*ಪಿಡಿಒ ನಿರ್ಲಕ್ಷತನದಿಂದ ಇಡೀ ಗ್ರಾಮ ಪಂಚಾಯಿತಿ ಅಭಿವೃದ್ಧಿ ಮರಿಚಿಕೆ *
"ಗ್ರಾಮ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆದರು ಕೂಡ ವೀಕ್ಷಿಸದ, ಪರಿಶೀಲಿಸದ ಪಿಡಿಒ"
ಕೊಟ್ಟೂರು : ತಾಲೂಕಿನ ಕಾಳಾಪುರ ಗ್ರಾಮ ಪಂಚಾಯತಿಯಲ್ಲಿ ವಿವಿಧ ಮೂಲಭೂತ ಸೌಕರ್ಯ ಇಲ್ಲದೆ ಕಂಗಾಲದ ಸಾರ್ವಜನಿಕರು ಸುಮಾರು ಐದು ಆರು ದಿನಗಳಾದರೂ ಪಿಡಿಓ ಲತಾಬಾಯಿ ನಡುಮಾವಿನಹಳ್ಳಿ ಗ್ರಾಮಕ್ಕೆ ತಿರುಗಿ ಸಹ ನೋಡಿಲ್ಲವಂತೆ ಹೀಗಾದರೆ ಇಲ್ಲಿನ ಸಾರ್ವಜನಿಕರು ಗತಿ ಏನು? ನಡು ಮಾವಿನಹಳ್ಳಿಯಲ್ಲಿ ಐದು ದಿನಗಳಾದರೂ ನೀರು ಬರುತ್ತಿಲ್ಲ ಕುಡಿಯಲು ಬಳಸಲು ನೀರಿಲ್ಲ.
ಕೊಟ್ಟೂರು ತಾಲೂಕಿನಲ್ಲಿ ತಾಲೂಕು ಪಂಚಾಯತಿ ಗ್ರಾಮ ಪಂಚಾಯತಿಗೆ ಸುದ್ದಿ ಕೇಳಿ ಸಾರ್ವಜನಿಕರ ಸಮಸ್ಯೆ ಕೇಳಿ ಜನರು ರೋಸಿ ಹೋಗಿದ್ದಾರೆ.ಈ ಕಾಳಾಪುರ ಗ್ರಾಮ ಪಂಚಾಯತಿಯಲ್ಲಿ ನೈನ್ ಅಂಡ್ ಲೆವೆನ್ ಗೆ ಅರ್ಜಿ ಸಲ್ಲಿಸಿದರೆ ಸುಮಾರು ದಿನಗಳಿಂದ ನೈನ್ ಅಂಡ್ ಇಲೆವೆನ್ ಕೊಡುತ್ತಿಲ್ಲವಂತೆ ಇವರು ಹಣಕ್ಕಾಗಿ ಕಾಲಹರಣ ಮಾಡುತ್ತಾರೆ ಎಂದು ಮೇಲೆ ನೋಟಕ್ಕೆ ತಿಳಿಯುತ್ತದೆ ಮತ್ತು ಒಂದು ನೈನ್ ಅಂಡ್ ಇಲೆವೆನ್ ಫಾರಂ ಸರ್ಕಾರಿ ಫೀ ಕೇವಲ ರೂ.50 ಇದ್ದರೆ ಇದಕ್ಕೆ 5,000 ಖರ್ಚು ಆಗುತ್ತದೆ ಎಂದು ಹೇಳುತ್ತಾರಂತೆ ನಡುಮವಿನಹಳ್ಳಿ ಗ್ರಾಮದಲ್ಲಿ ಸುಮಾರು 20 ಅರ್ಜಿಗಳನ್ನು ನೈನ್ ಅಂಡ್ ಲೆವೆನ್ ಕೊಡಲು ಹಿಂದೇಟು ಹಾಕುತ್ತಿದ್ದಾರಂತೆ ಇಂಥಹ ಮಳೆ ಹೋದ ಬರಗಾಲದ ಟೈಮಿನಲ್ಲೂ ಇವರಿಗೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಮ್ಮ ಕೊಟ್ಟೂರಿನ ತಾಲೂಕು ಗ್ರಾಮ ಪಂಚಾಯತಿಗಳ ದರ್ಬಾರ್ಗಳಾಗಿವಂತೆ ಹಾಗೂ ಊರಿನ ಚರಂಡಿ ಮತ್ತು ಸ್ವಚ್ಛತೆ ಬಗ್ಗೆ ನಿರ್ಲಕ್ಷ ತೋರುತ್ತಿದ್ದಾರೆಂದು ಸಾರ್ವಜನಿಕರ ಆಗ್ರಹವಾಗಿದೆ.ಸುಮಾರು ಐದು ಆರು ದಿನಗಳಾದರೂ ನಡುಮಾವಿನಹಳ್ಳಿ ಗ್ರಾಮದಲ್ಲಿ ಕುಡಿಯಲು ನೀರಿಲ್ಲವಂತೆ ಆದರೂ ಸಹ ಪಿಡಿಒ ಲತಾಬಾಯಿಯವರು ತಿರುಗಿ ಸಹ ನೋಡಿಲ್ಲವಂತೆ ಹೀಗಾದರೆ ಸಾರ್ವಜನಿಕರ ಮೂಲಭೂತ ಸೌಕರ್ಯಗಳ ಗತಿ ಏನು?ಎಂದು ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜ್ ಗೌಡ್ರು ಮೈದೂರ್ ರೇವಣ್ಣ ಹರಕನಾಳು ರೇವಣಸಿದ್ದಪ್ಪ ನಮ್ಮ ಪತ್ರಿಕೆಯೊಂದಿಗೆ ತಿಳಿಸಿದರು.
ಜನರ ಕಷ್ಟಕ್ಕೆ ತಕ್ಷಣವೇ ಸ್ಪಂದಿಸುವ ಶಾಸಕರಾದ ಶ್ರೀನಿವಾಸ್ ಎನ್ ಟಿ ಹಾಗೂ ರವಿಕುಮಾರ್ ಕಾರ್ಯನಿರ್ವಾಹಕ ಅಧಿಕಾರಿಗಳು ಕೊಟ್ಟೂರು ಇಂತಹ ಗ್ರಾಮ ಪಂಚಾಯತಿಯ ನಿರ್ಲಕ್ಷ ತೋರುವ ಅಧಿಕಾರಿಗಳ ಬಗ್ಗೆ ಎಚ್ಚರ ವಹಿಸಬೇಕೆಂದು ನಮ್ಮ ಪತ್ರಿಕೆಯ ಆಶಯವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ