ಗ್ರಾಮ ಆಡಳಿತಾಧಿಕಾರಿ ತಾಲೂಕ ಸಂಘದ ಅಧ್ಯಕ್ಷರಾಗಿ ಮಾಂತೇಶ ಮುರಾರಿ ಆಯ್ಕೆ

ಮಸ್ಕಿ: ಮಸ್ಕಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ನೂತನ ತಾಲೂಕ ಅಧ್ಯಕ್ಷರ ಆಯ್ಕೆ ಸಂಬಂಧ ಬುಧವಾರದಂದು ನಡೆದ ತಾಲೂಕ ಗ್ರಾಮ ಆಡಳಿತ ಅಧಿಕಾರಿಗಳ ಸಭೆಯಲ್ಲಿ ನೂತನ ತಾಲೂಕ ಅಧ್ಯಕ್ಷರಾಗಿ ಮಸ್ಕಿ ತಾಲೂಕಿನ ಮಾಂತೇಶ ಮುರಾರಿ ಇವರು ಸರ್ವ ಸದಸ್ಯರ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.

 ಸಭೆಯ ಅಧ್ಯಕ್ಷತೆಯನ್ನು ನಿಕಟ ಪೂರ್ವ ಅಧ್ಯಕ್ಷರಾದ ಅಮರೇಶ ನಾಯಕ ಇವರು ವಹಿಸಿದ್ದರು. ನೂತನ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾದ ಮಹಾಂತೇಶ್ ಮುರಾರಿ ಮಾತನಾಡಿ ಇಲಾಖೆಯ ಸಹೋದ್ಯೋಗಿಗಳ ಹಿತ ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೂ ಸದಾ ನೌಕರರ ಧ್ವನಿಯಾಗಿರುತ್ತೇನೆ ಎಂದರು.

ಗೌರವಾಧ್ಯಕ್ಷರಾದ ಸೋಮನಗೌಡ ಇವರು ಸಂಘಟನೆಗಾಗಿ ಹಗಲು ಇರುಳು ಎನ್ನದೆ ಶ್ರಮಿಸಬೇಕು ಎಲ್ಲಾ ನೌಕರರ ಹಿತ ಕಾಪಾಡಬೇಕೆಂದು ಸಲಹೆ ನೀಡಿದರು.

ಪದಾಧಿಕಾರಿಗಳ ಆಯ್ಕೆ ಗೌರವ ಅಧ್ಯಕ್ಷರಾಗಿ- ಸೋಮನ ಗೌಡ, ಅಧ್ಯಕ್ಷರಾಗಿ ಮಾಂತೇಶ ಮುರಾರಿ, ಉಪಾಧ್ಯಕ್ಷರಾಗಿ -ದುರ್ಗಪ್ಪ,ಕಾರ್ಯದರ್ಶಿಯಾಗಿ- ಲಿಂಗಪ್ಪ,ಖಜಾಂಚಿಯಾಗಿ - ಗಂಗಪ್ಪ, ಇವರನ್ನು ತಾಲೂಕಿನ ಸರ್ವ ಗ್ರಾಮ ಆಡಳಿತ ಅಧಿಕಾರಿಗಳ ಒಮ್ಮತದಿಂದ ಆಯ್ಕೆ ಮಾಡಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*