67ನೇ ಮಹಾ ಪರಿನಿಬ್ಬಣ ಅಂಗವಾಗಿ ಬೃಹತ್ ಜಾಗೃತಿ ಸಮಾವೇಶ --ಪರಶುರಾಮ್ ಕೆರೆಹಳ್ಳಿ
ವರದಿ -- ಮಂಜುನಾಥ ಕೋಳೂರು, ಕೊಪ್ಪಳ
ಕೊಪ್ಪಳ ಡಿ- 21 : -- ದೇಶದಲ್ಲಿ ಆರ್ಯರ ಕುತಂತ್ರದಿಂದ ಭಾರತದ ಮೂಲ ನಿವಾಸಿಗಳಾದ ಅಸ್ಪೃಶ್ಯರಿಗೆ ವಿದ್ಯೆ ,ಸಂಪತ್ತು ,ಆಯುಧ ಹೊಂದುವ ಅಧಿಕಾರ ನಿರಾಕರಿಸಿ ಪ್ರಾಣಿಗಳಿಗಿಂತ ಕೀಳಾಗಿ ಬದುಕುತ್ತಿದ್ದ ಅಸ್ಪೃಶ್ಯರ ಬದುಕಿಗೆ ಬೆಳಕಾಗಿ ಬಂದ ಬಾಬಾ ಸಾಹೇಬ್ ಬಿಆರ್ ಅಂಬೇಡ್ಕರ್ ಅವರು ಮನುವಾದಿಗಳ ವಿರುದ್ಧ ಹೋರಾಡಿ ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ಪರಿಕಲ್ಪನೆ ಯೊಂದಿಗೆ
ಮಾನವೀಯ ಸಂವಿಧಾನ ರಚಿಸಿ ಈ ದೇಶದ ಶೋಷಿತರಿಗೆ ಹಕ್ಕು ಅವಕಾಶ ಗಳನ್ನು ಪಡೆದು ಈ ದೇಶದ ಶೋಷಿತರಿಗೆ ಹಕ್ಕು ಅವಕಾಶಗಳನ್ನು ಕಲ್ಪಿಸಿಕೊಟ್ಟು ನನ್ನ ಜನ ಸಂವಿಧಾನಿಕ ಹಕ್ಕು ಅವಕಾಶಗಳನ್ನು ಪಡೆದು , ಈ ದೇಶವನ್ನುಆಳುವುದನ್ನು ನಾನು ಕಣ್ಣಾರೆ ನೋಡಬೇಕೆಂಬ ಅವರ ಬಹುದೊಡ್ಡ ಕನಸು ಈಡೇರುವ ಮೊದಲೇ ಡಿಸೆಂಬರ್ -೦6 - 1956 ರಲ್ಲಿ ಪರಿನಿಬ್ಬಣ ಹೊಂದಿದರು. ಎಂದು ಕರ್ನಾಟಕ ದಲಿತ ಸಂಘ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ್ ಕೆರೆಹಳ್ಳಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಈ ಕನಸು ನನಸಾಗೇ ಉಳಿಯಿತು .
ಅಂಬೇಡ್ಕರ್ ಅವರ ಪರಿಶ್ರಮದಿಂದ ಹಕ್ಕು ಅವಕಾಶಗಳನ್ನು ಪಡೆದು ಕಟ್ಟಾ ಅನುಯಾಯಿಗಳು ಅಂಬೇಡ್ಕರ್ ತೋರಿಸಿದ ಗುರಿಯನ್ನೆ ಮರೆತ ಪರಿಣಾಮ ದೇಶದಲ್ಲಿ ದಲಿತರ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವ ಪರಿಣಾಮ ಸಂವಿಧಾನವನ್ನು ಯಥವತ್ತವಾಗಿ ಜಾರಿ ಮಾಡುವಲ್ಲಿ ಇಲ್ಲಿವರೆಗೂ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ವಿಫಲವಾಗಿವೆ . ಎರಡನೇ ಅವಧಿಗೆ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾಯಿಸುವ ಉನ್ನಾರುನಡೆಸುತ್ತಿದೆ ಹಾಗೂ ದೇಶದಲ್ಲಿ ಅಘೋಷಿತ ಮನು ಸಂವಿಧಾನ ಜಾರಿಯ ತಯಾರಿಯಲ್ಲಿದೆ .ಇದಕ್ಕೆ ಕಡಿವಾನ ಹಾಕಿ ಸಂವಿಧಾನದ ರಕ್ಷಣೆ ಮತ್ತು ಯಥಾವತ್ ಸಂವಿಧಾನ ಜಾರಿಯಾಗಬೇಕಾದರೆ ಈ ದೇಶದಲ್ಲಿ ದಲಿತರು ಒಂದು ಪ್ರಬಲ ರಾಜಕೀಯ ಶಕ್ತಿ ಆಗಬೇಕು ಅನಿವಾರ್ಯತೆ ಇದೆ . ಕರ್ನಾಟಕದಲ್ಲಿ ದಲಿತರನ್ನು ಒಂದು ದೊಡ್ಡ ರಾಜಕೀಯ ಶಕ್ತಿಯನ್ನಾಗಿ ಸುವ ಬಹುದೊಡ್ಡ ಜವಾಬ್ದಾರಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ರಾಜ್ಯ ಸಮಿತಿ ರಾಜ್ಯಾದ್ಯಂತ ಸ್ವಾಭಿಮಾನಿ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರ ಆಶಯದಂತೆ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಇದೇ ದಿನಾಂಕ 31.12.2023 ರಂದು ತರಾಸು ರಂಗಮಂದಿರ ಚಿತ್ರದುರ್ಗದಲ್ಲಿ ರಾಜ್ಯ ಸಂಚಾಲಕರಾದ ಎಂ . ಸೋಮಶೇಖರವರ ನೇತೃತ್ವದಲ್ಲಿ ನಡೆಯುವ ಸಮಾವೇಶದಲ್ಲಿ , ರಾಜ್ಯ ಸಂಘಟನಾ ಸಂಚಾಲಕರಾದ ಎಂ ದೇವದಾಸ್, ವಿ ನಾರಾಯಣಸ್ವಾಮಿ, ಕವಾಲಿ ವೆಂಕಟರಮಣಪ್ಪ, ಅಂದಾನಿ ಸೋಮನಹಳ್ಳಿ ,ಪಿಎಂ ಕೃಷ್ಣಪ್ಪ ,ಎಚ್ಎನ್ ಸನಂದ ಕುಮಾರ್ ,ಹೆಗ್ಗೆರೆ ರಂಗಪ್ಪ, ಕಬ್ಬಳ್ಳಿ ಮೈಲಪ್ಪ, ರವಿಕುಮಾರ್ ವಾಗ್ ಮೇರೆ, ಚಂದ್ರಶೇಖರ್ ಬೆಂಗಳೂರ್, ಭರತ್ ಕುಮಾರ್ ಬೆಲ್ಲದ ಮಾಡು, ದಲಿತ ಮಹಿಳಾ ಒಕ್ಕೂಟ ರಾಜ್ಯ ಸಂಚಾಲಕಿ ಭಾಗ್ಯಮ್ಮ ನಾರಾಯಣಸ್ವಾಮಿ , ದಲಿತ ವಿದ್ಯಾರ್ಥಿ ಒಕ್ಕೂಟ ರಾಜ್ಯ ಸಂಚಾಲಕ ಉಚ್ಚಂಗಿ ಪ್ರಸಾದ್ , ರಾಜ್ಯ ಸಮಿತಿ ಸದಸ್ಯರಾದ ಶಿವಮೂರ್ತಿ ಭೀಮನಕೆರೆ ,ಸೈಬಣ್ಣ ಕುರಕುಂದಿ ,ಸಿಬಿ ನಂಜುಂಡಪ್ಪ, ದೇವಮ್ಮ ,ವೀರಭದ್ರಯ್ಯ ,ಕರಿಯಪ್ಪ, ವಿಭಾಗಿಯ ಸಂಚಾಲಕರಾದ ಭೀಮರಾಯ, ಡಿಕೆ ಅಂಕಯ್ಯ ,ಅಂಪೇಶ್ ಅರಗೋಲು, ವಿಭಾಗೀಯ ಸಂಚಾಲಕರಾದ ಮಾದೇವಸ್ವಾಮಿ ಬುಕ್ಕಳ್ಳಿ, ಮೂರ್ತಿಕಂಚಿನ ಕೋಟೆ, ಹನುಮಂತಪ್ಪ ನಾಯಕ್, ರಾಜ್ಯದ ಎಲ್ಲಾ ಜಿಲ್ಲಾ ಸಂಚಾಲಕರುಗಳು, ರಾಜ್ಯದ ಜಿಲ್ಲೆಯ ಎಲ್ಲಾ ತಾಲೂಕು ಸಂಚಾಲಕರಗಳು, ಚಿತ್ರದುರ್ಗ ಜಿಲ್ಲಾ ಸಂಚಾಲಕ ಜಿ ಆರ್ ಪ್ರಭಾಕರ್ , ಚಿತ್ರದುರ್ಗ ಜಿಲ್ಲಾಸಂಘಟನಾ ಸಂಚಾಲಕರು ,ಜಿಲ್ಲಾ ಸಮಿತಿ ಸದಸ್ಯರು, ಜಿಲ್ಲಾ ದಲಿತ ಮಹಿಳಾ ಒಕ್ಕೂಟ ಸಂಚಾಲಕರು, ಸಂಘಟನಾ ಸಂಚಾಲಕರು ತಾಲೂಕು ಸಮಿತಿ ,ನಗರ ಸಂಚಾಲಕರು ,ಸಂಘಟನಾ ಸಂಚಾಲಕರು ,ಹೊಸದುರ್ಗ ಪಟ್ಟಣ ಸಂಚಾಲಕರುl ಮೊಳಕಾಲ್ಮುರು ತಾಲೂಕು ಸಮಿತಿ ,ತಾಲೂಕು ಸಂಘಟನಾ ಸಂಚಾಲಕರುಗಳು ಭಾಗವಹಿಸುವರು.
ಈ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಅನುಯಾಯಿಗಳಾದ ನಾವು ಕೊಪ್ಪಳ ಜಿಲ್ಲೆಯಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಲ್ಲ ಪದಾಧಿಕಾರಿಗಳು ,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸೋನ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಂಚಾಲಕ ಪರಶುರಾಮ ಕೆರಹಳ್ಳಿ , ಕಲ್ಯಾಣ ಕರ್ನಾಟಕ ವಿಭಾಗೀಯ ಸಂಚಾಲಕ ಅಂಪೇಶ್ ಅರಗೋಲು ರವರು ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಕಾರ್ಯಕರ್ತರಿಗೆ ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಸಂಘಟನಾ ಸಂಚಾಲಕ ಹನುಮಂತಪ್ಪ ನಾಯಕ್ ವಡ್ರಟ್ಟಿ , ಜಿಲ್ಲಾ ಖಜಂಚಿ ಯಮನೂರಪ್ಪ ನಾಯಕ್ ಹುಲಿ ಹೈದರ, ಕೊಪ್ಪಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಸಿಂದಗಿ , ಯಲಬುರ್ಗಾ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶರಣಮ್ಮ ಪೂಜಾರಿ ಹಾಗೂ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ