ಮಹಿಳೆಯರು ಸ್ವಾವಲಂಬನೆಯಿಂದ ಬದುಕಿ : ಈಶಪ್ಪ ವಕೀಲ

ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮದಲ  ಶ್ರೀ ವಾಲ್ಮೀಕಿ ಭವನದಲ್ಲಿ  ಕಾಮದೇನು ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದಿಂದ ಲಿಂಗತ್ವ ದೌರ್ಜನ್ಯ ಅಭಿಯಾನ ಕಾರ್ಯಕ್ರಮ ನಡೆಯಿತು. 

ಈ ವೇಳೆ, ಈಶಪ್ಪ ದೇಸಾಯಿ ವಕೀಲರು  ಮಾತನಾಡಿ ಇಂದಿನ ಮಹಿಳೆಯರು ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಬೇಕು ಅದಕ್ಕಾಗಿ ನಮ್ಮ ಸಂವಿಧಾನದಲ್ಲಿ ಮಹಿಳೆಯರಿಗೆ ಹಲವಾರು ಕಾನೂನು ಇದ್ದು ಸರಿಯಾಗಿ ಬಳಕೆ ಮಾಡಿಕೊಳ್ಳಿ,ಮಹಿಳೆಯರಿಗೆ ಆರ್ಥಿಕ , ಶಿಕ್ಷಣ , ಸಾಮಾಜಿಕ ಸ್ವಾತಂತ್ರ್ಯ ಪಡೆದುಕೊಂಡ ಸಮಾಜದಲ್ಲಿ ಉನ್ನತವಾದ ಹುದ್ದೆ ಅಲಂಕರಿಸಿ ಎಂದು ಈಶಪ್ಪ ವಕೀಲರು ಹೇಳಿದರು. 

ಅದೇ ರೀತಿಯಲ್ಲಿ ಉಪನ್ಯಾಸಕ ಸಿದ್ದಾರ್ಥ ಪಾಟೀಲ್ ಮಾತನಾಡುತ್ತಾ ಇಂದು ಮಹಿಳೆಯರಿಗೆ ಸರಕಾರದಿಂದ ವಿಶೇಷವಾಗಿ ಅನೇಕ ಸೌಲಭ್ಯ, ಸೌಕರ್ಯಗಳು ಇದ್ದು ಅವುಗಳನ್ನು ಪಡೆದು ಸಮಾಜದಲ್ಲಿ ಮುಂಚೊಣಿಗೆ ಬರಬೇಕು, ಮುಖ್ಯವಾಗಿ  ಹೆಣ್ಣುಮಕ್ಕಳಿಗೆ ಶಿಕ್ಷಣ ಪ್ರಧಾನವಾಗಿ ಕೊಡಿಸದಾಗ ಮಾತ್ರ ನಿಜವಾದ ಸ್ವಾವಲಂಬನೆ ಸಿಗುತ್ತದೆ ಎಂದರು.

ಪ್ರಕಾಶ ವಲಯ ಮೇಲ್ವಿಚಾರಕರು ಮಾತನಾಡಿ  ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ನಮ್ಮ ಸಂಘದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುತ್ತವೆ ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಪ್ರಕಾಶ ಮಸ್ಕಿ ವಲಯ ಮೇಲ್ವಿಚಾರಕ ಹೇಳಿದರು. 

ಈ ಸಂದರ್ಭದಲ್ಲಿ ಭವಾನಿ ಬಿ.ಆರ್. ಪಿ, ಜ್ಯೋತಿ ಖಜಾಂಚಿ, ಸಿಂಧೂ ಕೆ ಎಚ್.ಪಿ ಟಿ, ರೇಣುಕಾ ಎಮ್ ಬಿ.ಕೆ. ಗದ್ದೆಮ್ಮ,ಗಂಗಮ್ಮ,ಅಶ್ವಿನಿ, ಶ್ರೀದೇವಿ, ಹಾಗೂ ಗ್ರಾಮ ಪಂಚಾಯತಿ ಮಟ್ಟದ ಮಹಿಳೆಯರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ