ರಾಷ್ಟ್ರೀಯ ಹೆದ್ದಾರಿ ಮೇಲೆ ಅಕ್ರಮ ಮರಳು ಸಾಗಾಟ ವಾಹನ ಸವಾರರ ಪರದಾಟ

ವರದಿ : ಗ್ಯಾನಪ್ಪ ದೊಡ್ಡಮನಿ

ಮಸ್ಕಿ : ತಾಲೂಕಿನ ಮುದಬಾಳ ಸಮೀಪದ ರಾಷ್ಟ್ರೀಯ ಹೆದ್ದಾರಿ 150 A ರಸ್ತೆ ಹಾದು ಹೋಗುವ ಯು ಟರ್ನ್ ಬಳಿ ರಸ್ತೆಯ ಮದ್ಯ ಭಾಗದಲ್ಲಿಯೇ ಮರಳು ಚಲ್ಲಾ ಪಿಲ್ಲಿಯಾಗಿ ಬಿದ್ದಿರುವುದರಿಂದ ವಾಹನ ಸವಾರರು ಜೀವ ಭಯದಲ್ಲಿಯೇ ಓಡಾಡುವ ಸ್ಥಿತಿ ನಿರ್ಮಾಣ.

ಮುದಬಾಳ ಸಮೀಪದ ರಾಷ್ಟ್ರೀಯ ಹೆದ್ದಾರಿ 150 A ರಸ್ತೆ ಹಾದು ಹೋಗುವ ಅಕ್ರಮವಾಗಿ ಮರಳು ಸಾಗಾಟದ ವಾಹನಗಳು ಅತೀ ಹೆಚ್ಚು ಓಡಾಡುತ್ತಿದ್ದು, ಆ ವಾಹನಗಳಲ್ಲಿ ಮಿತಿಗಿಂತಲೂ ಅತೀ ಹೆಚ್ಚಿನ ಮರಳು ತುಂಬಿಕೊಂಡು ಹೋಗುತ್ತಿರುವುದರಿಂದ ರಸ್ತೆಯು (ಟರ್ನಿಂಗ್) ಯು ಆಕಾರದಲ್ಲಿ ಇದ್ದು ಆ ಮರಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬೀಳುವುದರಿಂದ ರಸ್ತೆಯಲ್ಲಿ ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನ ಸವಾರರಿಗೆ ತುಂಬಾ ಅಪಾಯಕಾರಿಯಾಗಿದೆ.

ಇದರಿಂದಾಗಿ ಸಾರ್ವಜನಿಕರು ಜೀವ ಭಯದಲ್ಲಿ ವಾಹನ ಸವಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವಿಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣಿದ್ದು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

ಈಗಾಗಲೇ ಇದೇ ಮಾರ್ಗದಲ್ಲಿ ಅತೀ ಹೆಚ್ಚು ಅಪಘಾತ ಸಂಭವಿಸಿ ಸಾವನಪ್ಪಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಒಂದು ವರ್ಷದ ಹಿಂದೆ ಒಂದೇ ಕುಟುಂಬದ ಮೂರು ಜನ ಸಾವನ್ನಪ್ಪಿದ್ದು ಆ ಘಟನೆ ಮರುಕಳಿಸದಂತೆ ಹಾಗೂ ಸಾರ್ವಜನಿಕರ ರಕ್ಷಣೆಯ ಹಿತ ದೃಷ್ಟಿಯಿಂದ ಯಾವುದೇ ಸಾವು-ನೋವು ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಕೊಟ್ಟು ರಸ್ತೆ ಮೇಲೆ ಇರುವಂತ ಮರಳನ್ನು ತೆರವುಗೊಳಿಸಿ ವಾಹನ ಸವಾರರು ಸರಾಗವಾಗಿ ಚಲಿಸಲು ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ