ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲೀಷ್ ಭಾಷೆ ಬಹುಮುಖ್ಯ : ಸಿದ್ಧರಾಮ ಕಲ್ಮಠ

ಕೊಟ್ಟೂರು : ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಭಾಗದಿಂದ ಪರೀಕ್ಷಾ ದಿಕ್ಸೂಚಿ ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಸಿದ್ಧರಾಮ ಕಲ್ಮಠ ಮಾತನಾಡಿ ಕುವೆಂಪು ಜನ್ಮದಿನ-ವಿಶ್ವಮಾನವ ದಿನಾಚರಣೆಗೆ ಶುಭ ಕೋರಿದರು, ಇಂಗ್ಲೀಷ ಎನ್ನುವುದು ಕಬ್ಬಿಣದ ಕಡಲೆಯಲ್ಲ, ಅರ್ಥೈಸಿಕೊಂಡರೆ ಬಹಳ ಸುಲಭದ ವಿಷಯ, ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಗಾರವನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಅಂಕಗಳಿಸಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಬಹುಮುಖ್ಯ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪದವಿ ಪ್ರಾಚಾರ್ಯ ಡಾ.ಎಂ. ರವಿಕುಮಾರ್ - ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಇಂಗ್ಲೀಷನ್ನು ಸುಲಭಗೊಳಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಹಾಗೂ ಯಾವುದೇ ವಿಷಯಗಳು ಸುಲಭ ಮತ್ತು ಕಷ್ಟ ಅಲ್ಲ ವಿದ್ಯಾರ್ಥಿಗಳ ಗ್ರಹಿಕೆ ಮತ್ತು ಹಿತಾಸಕ್ತಿಯ ಮೇಲೆ ಅವಲಂಬಿಸಿದೆ,ವಿದ್ಯಾರ್ಥಿಗಳು ಈ ಕಾರ್ಯಗಾರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆಗೆ ಸಂಬಂಧಪಟ್ಟಂತೆ ವಿಶೇಷ ಉಪನ್ಯಾಸವನ್ನು ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹೊಸಪೇಟೆಯ ವಿಜಯನಗರ ಪದವಿ-ಪೂರ್ವ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಶ್ರೀ ಶರಣಬಸವ ಇಂಗ್ಲಿಷ್ ಭಾಷೆ ಮತ್ತು ಪಠ್ಯವನ್ನು ಕುರಿತಾದಂತಹ ಪ್ರಮುಖ ಅಂಶಗಳನ್ನು ತಿಳಿಸುವುದರ ಮೂಲಕ, ಹೆಚ್ಚು ಅಂಕ ಗಳಿಸುವಂತಹ, ವಿಷಯಗಳನ್ನು ತಿಳಿಸಿ, ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಅರ್ಥೈಸಿ ಉಪನ್ಯಾಸ ನೀಡಿದರು.

 ಈ ಕಾರ್ಯಕ್ರಮದಲ್ಲಿ ಪದವಿಪೂರ್ವ ಪ್ರಾಚಾರ್ಯ ಪ್ರಶಾಂತ್ ಕುಮಾರ್ ಎಂ. ಹೆಚ್. ಉಪಸ್ಥಿತರಿದ್ದು, ಆಡಳಿತ ಮಂಡಳಿಯ ಸದಸ್ಯರಾದ ಅಡಿಕೆ ಮಂಜುನಾಥಯ್ಯ ಕೆ.ಬಿ. ಮಲ್ಲಿಕಾರ್ಜುನ್, ಡಿ.ಎಸ್. ಶಿವಮೂರ್ತಿ, ಹಾಗೂ ಹಿರಿಯ ಉಪನ್ಯಾಸಕರಾದ ಪ್ರೊ. ಎಸ್ ಕೃಷ್ಣಪ್ಪ, ಬಿ ಎಸ್ ಪಾಟೀಲ್, ಪೃಥ್ವಿರಾಜ್, ಬಸವರಾಜ್ ಚೇತನ್ ಭಾಗವಹಿಸಿದ್ದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಬಿ ಸುದರ್ಶನ್ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಶ್ರೀಮತಿ ವಿಜಯಲಕ್ಷ್ಮಿ ಸಜ್ಜನ್ ಪ್ರಾರ್ಥಿಸಿದರೆ, ಕೆ ಎಂ ಪ್ರಭಾಕರ್ ಸ್ವಾಗತಿಸಿದರು. ಶ್ರೀ ರೇವಣ್ಣ ನಿರೂಪಿಸಿ, ಯಶಸ್ವಿಗೊಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ