ಕರ್ನಾಟಕ ಸಂಭ್ರಮ 50ರ ರಥಯಾತ್ರೆ ಮಸ್ಕಿ ತಾಲೂಕಿಗೆ ಶುಕ್ರವಾರ ಆಗಮನ

ಮಸ್ಕಿ : ಕರ್ನಾಟಕ ಸಂಭ್ರಮ-50ರ ರಥಯಾತ್ರೆಯು ತಾಲೂಕಿನಲ್ಲಿ ಡಿ.08 ರಿಂದ 09 ರವರೆಗೆ ಸಂಚರಿಸಲಿದ್ದು,ಈ ಸುವರ್ಣಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಸುಧಾ ಅರಮನೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಟ್ಟಣದ ತಾಲೂಕ ಆಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಸಭೆ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಕರ್ನಾಟಕ ಸಂಭ್ರಮ-50ರ ರಥಯಾತ್ರೆ ಸಂಚಾರ ಕುರಿತಂತೆ ಕನ್ನಡಪರ ಸಂಘಟನೆಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವವನ್ನು ವರ್ಷವಿಡೀ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಕರ್ನಾಟಕ ಸಂಭ್ರಮ-50ರ ರಥಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು.

ಅದೇ ರೀತಿಯಾಗಿ ಡಿ.08 ರಂದು ಮಸ್ಕಿ ತಾಲೂಕಿಗೆ ರಥಯಾತ್ರೆಯು ಆಗಮಿಸಲಿದ್ದು,ಎರಡು ದಿನ ಕಾಲ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಂಚರಿಸಲಿದೆ. ತಾಲೂಕು ಮಟ್ಟದ ಅಧಿಕಾರಿಗಳು ರಥಯಾತ್ರೆಯ ಅದ್ದೂರಿ ಸ್ವಾಗತಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ಸಂಭ್ರಮ-50ರ ರಥಯಾತ್ರೆಯು ಡಿ.08ರಂದು ತಾಲೂಕಿನ ಮುದ್ದಾಪುರ ಗ್ರಾಮಕ್ಕೆ ಆಗಮಿಸಲಿದ್ದು.ಅಲ್ಲಿ ಶಾಸಕರು, ತಹಸೀಲ್ದಾರರು, ತಾಪಂ ಇಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸುವರು.ಡಿ.09ರಂದು ಮಸ್ಕಿ ನಗರಕ್ಕೆ ಆಗಮಿಸಲಿದೆ ಎಂದು ಹೇಳಿದರು.

ಕರ್ನಾಟಕ ಸಂಭ್ರಮ-50ರ ರಥಯಾತ್ರೆ ಸಂಚಾರ ಹಿನ್ನೆಲೆಯಲ್ಲಿ ತಾಲೂಕ ಆಡಳಿತ,ಹಾಗೂ ಪುರಸಭೆ ವತಿಯಿಂದ ಡಿ.08,09 ಎರಡು ದಿನಗಳ ಕಾಲ ತಾಲೂಕ ಮಟ್ಟದಲ್ಲಿ ವಿಜೃಂಭಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು

ಪಟ್ಟಣದ ಭ್ರಮರಾಂಬದೇವಿ ದೇವಸ್ಥಾನದಿಂದ ಬೆಳಗ್ಗೆ09 ಗಂಟೆಗೆ ರಥ ಯಾತ್ರೆ ಪ್ರಾರಂಭ , ವಿವಿಧ ಸಾಂಸ್ಕೃತಿಕ ಕಲಾತಂಡಗಳು ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳಿಂದ ಭವ್ಯ ಮೆರವಣಿಗೆ ನಡೆಯಲಿದ್ದು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳನ್ನೊಳಗೊಂಡಂತೆ ಭಾಗ ವಹಿಸಲಿದ್ದಾರೆ ಈ ಕುರಿತು ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ತಾಲೂಕಿನ ವಿವಿಧ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ರಥಯಾತ್ರೆ ಸಂಚಾರ ವಿವರ ಕರ್ನಾಟಕ ಸಂಭ್ರಮ-50ರ ರಥಯಾತ್ರೆಯು ಡಿ.08ರಂದು ತಾಲೂಕು ವ್ಯಾಪ್ತಿಯ ಮುದ್ದಾಪುರ ಗ್ರಾಮಕ್ಕೆ ಆಗಮಿಸಲಿದ್ದು , ನಂತರ ಕೋಳಬಾಳ, ಕಣ್ಣೂರು, ಹಂಚಿನಾಳ,ಗುಡುಗಲದಿನ್ನಿ, ಹಂಪನಾಳ, ತಲೆಖಾನ್, ಮೆದಕಿನಾಳ,ಅಂತರಗಂಗಿ ಮಾರ್ಗವಾಗಿ ಮಸ್ಕಿಪಟ್ಟಣಕ್ಕೆ ಬಂದು ತಲುಪಲಿದೆ. ಡಿ,09 ರಂದು ಬೆಳಿಗ್ಗೆ 09 ಗಂಟೆಗೆ ಭ್ರಮರಂಭಾದೇವಿ ದೇವಸ್ಥಾನದಿಂದ ರಥಯಾತ್ರೆ ಪ್ರಾರಂಭವಾಗಿ ಚನ್ನಮ ವೃತ್ತ, ಅಶೋಕ ವೃತ್ತ, ಅಗಸಿ, ಖಲೀಲ ವೃತ್ತ, ದೈವದ ಕಟ್ಟಿ,ಕನಕ ವೃತ್ತ,ಬಸವ ವೃತ್ತ, ಸಂಚರಿಸಲಿದೆ ನಂತರ ಮಧ್ಯಾಹ್ನ ಸುಂಕನೂರ, ಕ್ಯಾತ್ನಟ್ಟಿ,ಉದ್ಬಾಳ, ಬಳಗಾನೂರ ಪಟ್ಟಣ, ಗೌಡನ ಬಾವಿವರೆಗೆ ರಥ ಯಾತ್ರೆ ಸಂಚರಿಸಲಿದೆ,ನಂತರ ಸಂತೆ ಕೆಲ್ಲೂರು ಮಾರ್ಗವಾಗಿ ಲಿಂಗಸುಗೂರು ತಾಲೂಕಿಗೆ ಬೀಳ್ಕೊಡಲಾಗುವುದು ಎಂದು ತಹಸಿಲ್ದಾರ್ ಸುಧಾ ಅರಮನೆ ಸಭೆಯಲ್ಲಿ ತಿಳಿಸಿದರು.

 ಇದೇ ಸಂದರ್ಭದಲ್ಲಿ ರಥಯಾತ್ರೆ ಸಂಚಾರ ಅದ್ದೂರಿಯಾಗಿ ಆಚರಣೆ ಮಾಡಲು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು. 

ಈ ವೇಳೆ ತಾಲೂಕ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ