ಚರಂಡಿ ನೀರನ್ನು ನೇರವಾಗಿ ಹಳ್ಳಕ್ಕೆ ಹರಿಸಲು ಮನವಿ
ಮಸ್ಕಿ : ಪುರಸಭೆ ವ್ಯಾಪ್ತಿಯಲ್ಲಿನ ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದವರೆಗೆ ಚರಂಡಿ ಕಾಮಗಾರಿಯನ್ನು ನೇರವಾಗಿ ಹಳ್ಳಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಮನವಿ ಮಾಡಲಾಯಿತು.
ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆ ಪ್ರಾಧಿಕಾರದಿಂದ ಕೈಗೊಂಡಿರುವ ಚರಂಡಿ ಕಾಮಗಾರಿಯನ್ನು ಮಾಡುತ್ತಿದ್ದು ಚರಂಡಿ ಕಾಮಗಾರಿ ಯಿಂದ
ಬಹುತೇಕ ವಾರ್ಡ್ ಗಳು ಚರಂಡಿ ನೀರು ಮತ್ತು ಮಳೆ ನೀರು ಮನೆಯೊಳಗೆ ನುಗ್ಗಿ ಮುಳುಗುವ ಭೀತಿಯಲ್ಲಿವೆ ಏಕೆಂದರೆ ರಸ್ತೆ ಚರಂಡಿ ಅವೈಜ್ಞಾನಿಕ ವಾಗಿದೆ.
ಎಂದು ಸಂಘಟನೆಗಳಿಂದ ಹೋರಾಟಮಾಡಿ ಮನವಿ ಸಲ್ಲಿಸಿದರು ಆದರೆ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಸ್ಪಂಧಿಸುವ ಮನೋಭಾವನೆ ಮರೆತಂತೆ ಕಾಣುತ್ತದೆ.
ಆದ್ದರಿಂದ ಸಂಭಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ನಮ್ಮ ಸಮಸ್ಯೆಗೆ ಪರಿಹಾರವನ್ನು ನೀಡಿ ಪಟ್ಟಣ ಅಭಿವೃದ್ಧಿ ಹಾಗೂ ಗುಣಮಟ್ಟದ ಚರಂಡಿ ಕಾಮಗಾರಿಯನ್ನು ನಿರ್ಮಾಣ ಮಾಡಿ ಹಳೇಚರಂಡಿಗಳಿಗೆ ಸಂಪರ್ಕ ಕಲ್ಪಿಸದೆ ನೇರವಾಗಿ ಹಳ್ಳದ ಚರಂಡಿಗೆ ನೀರನ್ನು ಬೀಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ, ಎಲ್ಲಾ ವಾರ್ಡಗಳ ನಿವಾಸಿಗಳು ಹಾಗೂ ಸಾರ್ವಜನಿಕರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ