ಇಂದಿರಾ ಕ್ಯಾಂಟೀನ್ ಮಂಜೂರು ಪತ್ರಿಕಾ ಹೇಳಿಕೆ ಮೂಲಕ ಧನ್ಯವಾದ

ಮಸ್ಕಿ: ತಾಲೂಕಿಗೆ ಇಂದಿರಾ ಕ್ಯಾಂಟೀನ್ ಮಂಜೂರು ಮಾಡುವಂತೆ ಶಾಸಕರ ಹಾಗೂ ತಹಶೀಲ್ದಾರ್ ಮೂಲಕ ರಾಜ್ಯ ಸರಕಾರದ ಈ ಹಿಂದೆ ಆಗಸ್ಟ್ 19 ರಂದು ಎಸ್ ಎಫ್ ಐ,ಅಖಿಲ ಕರ್ನಾಟಕ ವಾಲ್ಮೀಕಿ ಸಂಘ,ಸಮಾಜ ಸೇವಕರು ಯಂಕಪ್ಪ ಇಂಜಿನಿಯರ್ ಸೇರಿ ಹಲವು ಸಂಘಟನೆಯ ಮುಖಂಡರು ಮಸ್ಕಿ ತಾಲೂಕಿಗೆ ಇಂದಿರಾ ಕ್ಯಾಂಟೀನ್ ಮಂಜೂರು ಮಾಡಬೇಕು ಎಂದು ಈ ಹಿಂದೆ ಹಲವು ಪತ್ರಿಕೆಗಳಲ್ಲಿ ಪ್ರಕಟಣೆ ಮಾಡಲಾಗಿತ್ತು ಅದರ ಪ್ರತಿಯಾಗಿ ಇಂದು ಇಂದಿರಾ ಕ್ಯಾಂಟೀನ್ ಮಂಜೂರು ಮಾಡಿದ್ದು ಮಂಜೂರಾತಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ ತಾಲೂಕಾಡಳಿತ,ಜಿಲ್ಲಾಡಳಿತ, ಕ್ಷೇತ್ರದ ಶಾಸಕರಿಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರಿಕಾ ಹೇಳಿಕೆ ಮೂಲಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಎಸ್ ಎಫ್ ಐ (ಭಾರತೀಯ ವಿದ್ಯಾರ್ಥಿ ಪೇಡರೇಷನ್) ಸಂಘಟನೆ ಮಸ್ಕಿ ತಾಲೂಕ ಸಮಿತಿ, ಅಖಿಲ ಕರ್ನಾಟಕ ವಾಲ್ಮೀಕಿ ಸಂಘ ಮಸ್ಕಿ ತಾಲೂಕು ಘಟಕ ನೇತೃತ್ವದಲ್ಲಿ ಬೃಹತ್ ವಿದ್ಯಾರ್ಥಿ, ಯುವಜನರು ಹಿರಿಯರು, ಪ್ರಗತಿ ಪರರು ಎಲ್ಲರು ಸೇರಿ ಇಂದಿರಾ ಕ್ಯಾಂಟೀನ್ ಮಸ್ಕಿ ಯಲ್ಲಿ ಮಾಡಬೇಕು ಎಂದು ಒತ್ತಾಯಿಸಿ ತಾಲೂಕ ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ಶಾಸಕರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯಲಾಗಿತ್ತು ಇದರ ಪ್ರತಿ ಫಲವಾಗಿ ಇಂದು ಮಸ್ಕಿ ನಗರಕ್ಕೆ ಹಾಗೂ ತುರ್ವಿಹಾಳ ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಮಂಜೂರು ಮಾಡಿರುವುದು ಸಂತಸ ವಿಷಯ.ಇದರಿಂದ ತಾಲೂಕಿನ ವಿದ್ಯಾರ್ಥಿಗಳ, ಯುವಜನರ, ಕಾರ್ಮಿಕರ, ರೈತರ, ಹಮಾಲಾರ, ಬಡವರ ಹಸಿವನ್ನು ನೀಗಿಸುವ ಇಂದಿರಾ ಕ್ಯಾಂಟೀನ್ ಮಂಜೂರು ಮಾಡಿದ ರಾಜ್ಯ ಸರಕಾರಕ್ಕೆ ಹಾಗೂ ಮಂಜೂರಾತಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಮುಖ್ಯ ಮಂತ್ರಿಗಳಿಗೆ, ಶಾಸಕರಿಗೆ, ತಾಲೂಕ ಮತ್ತು ಜಿಲ್ಲಾಡಳಿತಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿ ಹಾಗೆಯೇ ಆದಷ್ಟು ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಮುಗಿಸಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಬೇಕು ಎಂದು ಮಸ್ಕಿ ತಾಲೂಕ ಸಮಿತಿಯ ಎಸ್ ಎಫ್ ಐ ಅಧ್ಯಕ್ಷರು

ಬಸವಂತ ಹಿರೇಕಡಬೂರು, ಮೌನೇಶ್ ಕಣ್ಣೂರು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಯಂಕಪ್ಪ ಇಂಜಿನಿಯರ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ