ಕಾಟಾಚಾರಕ್ಕೆ ನಡೆಸಿದ ಕುಂದು ಕೊರತೆ ಸಭೆ ; ಶರಣಬಸವ ಸೊಪ್ಪಿಮಠ

ಮಸ್ಕಿ : ತಾಲ್ಲೂಕಿನ ಬಸವೇಶ್ವರ ನಗರದ ತಹಶೀಲ್ದಾರರ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಶಾಸಕರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದುಕೊರತೆ ಅಹವಾಲು ಸಭೆಯು ಕಾಟಾಚಾರದ ಸಭೆ ಎಂದು ಶರಣ ಬಸವ ಸೊಪ್ಪಿಮಠ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಹಸೀಲ್ದಾರರ ಕಚೇರಿ ಭೇಟಿ ನಂತರ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಇದ್ದಾರೆ ಹೊರೆತು ಸಾರ್ವಜನಿಕರು ಯಾರು ಇಲ್ಲದಂತಾಗಿತ್ತು.

ತಾಲ್ಲೂಕಿನಲ್ಲಿ ದೂರು ಸಲ್ಲಿಸಲು ಸಮಸ್ಯೆಗಳೇ ಇಲ್ಲವೇ ಅಥವಾ ಸಾರ್ವಜನಿಕರು ಸಭೆಗೆ ಬರುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಗೃತಿ ಮೂಡಿಸುವಲ್ಲಿ ಎಡವಿದ್ದಾರೆಯೋ..??? ಎನ್ನುವ ಅನುಮಾನವು ಸಾರ್ವಜನಿಕರಲ್ಲಿ ಮೂಡಿದೆ.

ತಾಲ್ಲೂಕಿನ ಗೋನಾಳ ಗ್ರಾಮದ ಆಲಂಬಾಷ ಎನ್ನುವರು ಗೋನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಸ್ಮಶಾನ ಒತ್ತುವರಿಯಾಗಿದ್ದು ಅದನ್ನು ಸರಿಪಡಿಸುವಂತೆ ಮನವಿ ಮಾಡಿದರು, ಅದೇ ರೀತಿ ಸುರೇಶ್ ಬ್ಯಾಳಿಯವರು ಪಟ್ಟಣ ಸೇರಿ ತಾಲೂಕಿನಾದ್ಯಂತ ಎಗ್ಗಿಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದು ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಾಗೂ ಮರಳು ತಪಾಸಣಾ ಘಟಕಗಳನ್ನು ಸ್ಥಾಪಿಸಲು ಮೌಖಿಕವಾಗಿ ಮನವಿ ಮಾಡಿದರು. 

ನಂತರ ತಾಲೂಕಿನ ಭೋವಿ ಸಮಾಜದ ರವಿ ಚಿಗರಿ ಅವರು ಮಸ್ಕಿ ತಾಲೂಕಿನ ಭೋವೇರ್, ರಾಜಭೋವಿ ಎಂದು ನಕಲಿ ದಾಖಲೆ ಸಲ್ಲಿಸಿ ಭೋವಿ ಎಂಬ ಪರಿಶಿಷ್ಟ ಜಾತಿ ಎಸ್ ಸಿ ಪ್ರಮಾಣ ಪತ್ರ ಪಡೆಯುತ್ತಿರುವುದನ್ನು ತಡೆದು ಮತ್ತು ನಕಲಿ ಪ್ರಮಾಣ ಪತ್ರ ಪಡೆದಿದ್ದನ್ನು ರದ್ದು ಪಡಿಸುವಂತೆ ಲಿಖಿತವಾಗಿ ಹಾಗೂ ಮೌಖಿಕವಾಗಿ ಮನವಿ ಮಾಡಿದರು.

ಸಂತೆಕೆಲ್ಲೂರು ಗ್ರಾಮದ ಚಂದ್ರರೆಡ್ಡಿ ದೇಸಾಯಿ ಅವರು ಸರಕಾರಿ ಆಸ್ಪತ್ರೆಯನ್ನು ನೆಲಸಮ ಮಾಡಿ ಜಾಗವನ್ನು ಅತಿಕ್ರಮಣ ಮಾಡಲು ಸಂಚು ಹೂಡಿದ್ದಾರೆ ಎಂದು ಮೌಖಿಕವಾಗಿ ದೂರಿದರು.

ಇನ್ನೂ ತಾಲೂಕಿನಲ್ಲಿ ಅನೇಕ ಜ್ವಲಂತ ಸಮಸ್ಯೆಗಳು ಇದ್ದು ಅವುಗಳಿಗೆ ಸ್ಪಂದಿಸಿ ಪರಿಹಾರ ನೀಡುವ ಸಭೆ ಕಾಟಾಚಾರಕ್ಕೆ ಆಗುತ್ತದೆ ಅಂದರೆ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಿಂಬಿಸುತ್ತದೆ.

ಇನ್ನೂ ಮುಂದಾದರೂ ಈ ರೀತಿಯ ಘಟನೆಗಳು ನಡೆಯದಂತೆ ಇದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳು ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ 

ಮುಂದೆ ಆದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುತ್ತಾರೆಯೋ ಎಂದು ಕಾದು ನೋಡಬೇಕಾಗಿದೆ.???

ಹಾಗೇಯೇ ತಾಲೂಕಿನಲ್ಲಿ ಸಾಕಷ್ಟು ರೈತರ ಸಮಸ್ಯೆಗಳು ಇದ್ದು ಆದರೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲದೆ ಸಭೆಯನ್ನು ಮಾಡಿದ್ದು ವಿಷಾದನೀಯ ಎಂದು  

ಶರಣಬಸವ ಸೊಪ್ಪಿಮಠ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ