ಕೊಟ್ಟೂರು ಬಸ್ ನಿಲ್ದಾಣ ಕಿರಿದಾದರಿಂದ ವಿದ್ಯಾರ್ಥಿಗಳಿಗೆ ,ಹಿರಿಯ ವೃದ್ಧರಿಗೆ ,ಸಾರ್ವಜನಿಕರಿಗೆ ತೊಂದರೆ
ತಾಲೂಕಿನ ಸಮಸ್ಯೆಗಳ ಮಹಾಪೂರ, ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರು ಶಾಸಕರಲ್ಲಿ ಒತ್ತಾಯದ ಆಗ್ರಹ.
ವಿಜಯನಗರ ಜಿಲ್ಲೆಯ ಕೊಟ್ಟೂರು ಹೊಸ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಜಗತ್ತು ಪ್ರಸಿದ್ಧಿಯನ್ನು ಪಡೆದಿದೆ.ಕೊಟ್ಟೂರು ಹೊಸ ತಾಲೂಕು ರಚನೆ ಯಾಗಿರುವುದರಿಂದ ಕೊಟ್ಟೂರಿನ ನಿವೇಶನಗಳು ಬೆಲೆ ಗಗನಕ್ಕೆ ಏರಿದೆ.
ರಾಜಕೀಯ ನಾಯಕರು ಕೂಡ ಈ ಭಾಗದಲ್ಲಿ ಬೆಳೆಯುತ್ತಿದ್ದಾರೆ .ಆದರೆ ಇಲ್ಲಿನ ಸಾರ್ವಜನಿಕರ ಸಮಸ್ಯೆ, ಸಮಸ್ಯೆಯಾಗಿ ಉಳಿದಿದೆ.ತಾಲೂಕು ರಚನೆಯಾಗಿ ಸುಮಾರು ವಷ೯ಗಳು ಆದರೂ, ಇದುವರರಿಗೂ ಸರಕಾರಿ ಕಛೇರಿಗಳು, ಬಸ್ ನಿಲ್ದಾಣ, ಇತರೆ ಇಲಾಖೆಗಳು ಮಂಜೂರಾಗದೆ ಜನರ ಕನಸು, ಕನಸಾಗಿ ಉಳಿದಿದೆ.ಅದು ನನಾಸಾಗುವ ಯಾವ ಲಕ್ತಣಗಳು ಕಾಣುತ್ತಿಲ್ಲ.
ಸಂಘ ಸಂಸ್ಥೆಗಳು ಆಗೊಮ್ಮೆ ಹೀಗೊಮ್ಮೆ ಹೋರಾಟದ ಘಜ೯ನೆ ಮಾಡಿದರು, ಅದಕ್ಕೆ ತಕ್ಕ ಪ್ರತಿಫಲ ಇನ್ನೂ ಸಿಕ್ಕಿಲ್ಲ. ತಾಲೂಕಿನ ಸರಕಾರಿ ಕಛೇರಿಗಳನ್ನು ಮಂಜೂರು ಮಾಡಿಸಲು, ಹಗಲು ಇರಳು ಎನ್ನದೆ ಶ್ರಮಿಸುವ ರಾಜಕೀಯ ನಾಯಕರಿಗೆ ಮತ್ತು ಸಂಘ ಸಂಸ್ಥೆಗಳೂ ನ್ಯಾಯ ಸಿಗಬಹುದೇ?ಕೊಟ್ಟೂರು ಹೊಸ ತಾಲೂಕಾಗಿ ನೇಮಕ ಮಾಡಿರುವುದು ಕೇವಲ ಹೆಸರಿಗೆ ಮಾತ್ರ ಎಂದು ಕೊಟ್ಟೂರು ಅವಲೋಕನ ಮಾಡಿದ್ದಾಗ ತಿಳಿಯುತ್ತದೆ.
ಅದು ಏನೇ ಇರಲಿ ಈಗ ನಾವು ಕೊಟ್ಟೂರಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ.ಬಸ್ ನಿಲ್ದಾಣ ಚಿಕ್ಕದಿದೆ ಆದರೆ ಜನಸಂಖ್ಯೆ ಮತ್ತು ವಿದ್ಯಾಥಿ೯ಗಳ ಸಂಖ್ಯೆ ಬೃಹದಾಕಾರದಲ್ಲಿ ಬೆಳೆದಿದೆ.ಕಾರಣ ಸಾಯಂಕಾಲ ಮತ್ತು ಬೆಳಿಗ್ಗೆ ಒಂದೇ ಸಮಯಕ್ಕೆ ಅನೇಕ ಬಸ್ ಗಳು ಬರುವುದರಿಂದ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಲೂ ಜಾಗವಿಲ್ಲದೆ, ಬಸ್ ತಿರುಗಿಸಲು ಬಸ್ ಚಾಲಕರು ಹರಸಹಾಸ ಪಡುತ್ತಿರುತ್ತಾರೆ.
ಅವರ ಕಷ್ಟಗಳನ್ನು ಯಾರಿಗೆ ಹೇಳುವುದು ಶಿವ. ಈ ಎಲ್ಲಾ ಸಮಸ್ಯೆಗಳಿಂದ ಬಸ್ ನಿಲ್ದಾಣದಲ್ಲಿ ಚಾಲನೆಯ ನಿಲ೯ಕ್ಷವೋ ಅಥವಾ ಇತರೆ ಕಾರಣಗಳಿಂದ ಅಪಘಾತವು ಕೂಡ ಸಂಭವಿತ್ತಿರುತ್ತವೆ .ಮತ್ತು ಈ ಹಿಂದೆ ಒಂದು ವೃದ್ಧನ ಬಲಿ ತೆಗೆದು ಕೊಂಡು ಬಹಳ ದಿನ ಏನಾಗಿಲ್ಲ ಅದಕ್ಕೆ ಹೊಣೆ ಯಾರನ್ನು ಮಾಡಬೇಕೋ ತಿಳಿಯದಾಗಿದೆ.
ಇನ್ನೂ ಬಸ್ ಗಳು ಸಾಯಂಕಾಲ ಮತ್ತು ಬೆಳಿಗ್ಗೆ ಕೂಡ್ಲಿಗಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಮತ್ತು ಇಟ್ಟಿಗಿ ರಸ್ತೆ ಪೂಣ೯ ಬ್ಲಾಕ್ ಆಗಿ ಸಾವ೯ಜನಿಕರಿಗೆ, ಪಾದಯಾತ್ರೆಗಳಿಗೆ, ವಾಹನ ಸವಾರರಿಗೆ ವಿಪರೀತ ತೊಂದರೆ ಮತ್ತು ಕಷ್ಟಕ್ಕೆ ಅನುಭವಿಸುವಂತಾಗಿದೆ.
ಇದಕ್ಕೆ ಯಾರನ್ನೂ ಹೊಣೆ ಮಾಡಬೇಕು ನೀವೇ ಹೇಳಿ. ಒಟ್ಟಿನಲ್ಲಿ ಇಂತಹ ಸಮಸ್ಯೆದ ಸುಳಿಯಲ್ಲಿ ಸಿಲುಕಿ ಕೊಂಡಿರುವ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಕ್ಷೇತ್ರದ ಶಾಸಕರು ಮತ್ತು ಜನ ಪ್ರತಿನಿಧಿಗಳು ಆದಷ್ಟು ಬೇಗನೆ ಜನ ಸಂಖ್ಯೆಗೆ ತಕ್ಕ ಬಸ್ ನಿಲ್ದಾಣವನ್ನು ನಿಮಾ೯ಣ ಮಾಡುವ ನಿಟ್ಟಿನಲ್ಲಿ, ಏನು ನಿಧಾ೯ರ ತೆಗೆದು ಕೊಳ್ಳುವರೋ ಕಾದು ನೋಡೋಣ!.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ