*ಮನುಷ್ಯನಿಗೆ ಸಾವಿದೆ ಸಂಗೀತಕ್ಕೆ ಸಾವಿಲ್ಲ.*
*ನೂರಾರು ಹಿಂದಿನ ವರ್ಷದ ಹಾಡುಗಳು ಇಂದಿಗೂ ಜೀವಂತ.*
ಕೊಟ್ಟೂರು: ಸಂಗೀತವನ್ನು ಕೇಳುವ ಹವ್ಯಾಸ ನಮ್ಮ ದಿನನಿತ್ಯದ ಸಾಕಷ್ಟು ಒತ್ತಡಗಳನ್ನು ಕಡಿಮೆ ಮಾಡುತ್ತದೆ ಯುವ ಪೀಳಿಗೆ ಸಂಗೀತ ಕೇಳುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಡಾಕ್ಟರ್ ಪಂಡಿತ್ ಪುಟ್ಟರಾಜ ಗವಾಯಿಗಳು ತೀರಿಹೋಗಿದ್ದರೂ ಸಹ ಅವರ ಸೇವೆ ಅವರ ಸಂಗೀತದಿಂದ ಇಂದಿಗೂ ನಮ್ಮ ಜೊತೆ ಇರುವರು ಎನ್ನುವ ಭಾವ ಮೂಡುತ್ತದೆ ಪಂಡಿತರು ಅಂದರಾಗಿದ್ದರು ಸಹ ಸಾಕಷ್ಟು ಜನರಿಗೆ ಸಂಗೀತದ ಮೂಲಕ ಬೆಳಕು ಚೆಲ್ಲಿದ್ದಾರೆ ನೂರಾರು ಹಿಂದಿನ ವರ್ಷದ ಹಾಡುಗಳು ಇಂದಿಗೂ ಜೀವಂತವಾಗಿವೆ ಮನುಷ್ಯನಿಗೆ ಒಂದಲ್ಲ ಒಂದು ದಿನ ಸಾವಿದೆ ಆದರೆ ಸಂಗೀತಕ್ಕೆ ಸಾವಿಲ್ಲವೆಂದು ಸುಧಾಕರ್ ಪಾಟೀಲ್ ಮಾತನಾಡಿದರು. ಕೊಟ್ಟೂರಿನ ಇಂದು ಕಾಲೇಜಿನಲ್ಲಿ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಮಿತಿ ಇವರಿಂದ 14ನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಟ್ಟರಾಜ ಗವಾಯಿಗಳ ನೆನಪು ಮಾಡುತ್ತಾ ಜಗಮಲ್ಲ ಚಲನಚಿತ್ರದ *ಓ ನನ್ನ ಕಣ್ಣೆ* ಖ್ಯಾತಿಯ ಸಿದ್ದಾರ್ಥ್ ಬಿ , ತಬಲವಾದ್ಯಕರಾದ ಶ್ರೀಧರ ಮಾಂಡ್ರೆ, ಹಾರ್ಮೋನಿಯಂ ವಾದ್ಯಕರಾದ ಸತೀಶ್ ಭಟ್ ಹೆಗ್ಗಾರ್, ತಾಳವಾದ್ಯ ಸಂತೋಷ್ ಅಳವಂಡಿ, ಕಿರುಚಿತ್ರ ನಿರ್ದೇಶಕ ವೆಂಕಟೇಶ, ಕಾರ್ತಿಕ್, ಅಪ್ಪಾಜಿ, ವಿನಯ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉಪನ್ಯಾಸಕರಾದ ಮಹೇಶ್ ನಿರೂಪಿಸಿದರು ವೀರೇಶ್ ಸ್ವಾಗತಿಸಿದರು ತಿಪ್ಪೇಸ್ವಾಮಿ ಹೊಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ