*ಶಾಲೋಮ್ ಪ್ರಾರ್ಥನಾಲಯದಿಂದ 4ನೇ ವರ್ಷದ ರಕ್ತದಾನ ಶಿಬಿರ*
"ರಕ್ತದ ಹನಿ ಕೊಟ್ಟವನೇ ಧಣಿ"
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 16ನೇ ವಾರ್ಡಿನಲ್ಲಿ ಎನ್ಎಚ್ 50 ಪಕ್ಕ ದಲ್ಲಿ ಬರುವ ಶಾಲೋಮ್ ಪ್ರಾರ್ಥನಾಲಯ ದಲ್ಲಿ ಸಭೆಯ ಸೇವಕರಾದಂತ ಪರಶುರಾಮ್ ಪಾಸ್ಟರ್ ಹಾಗೂ ಸಭೆಯ ಸದಸ್ಯರು ಹಾಗೂ ಸರ್ವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಕ್ತದಾನ ಶಿಬಿರ ಯಶಸ್ವಿಗೊಳಿಸಲು ದಿನಾಂಕ 15- 12- 2023 ರ ಶುಕ್ರವಾರ ರಂದು ನಡೆಯುವ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ವನ್ನು ಸತತವಾಗಿ 4ನೇ ವರ್ಷದ ಕ್ರಿಸ್ ಮಸ್ ಹಬ್ಬದ ಪ್ರಯುಕ್ತವಾಗಿ " ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವುದೇ ಪ್ರತೀ ಫಲಾಪೇಕ್ಷೆ ಇಲ್ಲದೆ ರಕ್ತದಾನ ಮಾಡುವುದರಿಂದ ಪ್ರತಿದಿನಲೂ ನಡೆಯುವಂತಹ ನಾನಾ ಘಟನೆಗಳಿಂದ ಅನೇಕ ರೋಗಗಳಿಗೆ ರಕ್ತದ ಅವಶ್ಯಕತೆ ಇರುವಂತಹ ರೋಗಿಗಳಿಗೆ ಹಾಗೂ ಅಪಘಾತದಲ್ಲಿ ಉಂಟಾದಂತಹ ವ್ಯಕ್ತಿಗಳಿಗೆ, ಗರ್ಭಿಣಿ ಸ್ತ್ರೀಯರಿಗೂ, ಆರೋಗ್ಯದಲ್ಲಿ ತೊಂದರೆ ಆದಂತಹ ಕೆಲವೊಂದು ಸಂದರ್ಭದಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೂ ರಕ್ತದ ಅವಶ್ಯಕತೆ ಇರುವುದರಿಂದ ರಕ್ತದ ದಾನಿಗಳಿಂದ ಮಾತ್ರ ಇನ್ನೊಬ್ಬ ವ್ಯಕ್ತಿಗಳನ್ನು ಜೀವ ರಕ್ಷಣೆ ಮಾಡಲು ಸಾಧ್ಯ ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಜೀವದ ರಕ್ಷೆ ಕಾಪಾಡಲು ಸಾಧ್ಯ ರಕ್ತದಾನ ಮಾಡುವುದರಿಂದ ಆಗುವಂತ ಪ್ರಯೋಜನಗಳೆಂದರೆ * ರಕ್ತದಾನ ಮಾಡುವುದರಿಂದ ದಾನಿಗಳ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಆಗುತ್ತದೆ,
* ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಕಾರ್ಯ ತತ್ಪರತೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ,
* ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುತ್ತದೆ.
* ಹೃದಯಾಘಾತವನ್ನು ಶೇಕಡ 80ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯವಾಗುತ್ತದೆ
* ರಕ್ತದ ಒತ್ತಡ ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ
*ಯಾರು ರಕ್ತದಾನ ಮಾಡಬಹುದು ಎಂದರೆ*
ಹೆಣ್ಣು ಕಂಡೆಂಬ ಭೇದವಿಲ್ಲದೆ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು
* ಗಂಡಸರು 3 ತಿಂಗಳು ಒಮ್ಮೆ ಮತ್ತು ಹೆಂಗಸರು 4 ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು
*ರಕ್ತದಾನ ಮಾಡುವ ದಾನಿಯ ದೇಹದ ತೂಕ 45 ಕೆಜಿ ಗಿಂತ ಎಚ್ಚಿರಬೇಕು
* ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಹೆಚ್ಚಿರಬೇಕು
* ಸಿಸ್ಟರ್ಲಿಕ್ ರಕ್ತದೊತ್ತಡವು 100 ರಿಂದ 140 ಇದ್ದುಡಯಲ್ ಸ್ಟೋಲೈಕ್ ಒತ್ತಡವು 70ರಿಂದ 100 ಇರುವವರು ರಕ್ತದಾನ ಮಾಡಬಹುದು ತಿಳಿಸಿ ದ್ದಾರೆ, ಹರ್ಷದಿಂದ ಬನ್ನಿ ರಕ್ತದಾನ ಮಾಡಿರಿ ರಕ್ತದಾನ ಮಾಡಿ ಜೀವ ಉಳಿಸಿ ಸರ್ವ ಆಸಕ್ತ ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ಸುಸ್ವಾಗತ ಶಾಲೋಮ್ ಪ್ರಾರ್ಥನಾಲಯ ಸೇವಕರು ಪರಶುರಾಮ್ ಪಾಸ್ಟರ್ ತಿಳಿಸಿರುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ