು ಸೋಮವಾರ ದಿನವಿಡೀ ಭಕ್ತರು ಕಣ್ತುಂಬಿಕೊಂಡು ಶ್ರೀಸ್ವಾಮಿಯ ದರ್ಶನಾರ್ಶಿವಾದ ಪಡೆದುಕೊಂಡರಲ್ಲದೆ ಬಹುತೇಕರು ತಮ್ಮ ಮೊಬೈಲ್ ಕ್ಯಾಮರಗಳಿಂದ ಶೃಂಗಾರಗೊAಡ ದೇವಸ್ಥಾನವನ್ನು ಸೆರೆ ಹಿಡಿದರು.
ಕೋಟ್ 01
ಶ್ರೀಗುರುಕೊಟ್ಟೂರೇಶ್ವರ ಸ್ವಾಮಿ ನಮ್ಮ ಮನೆ ದೇವರಾಗಿದ್ದು ಹರಕೆ ಹೊತ್ತ ಎಲ್ಲಾ ಕಷ್ಟ ಕಾರ್ಪಣ್ಯಗಳು ಕರಗಿ ನಮ್ಮ ಬಯಕೆಗಳನ್ನು ಶ್ರೀಸ್ವಾಮಿ ಈಡೇರಿಸುತ್ತಿದ್ದಾರೆ. ಶ್ರೀಸ್ವಾಮಿ ಆರ್ಶಿರ್ವಾದದಿಂದ ನಮ್ಮ ಕುಟುಂಬ ಸುಖ ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸುತ್ತಿದೆ. ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನವನ್ನು ಹೂವುಗಳಿಂದ ಶೃಂಗರಿಸುವ ಕಾರ್ಯವನ್ನು ಮುಂಬರುವ ವರ್ಷಗಳಲ್ಲು ಸಹ ಮುಂದುವರೆಸಿಕೊಂಡು ಹೋಗುವ ಮೂಲಕ ಸ್ವಾಮಿಗೆ ನಮ್ಮದೆ ಕಿರು ಸೇವೆ ಸಲ್ಲಿಸುತ್ತಿದ್ದೇವೆ: ಬಣಕಾರ ಕೊಟ್ರೇಶ್, ಮೂಗಣ್ಣ ಕೊಟ್ಟೂರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ