ಕಿಡಿಗೇಡಿಗಳ ದುಷ್ಕೃತ್ಯ ವಿರುದ್ಧ ಉನ್ನತ ಮಟ್ಟದ ತನಿಕೆಗೆ ಅಗ್ರಹ : ಸಂಗಮೇಶ್ ಬಾಗವಾಡಗಿ
ವರದಿ - ಮಂಜುನಾಥ್ ಕೋಳೂರು ಕೊಪ್ಪಳ.
ಕೊಪ್ಪಳ ಡಿ 29 : - ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಸಮೀಪದ ಪಂಪ ಸರೋವರ ಹತ್ತಿರ ಇರುವ ಅತಿಥಿಗೃಹ (ಕುಟೀರಕ್ಕೆ )ಯಾರೋ ಕಿಟಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದ್ದು, ಈ ಕೂಡಲೇ ವಿಚಾರಣೆ ಮಾಡಿ ಆರೋಪಿಗಳನ್ನು ಬಂಧಿಸಿ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಕೆ ಆರ್ ಪಿ ಪಕ್ಷದ ಜಿಲ್ಲಾಧ್ಯಕ್ಷ ಸಂಗಮೇಶ್ ಬಾಧವಾಡಗಿ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಅವರ ಕ್ಷೇತ್ರದ ಅಭಿವೃದ್ಧಿ ಹಾಗೂ ಜನಪ್ರಿಯತೆಯನ್ನು ಸಹಿಸದ ಕೆಲವು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯವರು ಈ ರೀತಿ ಅವರ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಉನ್ನರುಗಳಿಗೆ ಜನಾರ್ದನ್ ರೆಡ್ಡಿ ಅವರು ಹೆದರುವುದಿಲ್ಲ . ಅವರು ಕೈಗೊಳ್ಳುವ ಸಾರ್ವಜನಿಕ ಕೆಲಸಗಳು ಜನಪ್ರಿಯತೆಯನ್ನು ಪಡೆಯುತ್ತಿವೆ ಬಳ್ಳಾರಿ ಮಹಾನಗರ ಮಾದರಿಯಲ್ಲಿ ಗಂಗಾವತಿ ನಗರವನ್ನು ಅಭಿವೃದ್ಧಿಪಡಿಸುವಲ್ಲಿ ದಿಟ್ಟ ನಿರ್ಧಾರದೊಂದಿಗೆ ಹೆಜ್ಜೆ ನೀಡುತ್ತಿದ್ದಾರೆ ಎಂದು ಸಂಗಮೇಶ್ ಬಾಗವಾಡಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂತಹ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ಮಾಡಿದಾಗ ಮಾತ್ರ ನಿಜವಾದ ಸತ್ಯ ಹೊರಬರುತ್ತದೆ ಎಂದು ಹೇಳಿದರು.
ತದನಂತರ ಕೆ ಆರ್ ಪಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮನೋಹರ್ ಹೆರೂರ್ ಮಾತನಾಡುತ್ತಾ ಈಗಾಗಲೇ ಈ ಕುರಿತು ಪೊಲೀಸ್ ಇಲಾಖೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಸಂಭವಿಸಿದಂತೆ ರಾಜ್ಯಪಾಲರಿಗೆ , ಮುಖ್ಯಮಂತ್ರಿಗಳಿಗೂ , ಗೃಹ ಸಚಿವರಿಗೆ ದೂರು ನೀಡಲಾಗಿದೆ ಎಂದರು.
ಕುಟೀರಕ್ಕೆ ಬೆಂಕಿ ಹಚ್ಚಿದ ಸಂಬಂಧಿಸಿದಂತೆ ಕೊಪ್ಪಳ ಅಪಾರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿಯವರಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಕಿಡಿಗೇಡಿಗಳನ್ನು ಬಂದಿಸಲು ಅಗ್ರಹಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ