ಚನ್ನಮಲ್ಲ ಶ್ರೀಗಳ 68ನೇ ಜಾತ್ರಾ ಮಹೋತ್ಸವ : ಪುರಾಣ ಕಾರ್ಯಕ್ರಮ

ಮಸ್ಕಿ: ತಾಲೂಕಿನ ಮೆದಿಕಿನಾಳ ಗ್ರಾಮದ ಶ್ರೀ ಶ್ರೀ ಶ್ರೀ ಚನ್ನಮಲ್ಲ ಮಹಾ ಸ್ವಾಮೀಜಿಗಳ 68 ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಠದಲ್ಲಿ ಆರನೇ ದಿನದ ಪುರಾಣ ಪ್ರವಚನ ಕಾರ್ಯಕ್ರಮ ಜರಗಿತು.

ಶುಕ್ರವಾರ ಹೋಮ ಕಾರ್ಯಕ್ರಮ, ಮುಂಡರಗಿ ಮಠದ ಜಗದ್ಗುರು ಶ್ರೀ ಶ್ರೀ ಶ್ರೀ ಅನ್ನದಾನೀಶ್ವರ ಶ್ರೀಗಳಿಂದ ಶ್ರೀಶ್ರೀಶ್ರೀ ಚನ್ನಮಲ್ಲ ಮಹಾ ಸ್ವಾಮೀಜಿಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲ್ಲಿನ ಶಿಲೆ ಸ್ಥಾಪನೆ ಸಾಯಂಕಾಲ ಪಲ್ಲಕ್ಕಿ ಹೊತ್ತು, ಕಳಸ ಹೊತ್ತ ಮಹಿಳೆಯರು ಭಕ್ತಿ ಭಾವದಿಂದ ಶ್ರೀಮಠದ ಸುತ್ತು ಹಾಕಿದರು. 

ಸಾಯಂಕಾಲ 6 ಗಂಟೆ ಯಿಂದ ಆರಂಭವಾಗುವ ಪುರಾಣ ಪ್ರವಚನ ಕಾರ್ಯಕ್ರಮವನ್ನು ಪ್ರವಚನಕಾರರು ಹಾಗೂ ತಬಲ, ಸಂಗೀತಾ ಪೆಟ್ಟಿಗೆ ವಾದ್ಯಕರಿಂದ ನೆರೆದ ಗ್ರಾಮದ ಜನತೆಯ ಮನ ಮುಟ್ಟುವ ಬಗೆಯಲ್ಲಿ ಅರ್ಥಗರ್ಭಿತವಾಗಿ ನೆರವೇರಿಸಿಕೊಟ್ಟರು. 

ನಂತರ ಮೊದಲಿಗೆ ಶ್ರೀಗಳ ಪಾದ ಪೂಜೆ ಮಾಡಿ ಚನ್ನವೀರಪ್ಪ ತಂದೆ ಬಸಣ್ಣ ಭೂಮೋಜಿ ಸಾಕೀನ್ ಸಿಂಧನೂರು (ಮೆದಿಕಿನಾಳ) ಇವರ ಕುಟುಂಬದವರು ಮೊದಲನೇ ತುಲಾಭಾರ ಸೇವೆ ಸಲ್ಲಿದರೆ ವಿಶ್ವನಾಥ ತಂದೆ ವಿರೇಶಪ್ಪ ಚನ್ನಹಳ್ಳಿ ಸಾಕೀನ್ ಸಿಂಧನೂರು, ಇವರ ಕುಟುಂಬದ ಸರ್ವ ಸದಸ್ಯರು ಎರಡನೇ ತುಲಾಭಾರ ಸೇವೆ ಸಲ್ಲಿಸಿದರು.

ನಂತರ ಸರ್ವ ಭಕ್ತರು ಡಾಕ್ಟರ ಶ್ರೀ ಶ್ರೀ ಶ್ರೀ ಚನ್ನಮಲ್ಲ ಸ್ವಾಮೀಜಿ ರವರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡು ಅಂದಿನ ಪ್ರಸಾದ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆಯ ಕಾರ್ಯಕ್ರಮದಲ್ಲಿ 

ಶ್ರೀ ವೇದಮೂರ್ತಿ ಶಶಿಧರ ಶಾಸ್ತ್ರೀ ಡೋಣಿ ಪುರಾಣ ಪ್ರವಚನಕಾರರು, ಶಿವಲಿಂಗಯ್ಯ ಗವಾಯಿಗಳು ಬಿಳೇಬಾಳ ಸಂಗೀತ,ಷಣ್ಮುಖಯ್ಯ ಕಂಚಿನೆಗಳೂರು ವಾಯಲಿನ್, ಶ್ರೀ ಸಿದ್ದೇಶಕುಮಾರ ಲಿಂಗನ ಬಂಡಿ ತಬಲಾ ತಂಡ, ಸೇರಿದಂತೆ ಗ್ರಾಮದ ಸಾವಿರಾರು ಸಂಖ್ಯೆಯಲ್ಲಿನ ಸರ್ವ ಭಕ್ತ ಸಮೂಹದವರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ