ವಂಟಮೂರಿ ಘಟನೆ ನೊಂದ ಕುಟುಂಬಕ್ಕೆ ಸೂಕ್ತ ರಕ್ಷಣೆಗೆ : ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿಗಳು ಕೆ ರೇಣುಕಾ ಆಗ್ರಹ

 

ವಿಜಯನಗರ ಜಿಲ್ಲೆ ಕೊಟ್ಟೂರು: ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬಳ ಮೇಲೆ ಅಮಾನುಷ್ಯ ಕೃತ್ಯ ನಡೆಸಿ ಕಂಬಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಚಿತ್ರ ಹಿಂಸೆ ಕ್ರೌರ್ಯ ಮೆರೆದ ಪುಂಡರನ್ನು ಗಡಿಪಾರು ಮಾಡಬೇಕೆಂದು ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿಗಳು ಕೆ ರೇಣುಕಾ  ಅವರು ಆಗ್ರಹಿಸಿದ್ದಾರೆ.

ಮಗನ ಪ್ರೇಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ಕುಟುಂಬದ ಮನೆ ದ್ವಂಸಮಾಡಿ ಸಿಕ್ಕಪಟ್ಟೆ ಹಲ್ಲೆ ಮಾಡಿರುವುದನ್ನು ಇಡಿ ಮಾನವ ಕುಲವೆ ತಲೆ ತಗ್ಗಿಸುವಂತಹ ಘಟನೆ ಇದಾಗಿದ್ದು, ತಪ್ಪಿಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಆ ನೊಂದ ಕುಟುಂಬಕ್ಕೆ ತಕ್ಷಣ ರಾಜ್ಯ ಸರಕಾರ ಪರಿಹಾರ ನೀಡಬೇಕು. ಹಾಗೂ ಕುಟುಂಬದವರಿಗೆ ಸೂಕ್ತ ಪೋಲಿಸ್ ಬಂದೊಬಸ್ತ ನೀಡಬೇಕು. ಮತ್ತು ಜೀವ ಭಯದಿಂದ ಓಡಿಹೋದ ಆ ಪ್ರೇಮಿಗಳನ್ನು ರಕ್ಷಿಸಿ ಯಾವುದೇ ದುರ್ಗಘಟನೆ ಸಂಬಂವಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರಕಾರಕ್ಕೆ

ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿಗಳು ಕೆ ರೇಣುಕಾ  ಅವರು  ಪತ್ರಿಕೆಗೆ ಮೂಲಕ ಒತ್ತಾಯಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ