ಮಸ್ಕಿ ಪಟ್ಟಣದ ಶ್ರೀ ಕಾಳಿಕಾ ದೇವಿ ದೇಗುಲದಲ್ಲಿ ದೀಪೋತ್ಸವ ಸಂಭ್ರಮ
ಮಸ್ಕಿ: ಕಡೇ ಕಾರ್ತಿಕ ಅಂಗವಾಗಿ ಪಟ್ಟಣದ ಶ್ರೀ ಕಾಳಿಕಾದೇವಿ ದೇಗುಲದಲ್ಲಿ ದೀಪೋತ್ಸವ ಕಾರ್ಯಕ್ರಮ ನೂರಾರು ಭಕ್ತರ ಸಮ್ಮುಖದಲ್ಲಿ ರವಿವಾರ ಅದ್ದೂರಿಯಾಗಿ ಜರುಗಿತು.
ಶ್ರೀ ಕಾಳಿಕಾದೇವಿ ದೇವಾಲಯದಲ್ಲಿ ಕಡೇ ಕಾರ್ತಿಕ ವಿಶೇಷ ಪೂಜೆಯು ವಿಶ್ವಕರ್ಮ ಸಮಾಜದವರು ಮತ್ತು ನಗರದ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಅರ್ಚಕರು ವಿಶೇಷವಾಗಿ ಪೂಜೆ ನೆರವೇರಿಸಿದರೆ, ಮಹಿಳೆಯರು ಕಡೇ ಕಾರ್ತಿಕ ಪೂಜೆ ಅಂಗವಾಗಿ ದೇಗುಲದ ಮುಂಭಾಗ ಮತ್ತು ಒಳ ಆವರಣದಲ್ಲಿ ರಂಗೋಲಿಯ ಚಿತ್ತಾರ ಬಿಡಿಸಿ ಸಾವಿರಾರು ದೀಪಗಳನ್ನು ಹಚ್ಚಿದರು. ಮುಖ್ಯದ್ವಾರದಲ್ಲಿ ಜ್ಯೋತಿ ಹಚ್ಚಿ ಭಕ್ತರನ್ನು ಸ್ವಾಗತಿಸಿದರು.
ವಿಶ್ವಕರ್ಮ ಸಮಾಜದ ಹಿರಿಯರಾದ ಜಗದೇವಪ್ಪ ಮಾತನಾಡಿ, ಕಾರ್ತಿಕ ಮಾಸದ ಅಂಗವಾಗಿ ಶ್ರೀ ದೇವಿಗೆ ವಿಶೇಷವಾಗಿ ಅಭಿಷೇಕ ಮತ್ತು ಪುಷ್ಪಲಂಕಾರಗಳಿಂದ ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸಿ ಮಳೆ, ಬೆಳೆ, ಶಾಂತಿ- ನೆಮ್ಮದಿ ನೆಲೆಸಿ, ಜನತೆಗೆ ಆರೋಗ್ಯ ಆಯಸ್ಸು ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದವರು ಅಧ್ಯಕ್ಷರು ,ಪದಾಧಿಕಾರಿಗಳು ಹಾಗೂ ವಿಶ್ವಕರ್ಮ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ವಿಶ್ವಕರ್ಮ ಯುವ ಘಟಕದ ಅಧ್ಯಕ್ಷರು ,ಪದಾಧಿಕಾರಿಗಳು ಮತ್ತು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು
ವಿಶ್ವಕರ್ಮ ಸಮಾಜ ಮಹಿಳಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮಾಜದವರು ಮತ್ತು ಮಸ್ಕಿ ಪಟ್ಟಣದ ಭಕ್ತರು ಭಾಗಿಯಾಗಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ