ಗುರು ಸಿದ್ಧೇಶ್ವರ ಬೃಹನ್ಮಠ ದಿಂದ ಹಂಪರಗುಂದಿಗೆ ಸನ್ಮಾನ

ಮಸ್ಕಿ: ಗುಳೇದಗುಡ್ಡದ ಶ್ರೀ ಜಗದ್ಗುರು ಗುರು ಸಿದ್ಧೇಶ್ವರ ಬೃಹನ್ಮಠದ ಪಟ್ಟಶಾಲಿ ನೇಕಾರ ಗುರುಪೀಠದ ವಾರ್ಷಿಕೋತ್ಸವ ಹಾಗು ಧಾರ್ಮಿಕ ಸಭೆಯಲ್ಲಿ ಅಪರೂಪದ ಸಮಾಜ ಸೇವಕ ರಾಮಣ್ಣ ಹಂಪರಗುಂದಿ ಯವರಿಗೆ ಶ್ರೀ ಮಠದಿಂದ ಸನ್ಮಾನಿಸಿ ಗೌರವಿಸಿದರು.


ಪರಮಪೂಜ್ಯ ಶ್ರೀ ಜಗದ್ಗುರು ಶ್ರೀ ಬಸವಸ್ವಾಮಿ ಪಟ್ಟದೊಡೆಯರು ಮಾತನಾಡಿ

ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ ರಾಯಚೂರು ಭಾಗದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ ಇವರು ಆರಂಭಿಸಿದ ಸಂಡೇ ಫಾರ್ ಸೋಷಿಯಲ್ ವರ್ಕ್ ಸೇವಾ ಕಾರ್ಯ ನಾಡಿನ ಯುವಕರಿಗೆ ಮಾದರಿ ಸೇವಾ ಕಾರ್ಯವಾಗಿದೆ ಹಾಗೂ ಅಭಿನಂದನ್ ಸ್ಪೂರ್ತಿ ಧಾಮವನ್ನು ಸ್ಥಾಪಿಸಿ ಅನಾಥ ಹಾಗೂ ಬಡ ಮಕ್ಕಳ ಪಾಲಿಗೆ ಸಂಜೀವಿನಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅದಕ್ಕಾಗಿ ನಮ್ಮ ಮಠದಿಂದ ರಾಮಣ್ಣ ಹಂಪರಗುಂದಿ ಯವರಿಗೆ ಗೌರವ ಅರ್ಪಿಸಲಾಯಿತು ಎಂದರು.

ಈ ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿ ಸಂಜೀವ ಚಂದ್ರಶೇಖರ ಗೌರ, ಎಸ್ ಜಿ ನಂಜಯ್ಯನಮಠ, ಉಪನ್ಯಾಸಕ ಸಹಜನಂದ ಕೆಂಗಲಗುತ್ತಿ, ಹಾಗೂ ಹಲವಾರು ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "