ಸಾಮೂಹಿಕ ಸಂಘಟನೆಗಳೊಂದಿಗೆ ಅನಿರ್ದಿಷ್ಟಾವಧಿಗೆ ಧರಣಿ ಸತ್ಯಾಗ್ರಹ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
*ಹಗಲು ರಾತ್ರಿ ನಿರಂತರವಾಗಿ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ಧರಣಿ *
ಕೊಟ್ಟೂರು: ತಾಲ್ಲೂಕು ಪಂಚಾಯ್ತಿ ಕಚೇರಿಗೆ ವರ್ಷದಲ್ಲಿ ನಾಲ್ಕಾರು ಕಾರ್ಯನಿರ್ವಾಹಕ ಅಧಿಕಾರಿಗಳು ಬದಲಾಗುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಸಿಪಿಐಎಂಎಲ್ ಲಿಬರೇಶನ್ ಪಕ್ಷದ ತಾಲ್ಲೂಕು ಘಟಕದ ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ್ ಅಕ್ರೋಶ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವಾರು ಸಂಘಟನೆಗಳ ಪದಾಧಿಕಾರಿಗಳು ತಾಲ್ಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ಪೂರ್ಣಾವಧಿ ಅಧಿಕಾರಿಗಳು ಇಲ್ಲದಿರುವುದರಿಂದ ಸಿಬ್ಬಂದಿ ಹಾಗೂ ಪಿಡಿಓ ಗಳದೆ ಕಾರುಬಾರಾಗಿದೆ ಎಂದರು.
ಅಖಿಲ ಕರ್ನಾಟಕ ಕುಳವ ಮಹಾಸಂಘದ ರಾಜ್ಯ ಘಟಕದ ಸದಸ್ಯ ಕೆ.ಕೊಟ್ರೇಶ್ ಮಾತನಾಡಿ ತಾಲ್ಲೂಕಿನಾದ್ಯಂತ ನರೇಗಾ ಯೋಜನೆ ಸಮರ್ಪಕವಾಗಿ ನಡೆಯದಿರುವುದು, ಇಲಾಖೆಯಿಂದ ದೊರೆಯುವ ಸೌಲಭ್ಯಗಳಿಂದ ರೈತರು ವಂಚಿತರಾಗುತ್ತಿರುವುದು, ಗ್ರಾಮಾಂತರ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಜನತೆ ಬಳಲುತ್ತಿರುವುದನ್ನು ನೋಡಿದರೆ ಅಧಿಕಾರಿಗಳ ನಿರ್ಲಕ್ಷತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಘಟಕದ ಕಾರ್ಯದರ್ಶಿ ಕೆ.ರೇಣುಕಮ್ಮ ಮಾತನಾಡಿ ಕಚೇರಿ ಸಿಬ್ಬಂದಿ ಹಾಗೂ ಪಿಡಿಒ ಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೆ ತಮಗಿಷ್ಟ ಬಂದಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ಇವರಲ್ಲಿ ಕೆಲವರನ್ನು ಅಮಾನತ್ತುಗೊಳಿಸಿ ತನಿಖೆಗೊಳಪಡಿಸಬೇಕು ಹಾಗೂ ಉಳಿದವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಡಿ.ಎಸ್.ಎಸ್. ತಾಲ್ಲೂಕು ಘಟಕಾಧ್ಯಕ್ಷ ಚಂದ್ರಶೇಖರ್, ಕಿಸಾನ ಸಭಾ ತಾಲ್ಲೂಕು ಘಟಕಾಧ್ಯಕ್ಷ ರಾಜುಗೌಡ, ಕರವೇ ಪದಾಧಿಕಾರಿಗಳು ಮತ್ತು ಮುಖಂಡರಾದ ಯು.ಎಂ.ಹಾಲಯ್ಯ, ಕರಿಬಸಮ್ಮ , ಕಂದಗಲ್ ತಿಮ್ಮಣ್ಣ, ಹಾಲಪ್ಪ, ಉಜ್ಜಯಿನಿ ರೇವಪ್ಪ ಮುಂತಾದವರು ಪಾಲ್ಗೊಂಡಿದ್ದರು.
ಕೊಟ್ -1
ವಿಜಯನಗರ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿಯವರು ಶುಕ್ರವಾರ ಸಂಜೆ ಧರಣಿಯ ಮನವಲಿಸಲು ಪ್ರಯತ್ನಿಸಿದರು ಅವರು ಸಂಘಟನೆಯ ಧರಣಿಯ ಕಾರ್ಯಕರ್ತರಿಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಧರಣಿಯ ಕಾರ್ಯಕರ್ತರ ಕೆಲವು ಪ್ರಮುಖ ಬೇಡಿಕೆಯನ್ನು ಈಡೇರಿಸಲು ಕೋರಿದರು. ಅಧಿಕಾರಿಗಳು ಬೇಡಿಕೆಗೆ ಒಪ್ಪದಿದ್ದಕ್ಕೆ ಹಗಲು ರಾತ್ರಿಯಲ್ಲೂ ಪ್ರತಿಭಟನೆ ನಿರಂತರವಾಗಿ ನಡೆಯುತ್ತದೆ. ಧರಣಿಯ ಕಾರ್ಯಕರ್ತರಿಗೆ ತಮ್ಮ ಪ್ರಾಣಕ್ಕೆ ಅಪಾಯವಾದರೆ.ಅಧಿಕಾರಿಗಳಿಗೆ ಹೊಣೆ ಎಂದರು . ಮತ್ತು ಸ್ಥಳಕ್ಕೆ ಸಿಇಒ ಆಗಮಿಸಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಧಾರಣೆ ಕಾರ್ಯಕರ್ತರು ಆಗ್ರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ