ಪಾಲಕರ ಕನಸು ನನಸಾಗಿಸಲು ಶ್ರಮಿಸಿ : ಎನ್ ಎಸ್ ಬೋಸರಾಜ್
ಮಸ್ಕಿ : ಪಟ್ಟಣದಲ್ಲಿನ ಮೆಟ್ರಿಕ್ ನಂತರದ ಬಾಲಕರವಸತಿ ನಿಲಯ ನೂತನ ಕಟ್ಟಡ ಉದ್ಘಾಟಿಸಿ ಶನಿವಾರ ವೇದಿಕೆಯ ಮೇಲೆ ಮಾತನಾಡಿ ವಿದ್ಯಾರ್ಥಿಗಳು ಪಾಲಕರ ಕನಸು ನನಸಾಗಿಸಲು ಶ್ರಮಿಸಬೇಕು ಎಂದರು.
ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಯೋಜನೆ ಜಾರಿಗೆ ತಂದಿದ್ದು, ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಸತಿ ನಿಲಯ ನಿರ್ಮಿಸಿದೆ. ಇವುಗಳನ್ನು ಸದುಪಯೋಗ ಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ನಿಲಯಗಳ ವ್ಯವಸ್ಥೆ
ಹಲವು ದಶಕಗಳ ಹಿಂದೆ ಗ್ರಾಮೀಣ ಭಾಗದ ಬಡ ಮತ್ತು ರೈತಾಪಿ ವರ್ಗದ ಮಕ್ಕಳು ಸಾರಿಗೆ ಬಸ್ ಮತ್ತು ವಸತಿ ನಿಲಯಗಳ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ಶಿಕ್ಷಣವಂತರಾಗಲು ಹಂತ ಹಂತವಾಗಿ ಸರ್ಕಾರ ಸಾರಿಗೆ ಬಸ್ ಮತ್ತು ವಸತಿ ನಿಲಯಗಳ ವ್ಯವಸ್ಥೆ ಮಾಡುತ್ತ ಬರುತ್ತಿದೆ. ವಸತಿ ನಿಲಯಗಳಲ್ಲಿನ ಸೌವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ದುಶ್ಚಟಗಳ ದಾಸರಾಗದೆ, ಜಗಳ, ದಬ್ಬಾಳಿಕೆ, ದೌರ್ಜನ್ಯವೆಸಗದೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚುತ್ತಿದ್ದರಿಂದ ಹೆಚ್ಚುವರಿಯಾಗಿ ವಸತಿ ನಿಲಯ ನಿರ್ಮಿಸಲು ಆದ್ಯತೆ ನೀಡಲಾಗುವುದು. ಶಂಕುಸ್ಥಾಪನೆಗೊಂಡ ಸದರಿ ವಸತಿ ನಿಲಯ 5.ಕೋಟಿ ರೂ. ವೆಚ್ಚದಲ್ಲಿ 18 ಕೊಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು,150 ವಿದ್ಯಾರ್ಥಿಗಳು ವಸತಿ ಮಾಡಬಹುದಾಗಿದೆ. ಹೆಚ್ಚುವರಿಯಾಗಿ ಮತ್ತೊಂದು ವಸತಿ ನಿಲಯ ಮಂಜೂರು ಮಾಡಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜ್ ಹೇಳಿದರು.
ನಂತರ ಗಂಗಾ ಕಲ್ಯಾಣ ಯೋಜನೆಯಡಿ ಅಲ್ಪಸಂಖ್ಯಾತರ ವರ್ಗದ ಸಮುದಾಯಕ್ಕೆ ನೀಡಲಾಗುವ ಕೊಳವೆ ಬಾವಿಯ ಸಲಕರಣೆಗಳನ್ನು ಸಚಿವ ಎನ್.ಎಸ್ ಬೋಸರಾಜ್ ಅವರು ಫಲಾನುಭವಿಗಳಿಗೆ ವಿತರಿಸಿದರು.ಪಟ್ಟಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು 8 ಜನ ಫಲಾನುಭವಿಗಳಿಗೆ ಮೋಟಾರು, ಪಂಪ್ ಸೆಟ್, ಪೈಪು, ವೈಯರ್ ಸೇರಿದಂತೆ ಇತರ ಸಲಕರಣೆಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಸನಗೌಡ ತುರುವಿಹಾಳ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ್ ಪೋತದಾರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ