ಅಪರಾಧಗಳ ತಡೆಗೆ ಸಾರ್ವಜನಿಕರು ಪೋಲಿಸರೊಂದಿಗೆ ಸಹಕರಿಸಿ :ಪಿಎಸ್‌ಐ ಗೀತಾಂಜಲಿ ಶಿಂಧೆ
ಕೊಟ್ಟೂರು: ಪೋಲಿಸರು ಜನಸ್ನೇಹಿಗಳಾಗಿ ಜನರ ಪ್ರಾಣ, ಆಸ್ತಿ-ಪಾಸ್ತಿಗಳ ರಕ್ಷಣೆಗಾಗಿ ಸದಾ ಶ್ರಮಿಸುತ್ತಿದ್ದು, ಅಪರಾಧಗಳ ತಡೆಗೆ ಸಾರ್ವಜನಿಕರು ಪೋಲಿಸರೊಂದಿಗೆ ಪರಸ್ಪರ ಸಹಕರಿಸಬೇಕು ಎಂದು ಕೊಟ್ಟೂರು ಪಿಎಸ್‌ಐ ಗೀತಾಂಜಲಿ ಶಿಂಧೆ ಮಾತನಾಡಿದರು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಪಟ್ಟಣದ ಶಾಲೆ, ಕಾಲೇಜ್, ಬಸ್ ನಿಲ್ದಾಣ ಹಾಗೂ ಸಂತೆ ಮಾರ್ಕೆಟ್ ಸೇರಿದಂತೆ ಜನ ಸಂದಣಿ ಪ್ರದೇಶಗಳಲ್ಲಿ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಅಪರಾಧಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು.
ಯುವ ಪೀಳಿಗೆಯು ಮೋಜು ಮಸ್ತಿಗೆ ಬಿದ್ದು, ಕಾನೂನು ಪರಿಪಾಲನೆ ಪಾಲಿಸದೆ, ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದಿರಲು ಸೂಚಿಸಿದರು ಹಾಗೆ ಪೋಷಕರು ತಮ್ಮ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತಾಳದೆ ಮಕ್ಕಳ ಚಲನವಲನಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು. ಹಾಗೆ ಸಾರ್ವಜನಿಕ ಸ್ಥಳಗಳಲ್ಲಿ ಜೇಬುಗಳ್ಳರ, ಸರಗಳ್ಳರ ಹಾಗೂ ಮೊಬೈಲ್ ಕಳ್ಳರಿರುವುದು ಮತ್ತು ತಮ್ಮನ್ನು ಬೇರೆಡೆ ಸೆಳೆದು ಹಣದ ಬ್ಯಾಗ್ ದೋಚುವಂತದ್ದು, ಎಟಿಎಂ ಕಾರ್ಡ್ ಸೀಕ್ರೆಟ್ ನಂಬರ್ ಪಿನ್ ಕೋಡ್ ಹ್ಯಾಕರ್ ಇದ್ದು ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಮಹಿಳೆಯರು ಆಭರಣಗಳನ್ನು ಹೊರಗಡೆ ಕಾಣುವಂತೆ ಧರಿಸಿ ವಾಯುವಿಹಾರಕ್ಕೆ ತೆರಳಬೇಡಿ, ೪-೫ ದಿನಗಳು ಊರಿಗೆ ಹೋದರೆ ಮನೆಯಲ್ಲಿನ ಆಭರಣಗಳನ್ನು ಮತ್ತು ಹಣವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟು ಹೋಗತಕ್ಕದ್ದು ಹಾಗೆ ಬೈಕ್‌ಗಳನ್ನು ಬಿಟ್ಟು ಹೋಗುವಾಗ ಹ್ಯಾಂಡ್ ಲಾಕ್ ಮಾಡಿ ಹೋಗತಕ್ಕದ್ದು ಎಂಬ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಸುಮಾರು ೧೨ ಜಾಗೃತಿ ಮಾಹಿತಿಗಳನ್ನು ತಿಳಿಸಿದರು.
ಅಪರಾಧ ತಡೆಗಟ್ಟುವಲ್ಲಿ ಸಾರ್ವಜನಿಕರು ಪೋಲಿಸ್ ರೊಂದಿಗೆ ಕೈ ಜೋಡಿಸಿ, ಏನೇ ಅಪರಾಧ ಸಮಸ್ಯೆ ಇದ್ದರು ೨೪/೭ ಕಾರ್ಯ ನಿರತವಾಗಿರುವ ಪೋಲಿಸ್ ವಾಹನಕ್ಕೆ ೧೧೨ ಗೆ ಕರೆ ಮಾಡಿ ರಕ್ಷಣೆ ಪಡೆದುಕೊಳ್ಳಿ ಹಾಗೆ ಅಪರಾಧ ತಡೆಯಿರಿ ಎಂದು ಹೇಳಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ