ತಾಲೂಕಿಗೆ ಆಂಬುಲೆನ್ಸ್ ನೀಡಲು ಆಗ್ರಹಿಸಿ ಶಾಸಕರಿಗೆ ಮನವಿ
ಮಸ್ಕಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆ ಸರಿಯಾಗಿ ಇಲ್ಲದ ಕಾರಣ ರೋಗಿಗಳು ಪರದಾಡುತ್ತಿದ್ದಾರೆ. ಕೂಡಲೇ ಸರ್ಕಾರದಿಂದ ಹೊಸ ತಂತ್ರಜ್ಞಾನ ಆಂಬುಲೆನ್ಸ್ ಒದಗಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಭಾನುವಾರ ಶಾಸಕ ಆರ್. ಬಸನಗೌಡ ಅವರಿಗೆ ಮನವಿ ಸಲ್ಲಿಸಿದರು.
ಆಸ್ಪತ್ರೆಯಲ್ಲಿ ಹಿಂದೆ ಇದ್ದ 108 ವಾಹನ ಕೆಟ್ಟು ಹೋಗಿದೆ. ಆಸ್ಪತ್ರೆಯ ಆಂಬುಲೆನ್ಸ್ ದುಸ್ಥಿತಿಯಲ್ಲಿರುವ ಕಾರಣ ಲಿಂಗಸುಗೂರು, ಮುದಗಲ್ ಹಾಗೂ ಬಳಗಾನೂರು ಸರ್ಕಾರಿ ಆಸ್ಪತ್ರೆಯಿಂದ ಆಂಬುಲೆನ್ಸ್ ತರಸಿ ರೋಗಿಗಳನ್ನು ಕಳಿಸಬೇಕಾದ ಸ್ಥಿತಿ ಬಂದಿದೆ ಎಂದು ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕು ಕೇಂದ್ರ ಸ್ಥಾನವಾದ ಪಟ್ಟಣಕ್ಕೆ ಕೂಡಲೇ ಆಂಬುಲೆನ್ಸ್ ಸೇವೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸಂಘಟನೆಗಳ ಮುಖಂಡರಾದ ಆಶೋಕ ಮುರಾರಿ, ದುರಗರಾಜ ವಟಗಲ್, ಆರ್. ಕೆ. ನಾಯಕ, ಕಿರಣ್ ವಿ ಮುರಾರಿ, ವಿಜಯ ಬಡಿಗೇರ್, ಸಿದ್ದು ಮುರಾರಿ, ಬಸವರಾಜ ಉದ್ದಾಳ, ಮೌನೇಶ ಹಸಮಕಲ್ ಇನ್ನಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ