ರೈತರು ಹೆಚ್ಚುವರಿ ಮೇವನ್ನು ಸರ್ಕಾರಕ್ಕೆ ಮಾರಾಟ ಮಾಡಲು ವಿನಂತಿ
ಕೊಟ್ಟೂರು: 2023-24ನೇ ಸಾಲಿನಲ್ಲಿ ಕೊಟ್ಟೂರು ತಾಲೂಕನ್ನು ಸರ್ಕಾರವು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿರುತ್ತದೆ. ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆಯಾಗದಂತೆ ಮುಂಜಾಗ್ರತಾ ಅಗತ್ಯ ಕ್ರಮಗಳನ್ನ ಕೈಗೊಳ್ಳುವಂತೆ ಸೂಚಿಸಿರುತ್ತದೆ. ಕಾರಣ ಕೊಟ್ಟೂರು ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಪೂರ್ವಸಿದ್ದತೆಯನ್ನ ಮಾಡಿಕೊಳ್ಳಬೇಕಾಗಿರುವುದರಿಂದ ಕೊಟ್ಟೂರು ತಾಲೂಕಿನ ರೈತರು ತಮ್ಮ ಬಳಿ ಇರುವ ಹೆಚ್ಚುವರಿ ಮೇವನ್ನು ಸರ್ಕಾರಕ್ಕೆ ಮಾರಾಟ ಮಾಡಲು ಬಯಸಿದಲ್ಲಿ ಮಾರಾಟ ಮಾಡಬಹುದಾದ ಮೇವಿನ ಲಭ್ಯತೆ, ಧರಪಟ್ಟಿ ಹಾಗೂ ವಿದದ ವಿವರಗಳನ್ನು ಪಶುಸಂಗೋಪನಾ ಇಲಾಖೆ, ಪಶು ಸಂಗೋಪನಾ ಇಲಾಖೆ, ಪಶು ಆಸ್ಪತ್ರೆ, ಕೊಟ್ಟೂರು ಇಲ್ಲಿಗೆ 15 ದಿನಗಳೊಳಗೆ ತಮ್ಮ ಹೆಸರನ್ನು ನೊಂದಾಯಿಸುವಂತೆ ಸಹಾಯಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ, ಕೊಟ್ಟೂರು ಹಾಗೂ ಸದಸ್ಯರು, ತಾಲೂಕು ಬರಗಾಲ ಟಾಸ್ಕ್ ಫೋರ್ಸ್ ಸಮಿತಿ, ಕೊಟ್ಟೂರು ಇವರು ರೈತರಲ್ಲಿ ಮನವಿಯನ್ನು ಮಾಡಿರುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ