ಗ್ರಾಮ ಸಹಾಯಕರ ವೇತನ ಪರಿಷ್ಕರಿಸಲು ಪಾದಯಾತ್ರೆ

ಕೊಟ್ಟೂರು ಕಂದಾಯ ಇಲಾಖೆಯ ಗ್ರಾಮ ಸಹಾಯಕರ ವೇತನ ಪರಿಷ್ಕರಿಸಿ ಡಿ ದರ್ಜೆ ನೌಕರರೆಂದು ಪರಿಗಣಿಸಲು ಪಾದಯಾತ್ರೆ ಮಾಡಿ ಮುಷ್ಕರ ಮಾಡಲು ಅನುಮತಿ ಕೋರಿ ಕೊಟ್ಟೂರು ತಹಶೀಲ್ದಾರರಿಗೆ ಗ್ರಾಮ ಸಹಾಯಕರ ಸಂಘ ಮನವಿ ಸಲ್ಲಿಸಿತು. 

ಕರ್ನಾಟಕ ರಾಜ್ಯ ಗ್ರಾಮ ಸಹಾಯಕರ ಕೇಂದ್ರ ಸಂಘ, ಬೆಂಗಳೂರು ಇವರ ನಿರ್ದೇಶನದಂತೆ ದಿನಾಂಕ ೧೧-೧೨-೨೦೨೩ ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ರಾಣಿ ಚನ್ನಮ್ಮ ಅರಮನೆಯಿಂದ ಸುವರ್ಣ ಸೌಧಕ್ಕೆ ಪಾದಯಾತ್ರೆ ಮಾಡಿ ಮುಷ್ಕರಕ್ಕೆ ಕರೆ ನೀಡಿದ್ದು ನಮ್ಮ ತಾಲ್ಲೂಕಿನಿಂದ ನಾವುಗಳು ಭಾಗವಹಿಸಲು ಅನುಮತಿ ನೀಡಬೇಕೆಂದು ಗ್ರಾಮ ಸಹಾಯಕರ ಸಂಘ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು. ಅಧ್ಯಕ್ಷರಾದ ಪಕ್ಕೀರಪ್ಪ ಉಪಾಧ್ಯಕ್ಷ ಹನುಮಂತಪ್ಪ, ಟಿ.ಭೀಮಸೇನ, ರಾಧಿಕಾ ಹೆಚ್, ಕೆ.ಲಿಂಗನಗೌಡ, ಮರುಳಸಿದ್ದಪ್ಪ, ವೆಂಕಟೇಶ, ಹನುಮಂತಪ್ಪ, ಟಿ.ಚೌಡಪ್ಪ, ಟಿ.ಕೊಟ್ರೇಶ ಇನ್ನುಳಿದ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*