ಜಾತಿಗಣಿತಿ ಶಿಫಾರಸು ಜಾರಿಗೆ ದೇವರಾಜ ಮಡಿವಾಳರ ಒತ್ತಾಯ
ಮಸ್ಕಿ: ಸಮಾಜದ ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ನಡೆಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸರ್ಕಾರ ಸ್ವೀಕರಿಸಿ ಅನುಷ್ಠಾನಗೊಳಿಸಬೇಕು, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದು ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ತಾಲೂಕ ಅಧ್ಯಕ್ಷ ದೇವರಾಜ್ ಮಡಿವಾಳರ ಒತ್ತಾಯಿಸಿದರು.
ಮಸ್ಕಿಯಲ್ಲಿ ಭಾನುವಾರ ಪತ್ರಿಕಾ ಹೇಳಿಕೆ ನೀಡಿದ ಅವರು ಜಾತಿಗಣತಿಯನ್ನು ಸರ್ಕಾರ ಸ್ವೀಕಾರ ಮಾಡಬೇಕು ಎಂದು ಒತ್ತಾಯಿಸಿದರು. ಮೈಸೂರು ಮಹಾರಾಜರ ಕಾಲದಿಂದ ಮೀಸಲಾತಿಗಾಗಿ ಹಲವಾರು ಆಯೋಗಗಳನ್ನು ರಚಿಸಲಾಗಿದೆ ಆದರೆ, ಇದುವರಿಗೆ ಆಯೋಗದ ವರದಿಗಳು ಸಮರ್ಪಕವಾಗಿ ಜಾರಿಯಾಗಿಲ್ಲ, ಜಾರಿಯಾದ ಕೆಲ ವರದಿಗಳು ಮೇಲ್ವರ್ಗಕ್ಕೆ ಉಪಯೋಗವಾಗಿವೆ, ಇತರ ಹಿಂದುಳಿದ ವರ್ಗಗಳ ಬದುಕು ಇಂದಿಗೂ ಹೀನಾಯ ಸ್ಥಿತಿಯಲ್ಲಿದೆ. ಇಂಥಹ ಪರಿಸ್ಥಿತಿಯನ್ನು ಮೊದಲೇ ಮನ ಗೊಂಡಿದ್ದ ಡಾ. ಬಿ ಆರ್ ಅಂಬೇಡ್ಕರ್ ಹಿಂದುಳಿದ ವರ್ಗಗಳ ಸ್ಥಿತಿ ಅಧ್ಯಯನಕ್ಕೆ ಆಯೋಗವನ್ನು ನೇಮಿಸಿ, ಅದರ ಶಿಫಾರಸುಗಳನ್ನು ಜಾರಿಗೆ ತಂದು ಅಭಿವೃದ್ಧಿ ಮಾಡುವಂತೆ ಸಂವಿಧಾನದಲ್ಲಿ ಅನುಚ್ಛೇದ 304 ಅಡಕಗೊಳಿಸಿದರು ಎಂದು ವಿವರಿಸಿದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸವಲತ್ತು ಒದಗಿಸಲು ಅಂಕಿ- ಅಂಶ ಎನ್ನುವ ನಿಟ್ಟಿನಲ್ಲಿ ಎಲ್ ಜಿ ಹಾವನೂರು, ಟಿ ವೆಂಕಟಸ್ವಾಮಿ, ಚೆನ್ನಪ್ಪ ರೆಡ್ಡಿ ಆಯೋಗದ ವರದಿಗಳು ಸಿದ್ದಗೊಂಡಿದ್ದವು. ಇದೆ ದಾರಿಯಲ್ಲಿ ಕಾಂತರಾಜು ಆಯೋಗದ ವರದಿಯು ಸಾಗಿದ್ದು ಹಿಂದುಳಿದ ವರ್ಗಗಳ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸ್ಥಿತಿಗತಿಯ ಕುರಿತು ಅಧ್ಯಾಯನ ಮತ್ತು ಜಾತಿವಾರು ಜನಗಣತಿಗೆ ನೇಮಿಸಿದ ಕಾಂತರಾಜ್ ಆಯೋಗವು 2015ರಲ್ಲಿ ತನ್ನ ವರದಿಯನ್ನು ಸಿದ್ಧಗೊಳಿಸಿತು. ಆದರೆ ವರದಿ ಬಹಿರಂಗಗೋಳಲಿಲ್ಲ. ವರದಿ ಮೇಲ್ವರ್ಗಕ್ಕೆ ಕಹಿಯಾಗ ವುದನ್ನು ಕಂಡು, ಆಡಳಿತಕ್ಕೆ ಬಂದ ಸರ್ಕಾರಗಳು ವರದಿಯ ಜಾರಿಗೆ ಹಿಂದೇಟು ಹಾಕುತ್ತಿವೆ.ಇದು ಖಂಡನೆಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಮೀಸಲಾತಿ ಭಿಕ್ಷೆಯಲ್ಲ, ಅದು ಸವಿಧಾನ ಬದ್ಧ ಹಕ್ಕು ಎನ್ನುವುದು ಎಲ್ಲರೂ ಅರಿಯಬೇಕು. ಆಯಾ ಜಾತಿಗಳಿಗೆ ವಿಶೇಷ ಸವಲತ್ತು, ಹಣಕಾಸಿನ ನೆರವು, ಯೋಜನೆ ನೀಡಲು ಅಂಕಿ- ಅಂಶಗಳು ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ 180 ಕೋಟಿ ರೂಪಾಯಿ ವೆಚ್ಚ ಮಾಡಿ ಸಾಮಾಜಿಕ, ನ್ಯಾಯದ ದೃಷ್ಟಿಯಿಂದ ಕಾಂತರಾಜ್ ವರದಿಯನ್ನು ಕೂಡಲೆ ಜಾರಿಗೋಳಿಸಬೇಕು. ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಈ ಭರವಸೆಯನ್ನು ಈಡೇರಿಸದಿದ್ದರೆ ಅಧಿಕಾರದಿಂದ ಕೆಳಕ್ಕಿಳಿಯಬೇಕು ಎಂದು ದೇವರಾಜ್ ಮಡಿವಾಳ ಆಗ್ರಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ