*ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯಮಟ್ಟದ ಪ್ರಶಸ್ತಿಗೆ ಶ್ರೀಮತಿ ವಿಜಯರಾಣಿ ಆಯ್ಕೆ.*
*ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಮಿತಿ ಬೆಂಗಳೂರು* ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಈ ನಾಡಿನ ಮಹಿಳಾ ಸಾಧಕೀಯರನ್ನು ಗುರುತಿಸಿ ಕೊಡ ಮಾಡಲ್ಪಡುವ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯಮಟ್ಟದ ಪ್ರಶಸ್ತಿಗೆ ರಾಯಚೂರು ಜಿಲ್ಲೆಯಿಂದ ಮಹಿಳಾ ಸಾಧಕಿ ಮತ್ತು ಸಮಾಜ ಸೇವಕಿ ಶ್ರೀಮತಿ *ವಿಜಯ ರಾಣಿ* ಅವರು ಆಯ್ಕೆಯಾಗಿದ್ದಾರೆ.
ಶ್ರೀಮತಿ ವಿಜಯರಾಣಿ ಅವರು 99ನೆ ಇಸವಿಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಜೊತೆಗೆ BDDS ಬಳ್ಳಾರಿ ಸಂಸ್ಥೆ ಜೊತೆಗೆ ಸಾಕ್ಷರತಾ ರಾತ್ರಿ ಶಾಲೆ ಕಲಿಕೆ ಜೊತೆಗೆ ಸ್ವಯಂಸೇವಕರಾಗಿ ಕೆಲಸ ನಿರ್ವಹಣೆ,2005/06 ನೆ ಸಾಲಿನಲ್ಲಿ ಶಾಂತಿ ಪ್ರಗತಿ ಸಂಸ್ಥೆ ಕೇಂದ್ರ ಧಾರವಾಡ ಸಂಯುಕ್ತಾಕ್ಷರದಲ್ಲಿ ಬಾಲ ಕಾರ್ಮಿಕ ಮಕ್ಕಳಿಗೆ ವಿದ್ಯಾಭ್ಯಾಸ ಸ್ವಯಂಸೇವಕರಾಗಿ ಕೆಲಸ ನಿರ್ವಹಣೆ, ಮಹಿಳೆಯರಿಗೆ ಸ್ವ ಸಹಾಯ ಸಂಘಗಳ ರಚನೆ,2007/08 ನೆ ಸಾಲಿನಲ್ಲಿ ಮಹಿಳೆಯರಿಗಾಗಿ ವಿಶೇಷ ಅಕ್ಷರ ಜ್ಞಾನ ಹಾಗೂ ಪರಿಹಾರ ಬೋಧನಾ ಕಾರ್ಯಕ್ರಮಗಳ ಆಯೋಜನೆ.
ಅಷ್ಟೇ ಅಲ್ಲದೆ ರಾಜ್ಯದಲ್ಲಿ ನಡೆದಂತಹ ಮಹಿಳೆಯರ ಮೇಲಿನ ಹಲವಾರು ಅತ್ಯಾಚಾರಗಳು,ದೌರ್ಜನ್ಯಗಳು,ಹಿಂಸೆಗಳ ವಿರುದ್ಧ ಸಾವಿರಾರು ಮಹಿಳೆಯರನ್ನು ಒಟ್ಟುಗೂಡಿಸಿ ಹೋರಾಡಿ ನ್ಯಾಯವನ್ನು ಒದಗಿಸಿಕೊಟ್ಟಿದ್ದಾರೆ.
ರಾಜ್ಯಾದ್ಯಂತ ಮಹಿಳೆಯರಿಗಾಗಿ ನಿರಂತರ ಹೋರಾಟಗಳು,ನೊಂದ ಮಹಿಳೆಯರಿಗೆ ನಿರಂತರ ಸ್ಪಂದನೆ,ಸಾಂತ್ವನ,ಆಶ್ರಯ ಹೀಗೆ ಸಾವಿರಾರು ಮಹಿಳೆಯರ ಪರವಾಗಿ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ಆದ್ದರಿಂದ ಇವರ ಈ ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಇದೆ ದಿನಾಂಕ 03/01/2024 ರಂದು ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ಅವರ ಜನ್ಮ ದಿನಾಚರಣೆ ಪ್ರಯುಕ್ತ ಬಿಜಾಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಕೊಟ್ಟು ಸನ್ಮಾನಿಸಿ ಗೌರವಿಸಲಾಗುವುದೆಂದು ಈ ಮೂಲಕ ಪತ್ರಿಕಾ ಪ್ರಕಟಣೆ ತಿಳಿಸಲಾಗಿದೆ.
*ಮೌನೇಶ ಜಾಲವಾಡಗಿ*
*ಜಿಲ್ಲಾ ಸಂಚಾಲಕರು*
*ದಲಿತ ವಿದ್ಯಾರ್ಥಿ ಪರಿಷತ್ ರಾಯಚೂರು.*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ