ಅನುಚಿತವಾಗಿ ವರ್ತಿಸಿದ ಪ್ರಾಂಶುಪಾಲ ಹಾಗೂ ಸ್ಟಾಪ ನರ್ಸ್ ಅನ್ನು ವರ್ಗಾವಣೆ ಮಾಡುವಂತೆ ಕರವೇ ಮನವಿ
ಮಸ್ಕಿ : ಪಟ್ಟಣದ ಮುದುಗಲ್ ರಸ್ತೆ ಬಳಿ ಇರುವ ಮೊರಾರ್ಜಿ ದೇಸಾಯಿ ಎಸ್ಸಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಪ್ರಾಂಶುಪಾಲ ಹಾಗೂ ಸ್ಟಾಪ್ ನರ್ಸ್ ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಿ ವಸತಿ ಶಾಲೆಯಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಕರವೇ ಸಂಘಟನೆಯ ದುರ್ಗರಾಜ್ ವಟಗಲ್ ಹಾಗೂ ಆರ್. ಕೆ ನಾಯಕ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ವಸತಿ ಶಾಲೆಯಲ್ಲಿ ಕಳೆದ ಹಲವು ದಿನಗಳಿಂದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು
ವಸತಿ ಶಾಲೆಯಲ್ಲಿರುವ ಸಮಸ್ಯೆಗಳು ಹೇಳಲು ಹೋದರೆ ನಿಮ್ಮ ಇಂಟರ್ನಲ್ ಮಾರ್ಕ್ಸ್ ಗಳನ್ನು ಕಟ್ ಮಾಡಿ ಟಿಸಿ ಕೊಟ್ಟು ಮನೆಗೆ ಕಳುಹಿಸುತ್ತೇನೆ ಎಂದು ಭಯ ಹುಟ್ಟಿಸುತ್ತಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ವಸತಿ ಶಾಲೆಯಲ್ಲಿ ಕಳೆದ ಆರು ತಿಂಗಳಿನಿಂದ ಶೌಚಾಲಯ ಹಾಗೂ ಸ್ನಾನದ ಕೋಣೆ ಸ್ವಚ್ಛ ಮಾಡದೆ ಇರುವುದರಿಂದ ವಾಸನೆ ಬರುತ್ತಿದೆ ಇದರಿಂದ ಬಹಳಷ್ಟು ಜನ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಪ್ರಥಮ ಚಿಕಿತ್ಸೆ ನೀಡುವಂತೆ ಸ್ಟಾಪ್ ನರ್ಸ್ ಅನ್ನು ಕೇಳಿದರೆ ಅವರು ಸ್ಪಂದಿಸುತ್ತಿಲ್ಲ. ಅವರು ಹೋಗಿ ಪ್ರಾಂಶುಪಾಲರ ಬಳಿ ದೂರು ನೀಡುತ್ತಾರೆ. ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಅಲ್ಲದೆ ವಸತಿ ಶಾಲೆಯಲ್ಲಿ ಮೇನು ಚಾರ್ಟ್ ಪ್ರಕಾರ ಆಹಾರಗಳನ್ನು ನೀಡದೆ ಕಳಪೆ ಗುಣಮಟ್ಟದಲ್ಲಿ ಆಹಾರಗಳನ್ನು ವಿತರಿಸುತ್ತಿದ್ದಾರೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮುಂದೆ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು ಆದ್ದರಿಂದ ಕೂಡಲೆ
ಪ್ರಾಂಶುಪಾಲರು ಹಾಗೂ ಸ್ಟಾಪ್ ನರ್ಸ್ ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಿ ವಸತಿ ಶಾಲೆಯಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್ ಪೋತೇದಾರ್ ಅವರಿಗೆ ಲಿಖಿತ ದೂರನ್ನು ವಿದ್ಯಾರ್ಥಿಗಳು ನೀಡಿದರು.
ವಿದ್ಯಾರ್ಥಿಗಳಿಗೆ ಆಗಿರುವ ಸಮಸ್ಯೆಗಳ ಕುರಿತು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮನವಿ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ನಾವೇ ಬಗೇ ಹರಿಸುವ ಸಮಸ್ಯೆಗಳನ್ನು ಇಲ್ಲೇ ಬಗೆಹರಿಸಿ ದೊಡ್ಡ ಕರ್ಚಿನ ಕಾರ್ಯಗಳನ್ನು ಕ್ರೈಸ್ಟ್ ಸಂಸ್ಥೆಗೆ ಪತ್ರದ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳಿದರು.
ಈ ಸಂದರ್ಭದಲ್ಲಿ ಕರವೇ ನಾರಾಯಣ ಗೌಡ ಬಣದ ಅಧ್ಯಕ್ಷ ದುರ್ಗರಾಜ ವಟಗಲ್, ತಾಲೂಕು ಅಧ್ಯಕ್ಷ ಆರ್. ಕೆ.ನಾಯಕ, ಉಮೇಶ್ ಸಿದ್ನಾಳ ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ಲಿಂಗಸ್ಗೂರು,ಮೌನೇಶ್ ಹಸಮಕಲ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ