ಪ್ರತಿಯೊಬ್ಬರಿಗೂ ಏಡ್ಸ್ ರೋಗದ ಕುರಿತು ಮಾಹಿತಿಯನ್ನು ಹಂಚಿಕೊಳ್ಳಿ : ಡಾಕ್ಟರ್ ಮೌನೇಶ್
ಮಸ್ಕಿ: ಶುಕ್ರವಾರ ರಂದು ಪಟ್ಟಣದ ಮುದುಗಲ್ ಕ್ರಾಸ್ ಬಳಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಛಾಯಾ ಕರ್ನಾಟಕ, ಕಾರ್ಯತಾಸ್ ಇಂಡಿಯಾ ನವದೆಹಲಿ,ಬಳ್ಳಾರಿ ಧರ್ಮ ಪ್ರಾಂತ ಅಭಿವೃದ್ಧಿ ಸಂಸ್ಥೆ ಹಾಗೂ ತಾಲೂಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಸಂಯೋಜಕರಾದ ಶ್ರೀ ಶಾಂತಪ್ಪ ಸೋಮನಮರಡಿಯವರು ತಾರತಮ್ಯ ವನ್ನು ತೊಲಗಿಸಿ ಪ್ರೀತಿಯಿಂದ ಕಾಣಿರಿ ನೊಂದ ಹಾಗೂ ನಿಧನ ಹೊಂದಿದ ಎಚ್ಐವಿ ಸೋಂಕಿತರಿಗೆ ನೋವನ್ನು ಹೋಗಲಾಡಿಸಲು ಮುಂದೆ ಬನ್ನಿ ಎಂದು ಜಾಗೃತಿಯ ತಮ್ಮ ಹಿತ ನುಡಿಗಳನ್ನು ಹೇಳಿದರು.
ನಂತರ ಪ್ರತಿಯೊಬ್ಬರಿಗೂ ಏಡ್ಸ್ ರೋಗದ ಕುರಿತು ಮಾಹಿತಿಯನ್ನು ಹಂಚಿಕೊಳ್ಳಿ ಎಂದು ಉದ್ಘಾಟನಾ ಭಾಷಣಕಾರರಾಗಿ ಆಗಮಿಸಿದ್ದ ಡಾಕ್ಟರ್ ಮೌನೇಶ್ ವೈದ್ಯಾಧಿಕಾರಿಗಳು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಹರೀಶ್ ಲ್ಯಾಬು ಟೆಕ್ನಿಷಿಯನ್ ಪ್ರಾಥಮಿಕ ಆರೋಗ್ಯ ಕೇಂದ್ರ ಮಸ್ಕಿ, ಸಂಯೋಜಕರಾದ ಅರಳಪ್ಪ, ಮಹಿಳಾ ಪ್ರತಿನಿಧಿ ಗಳಾದ ಶರಣಮ್ಮ ಬೆನಕನಾಳ, ಬಾಲಸ್ವಾಮಿ ಅಂತರಗಂಗೆ, ವಿಜಯಕುಮಾರ, ಮಾನಪ್ಪ, ಅಮೃತಮ್ಮ ದೇವಮ್ಮ ಮಾರಲಾದಿನ್ನಿ,ಬೆನಕನಾಳ, ಅಡವಿಬಾವಿ ತಾಂಡ, ಮಸ್ಕಿ, ಮುದ್ಬಾಳ ಗ್ರಾಮಗಳ ಮಹಿಳೆಯರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಹನುಮಂತ ನೆರವೇರಿಸಿದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ