ಯತ್ನಾಳ್ ಆರೋಪವನ್ನು ತನಿಖೆಗೆ ಒಳಪಡಿಸಿ:ವೆಂಕಟೇಶ್ ಹೆಗಡೆ

 


ಬಳ್ಳಾರಿ:ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊರೋನ ಕಾಲದಲ್ಲಿ 40 ಸಾವಿರ ಕೋಟಿ ರೂ. ಹಗರಣ ಆಗಿರುವ ಕುರಿತು ಅದೇ ಪಕ್ಷದ ನಾಯಕ, ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆಗೆ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಬೇಕು ಎಂದು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರ ಹಾಗೂ ಕೆಪಿಸಿಸಿ ರಾಜ್ಯ ಜಂಟಿ ಪ್ರಚಾರ ಸಮಿತಿ ಸಂಯೋಜಕ ವೆಂಕಟೇಶ್ ಹೆಗಡೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿ ಎಂತಹ ಲಜ್ಜೆಗೆಟ್ಟ ಸರ್ಕಾರ ನಡೆಸಿತು ಎಂಬುದು ಇದೀಗ ಯತ್ನಾಳ್ ಹೇಳಿಕೆಯಿಂದ ಬಯಲಾಗಿದೆ. ಕೊರೊನ ಕಾಲದಲ್ಲಿ ಜನ ಪಡಬಾರದ ಪಾಡು ಪಟ್ಟರು. ಅದೆಷ್ಟೋ ಜನ ಸಾವಿರಾರು ಕಿಲೋ ಮೀಟರ್ ನಡೆದುಕೊಂಡು ತಮ್ಮ ಊರು ತಲುಪಿದರು. ಹಸಿವಿನಿಂದ ಬಳಲಿದರು. ಲಸಿಕೆಗಾಗಿ ಪರದಾಡಿದರು. ಅದೆಷ್ಟೊ ಜನ ಕೊರೋನ ಕಾರಣಕ್ಕೆ ಸಾವಿಗೀಡಾದರು.

ಇಷ್ಟೆಲ್ಲದರ ಮಧ್ಯೆ ಬಿಜೆಪಿ ಸರ್ಕಾರ ಹಣ ಲೂಟಿ ಮಾಡುವುದರಲ್ಲಿ. ತಲ್ಲೀನ ಆಗಿತ್ತು ಎಂಬುದು ನಿಜಕ್ಕೂ ನಾವೆಲ್ಲಾ ತಲೆ ತಗ್ಗಿಸುವ ವಿಚಾರ ಆಗಿದೆ.
ಯತ್ನಾಳ್ ಅಂದೆ ಈ ವಿಷಯ ಬಯಲು ಮಾಡಿ ರಾಜ್ಯ ಸರ್ಕಾರದ ವಿರುದ್ದ ಮಾತನಾಡಬೇಕಿತ್ತು. ತಡವಾಗಿ ಆದರೂ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. 224 ಜನ ಶಾಸಕರು ಮಾಡದ ಕೆಲಸವನ್ನು ಅವರು ಮಾಡಿದ್ದಾರೆ. ಹೀಗಾಗಿ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು.
ಯಾವುದೇ ಕಾರಣಕ್ಕೂ ಇಂಥ ಸಂದರ್ಭದಲ್ಲಿ ಮೀನ ಮೇಷ ಎಣಿಸಬಾರದು. ತನಿಖೆಗೆ ವಹಿಸಬೇಕು. ಕೊರೋನ ಕಾಲದಲ್ಲಿ ಇಂಥ ಎಷ್ಟು ಹಗರಣ ನಡೆದಿವೆ ಎಂಬುದನ್ನು ಸಹ ತನಿಖೆ ಮಾಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗುವ ರೀತಿ ನೋಡಿಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ