ಭೋವಿ ಯುವಕರ ಸಂಘ (ರಿ) ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ
ಕೊಟ್ಟೂರು : ತಾಲ್ಲೂಕಿನ ನಾಗರಕಟ್ಟೆಯ ಪ್ರೌಢಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಹಾಗೂ ಶ್ರೀ ಸಿದ್ದರಾಮೇಶ್ವರ ಭೋವಿ ಯುವಕರ ಸಂಘ (ರಿ) ತೂಲಹಳ್ಳಿ ಶ್ರೀ ಬಿ.ನೀಲಪ್ಪ ತಂಡದ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ ಶಾಲೆಯ ಮುಖ್ಯೋಪಾಧ್ಯಾಯರಾದ ಸುಭಾಷ್ ರವರು ಕಾರ್ಯಕ್ರಮವನ್ನು ಕೀ ಬೋರ್ಡ್ ನುಡಿಸುವುದರ ಮೂಲಕ ಉದ್ಘಾಟಿಸಿ. ಮಾತನಾಡಿ,ಸಂಗೀತ ಎನ್ನುವುದು ಮನಸ್ಸಿಗೆ ಮುದ ನೀಡುವ ದಿವ್ಯ ಔಷಧಿಯಂತಿದ್ದು ಸಂಗೀತ ಆಲಿಸುವುದರ ಮೂಲಕ ಮಾನಸಿಕ ನೆಮ್ಮದಿ ಕಾಣಬಹುದಾಗಿದೆ ಹಾಗಾಗಿ ಸಂಗೀತ ಮತ್ತು ಕಲೆ ಉಳಿಯಬೇಕಾದರೆ ಇಂದಿನ ಮಕ್ಕಳು ಕೂಡ ಮೊಬೈಲ್ ಬಳಕೆಗೆ ಒಳಗಾಗದೆ ಸಂಗೀತದಲ್ಲಿ ಆಸಕ್ತಿ ತೋರಬೇಕು ಎಂದು ಹೇಳಿದರು.
ಕಲಾ ತಂಡದ ನಾಯಕ ಶ್ರೀ ಬಿ ನೀಲಪ್ಪ ಮಾತನಾಡಿ ಸತತವಾಗಿ 15 ವರ್ಷಗಳಿಂದ ಕಲಾವಿದನಾಗಿ ಕಲಾ ಸೇವೆಯನ್ನು ಮಾಡಲು ನನಗೆ ಮುಖ್ಯವಾದ ಪ್ರೇರೇಪಣೆ ನೀಡಿದ್ದು ನನ್ನ ತಂದೆಯವರ ಕಲಾ ಸೇವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ಕೆ ರಂಗಣ್ಣನವರ ಅನುಮತಿಯಿಂದಾಗಿ ಇಂದು ಸುಗಮ ಸಂಗೀತ ಕಾರ್ಯಕ್ರಮವನ್ನು ಮಾಡುವ ಸೌಭಾಗ್ಯ ನಮ್ಮ ಕಲಾ ತಂಡಕ್ಕೆ ಲಭಿಸಿದೆ,ಇದೆ ತರ ನಮ್ಮ ತಂಡದಿಂದ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು ಜನರ ಪ್ರೋತ್ಸಾಹ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಯುತ ಸುನಿಲ್ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತೂಲಹಳ್ಳಿ,ಸಿದ್ದಲಿಂಗಪ್ಪ ಕಲಾವಿದರು ಹಸಿರು ಹೊನಲು ಸೇವಾ ಸಂಸ್ಥೆಯ ಸೋಮಶೇಖರ್ ರವರು, ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಅಜಯ್ ಕುಮಾರ್, ಶಾಲೆಯ ಮಾರ್ಗದರ್ಶಕರಾದ ರಾಜಣ್ಣ,ಚೌಡೇಶ್ ಕಾರ್ಯದರ್ಶಿಗಳು ಸಿದ್ದರಾಮೇಶ್ವರ ಭೋವಿ ಯುವಕರ ಸಂಘ ತೂಲಹಳ್ಳಿ , ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕಿ ಕುಮಾರಿ ಪ್ರಿಯಾಂಕ ಮತ್ತು ಗಾಯಕರಾದ ಶಿವಕುಮಾರ್ , ಹಾಗೂ ರಿದಂ ಪ್ಯಾಡ್ ಶಿವಕುಮಾರ್ ಟಿ ಮತ್ತು ಕೀಬೋರ್ಡ್ ವಸಂತ ಮೂರ್ತಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರು , ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು,ಊರಿನ ಗ್ರಾಮಸ್ಥರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ