ಮುಂದುವರೆದ ಕಳಪೆ ಕಾಮಗಾರಿ;ಎತ್ತ ಸಾಗುತ್ತಿದೆ ರಸ್ತೆ ವಿಭಜಕ ಮತ್ತು ಚರಂಡಿ ಕಾಮಗಾರಿ
ವರದಿ: ಗ್ಯಾನಪ್ಪ ದೊಡ್ಡಮನಿ
ಮಸ್ಕಿ : ಪಟ್ಟಣದಲ್ಲಿ ಕೈಗೊಂಡಿರುವ ರಸ್ತೆ ವಿಭಜಕ ಮತ್ತು ಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಪ್ರಗತಿಪರ ಒಕ್ಕೂಟ ಸಂಘಟನೆ ಮಸ್ಕಿ ವತಿಯಿಂದ ಸಹಾಯಕ ಕಾರ್ಯಪಾಲಕ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹುನುಗುಂದ ಇವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು ಆದರೆ ಇಲ್ಲಿಯವರೆಗೂ ಕಳಪೆ ಕಾಮಗಾರಿಯ ಬಗ್ಗೆ ಯಾವುದೇ ರೀತಿಯ ವರದಿಯು ಸಲ್ಲಿಕೆ ಆಗಿದಿಯೋ ಇಲ್ಲವೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಹೌದು ಪಟ್ಟಣದ ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದವರೆಗಿನ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ನಿಯಮಗಳನ್ನು ಉಲ್ಲಂಘಿಸಿ, ಕಳಪೆ ಮಟ್ಟದ ಸಿಮೆಂಟ್ ಮತ್ತು ಅಗತ್ಯ ಪ್ರಮಾಣದ ಕಬ್ಬಿಣದ ಸರಳುಗಳನ್ನು ಬಳಸದೇ ಹಾಗೂ ಕಪ್ಪು ಮಣ್ಣು ಇರುವ ಸ್ಥಳಗಳನ್ನು ಮರಮ್ ಬಳಸದೇ ಮತ್ತು ಅಗತ್ಯಕ್ಕೆ ತಕ್ಕಂತೆ ನೀರಿನ ಕ್ಯೂರಿಂಗ್ ಮಾಡದೆ ಇರುವುದರಿಂದಾಗಿ ಕಾಮಗಾರಿಯ ಪ್ರಾರಂಭದ ಹಂತದಲ್ಲಿ ಚರಂಡಿ ಕಾಮಗಾರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅತ್ಯಂತ ಕಳಪೆ ಮಟ್ಟದಲ್ಲಿ ಈ ಕಾಮಗಾರಿ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸಂಘಟನೆಗಳು ಆರೋಪ ಮಾಡಿದ್ದವು.
ಈ ಚರಂಡಿ ಕಾಮಗಾರಿಯಿಂದಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎಂಬ ಆರೋಪ ಸಂಘಟನೆಗಳಿಂದ ಹಾಗೂ ಸಾರ್ವಜನಿಕರಿಂದ ಕೇಳಿ ಬಂದಿತ್ತು ಕುಲಂಕುಷವಾಗಿ ತನಿಖೆ ಮಾಡಿ ಕಳಪೆಯಾಗಿರುವ ಕಾಮಗಾರಿಯನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕು
ಮತ್ತು ಕಾಮಗಾರಿಯ ಪ್ರತಿ ಹಂತದಲ್ಲಿ ಗುಣಮಟ್ಟ ಪರೀಕ್ಷೆಯನ್ನು ಮಾಡಿಸಬೇಕೆಂದು ಪ್ರಗತಿಪರ ಸಂಘಟನೆಗಳು ಮಸ್ಕಿ ವತಿಯಿಂದ ಅನಿರ್ದಿಷ್ಟವಾದಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ಅಧಿಕಾರಿಗಳು ಹೋರಾಟದ ಸಳ್ಥದಲ್ಲಿ ಕುಳಿತು ಒಂದು ವಾರದ ಒಳಗಡೆ ಪರಿವೀಕ್ಷಣಾ ವರದಿಗೆ ಶಿಫಾರಸ್ಸು ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಲಿಖಿತ ವಾಗಿ ಬರೆದು ಕೊಟ್ಟು
ಹೋರಾಟಗಾರರನ್ನು ಮನವೊಲಿಸುವಲ್ಲಿ ಯಶಸ್ವಿ ಯಾಗಿತ್ತು. ಪೊಲೀಸ್ ಅಧೀಕ್ಷಕರು ರಾಯಚೂರು ಜಿಲ್ಲಾ ಲೋಕಾಯುಕ್ತ ಅಧಿಕಾರಿ ಇವರ ನೇತೃತ್ವದಲ್ಲಿ ದಿನಾಂಕ 13-12-2023 ರಂದು ಸಾರ್ವಜನಿಕರ ಕುಂದು ಕೊರತೆಗಳ ಸಭೆ ಕರೆದ ಸಂದರ್ಭದಲ್ಲಿ ಅಧಿಕಾರಿಗಳಿಗೆ 150A ಮಸ್ಕಿ ಪಟ್ಟಣದ ಬಸವೇಶ್ವರ ನಗರದಿಂದ ಅಶೋಕ್ ವೃತ್ತ ಮುದುಗಲ್ ಕ್ರಾಸ್ ಬಳಿವರೆಗೂ ನಡೆಯುತ್ತಿರುವ ರಸ್ತೆ ವಿಭಜಕ ಕಾಮಗಾರಿಯ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು.
ಹಾಗೇಯೇ ಇಲ್ಲಿಯವರೆಗೆ 150A ವಿಭಜಕ ಹಾಗೂ ಚರಂಡಿ ಕಾಮಗಾರಿಯ ವ್ಯಾಪ್ತಿಗೆ ಬರುವ ಮಳಿಗೆ ಹಾಗೂ ಮನೆಗಳ ಮಾಲೀಕರಿಗೆ ಭೂ ಸ್ವಾಧೀನ ಪಡಿಸಿಕೊಂಡ ಪರಿಹಾರ ನೀಡದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ ಹಾಗೂ ಪ್ರಸ್ತುತ ಕಾಮಗಾರಿಯ ಸ್ಥಿತಿ ಗಮನಿಸಿದರೆ ಹುಚ್ಚನ ಮದುವೆಯಲ್ಲಿ ಉಂಡೋನೆ ಜಾಣ ಎಂಬಂತೆ ಕಾಮಗಾರಿಯ ಸ್ಥಳದಲ್ಲಿ ಅಧಿಕಾರಿಗಳ ಅನುಪಸ್ಥಿತಿಯ ಲಾಭ ಪಡೆದು ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುವ ಮೂಲಕ ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ಲೂಟಿ ಮಾಡಲು ಮುಂದಾಗಿದ್ದಾರೆಯೇ.? ಎಂಬ ಶಂಕೆ ವ್ಯಕ್ತವಾಗುತ್ತದೆ.
ಆದರೆ ಕಾಣದ ಕೈಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಂಡು ಕಾಣದಂತೆ ಜಾಣಕುರುಡರಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ಈ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ಮಾಡುವ ಅಧಿಕಾರಿಗಳು ಸ್ಥಳದಲ್ಲಿ ಇರುವರೇ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆಯೇ ಎಂಬುದೇ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಸಾರ್ವಜನಿಕರ ಹಿತ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಇನ್ನೂ ಮುಂದೆಯಾದರೂ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಸೂಕ್ತವಾದ ರೀತಿಯಲ್ಲಿ ಕಾಮಗಾರಿ ಯನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ